More

    ಬಡವರ ಉದ್ಧಾರ ಸಹಕಾರಿ ಸಂಸ್ಥೆಗಳ ಧ್ಯೇಯವಾಗಲಿ

    ಮುದ್ದೇಬಿಹಾಳ : ರಾಜಕೀಯ ನಾಯಕರಿಗೆ ಕೊಡುವ ಗೌರವವನ್ನು ಸಮಾಜದಲ್ಲಿ ಕನಿಷ್ಟ ಸ್ಥಾನದಲ್ಲಿರುವ ಬಡವರಿಗೆ ನೀಡಿ ಅವರನ್ನು ಮೇಲೆತ್ತುವ ಕೆಲಸವನ್ನು ಆರ್ಥಿಕ ಸಂಸ್ಥೆಗಳು ಮಾಡಬೇಕು ಎಂದು ಮಾಜಿ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಹೇಳಿದರು.

    ತಾಲೂಕಿನ ಹಿರೇಮುರಾಳದಲ್ಲಿ ಭಾನುವಾರ ಜಾಮೀಯಾ ಮಸ್ಜಿದ್, ಈದ್ಗಾ ಹಾಗೂ ಕಲಾಂ ಅಲ್ಪಸಂಖ್ಯಾತರ ಪತ್ತಿನ ಸಹಕಾರಿ ಸಂಘದ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.

    ಕಾಯಕದ ಮಹತ್ವವನ್ನು ಇಂತಹ ಕಾರ್ಯಕ್ರಮಗಳ ಮೂಲಕ ಸಾರಬೇಕು. ಸಮಾಜದಲ್ಲಿ ಮೇಲು ಕೀಳು ಭಾವನೆ ತೊಡೆದು ಹಾಕಲು ಶ್ರಮಿಸಬೇಕು ಎಂದರು.

    ವಿಧಾನಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಇಬ್ರಾಹಿಂ ಸುತಾರ, ಎಪಿಎಂಸಿ ಸದಸ್ಯ ವೈ.ಎಚ್.ವಿಜಯಕರ್, ಉಸ್ಮಾನಗನಿ ಹುಮನಾಬಾದ, ಹಿರೂರಿನ ಜಯಸಿದ್ಧೇಶ್ವರ ಶ್ರೀಗಳು ಮಾತನಾಡಿದರು. ವಿಜಯಪುರದ ತನ್ವೀರಹಾಸ್ಮೀಪೀರಾ, ಅಂಕಲಿಮಠದ ಕೀರೇಶ್ವರ ಶ್ರೀ, ಸಂಘದ ಅಧ್ಯಕ್ಷ ಅಕ್ಬರಸಾಬ ಮುಲ್ಲಾ, ಡಾ.ಎ.ಎಂ.ಮುಲ್ಲಾ, ಎಪಿಎಂಸಿ ಅಧ್ಯಕ್ಷ ಗುರು ತಾರನಾಳ, ಕುರುಬರ ಸಂಘದ ತಾಲೂಕಾಧ್ಯಕ್ಷ ಎಂ.ಎನ್.ಮದರಿ, ಗಣ್ಯರಾದ ಪ್ರಸನ್ನ ಜಾಗೀರದಾರ, ಕಸಾಪ ತಾಲೂಕು ಅಧ್ಯಕ್ಷ ಎಂ.ಬಿ.ನಾವದಗಿ, ಗುತ್ತಿಗೆದಾರ ಮುತ್ತಿನಶೆಟ್ಟಿ ಗೂಳಿ, ಕಾಳಗಿ ಗ್ರಾಪಂ ಅಧ್ಯಕ್ಷ ಜಾವೇದ ಇನಾಮದಾರ, ಹುಸೇನ್ ಮುಲ್ಲಾ, ಮುಖಂಡರಾದ ನಿಂಗಣ್ಣ ರಾಮೋಡಗಿ, ಮಲ್ಲನಗೌಡ ಪಾಟೀಲ, ಯುವ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಪುಂಡಲೀಕ ಮುರಾಳ, ರಷಿದ್ ಮುಲ್ಲಾ, ಅಲ್ಲಾಭಕ್ಷ ನಾಯ್ಕೋಡಿ, ಶಿವಪ್ಪ ತಾತರೆಡ್ಡಿ, ಕೆ.ಬಿ.ಡೋಣಿ, ಎ.ಎಸ್.ಖಾಜಿ, ಅಲ್ಲಾಭಕ್ಷ್ ಢವಳಗಿ ಮತ್ತಿತರರು ಇದ್ದರು.

    ಅಲ್ಲಾಭಕ್ಷ ಖಾಜಿ ಖುರಾನ್ ಪಠಿಸಿದರು. ಅಬ್ರಾಹಂ ಖಾಜಿ ನಾಥ ಹಾಡಿದರು. ಜೆ.ಡಿ.ಮುಲ್ಲಾ ಸ್ವಾಗತಿಸಿದರು. ಶ್ರೀಶೈಲ ಹೂಗಾರ ನಿರೂಪಿಸಿದರು. ಅಕ್ಬರ್ ಮುಲ್ಲಾ ವಂದಿಸಿದರು.

    ಸಮಾಜದಲ್ಲಿ ಧರ್ಮ ಧರ್ಮಗಳ ಮಧ್ಯೆ ಜಗಳ ಹಚ್ಚುವ ಕೆಲಸ ನಡೆದಿದೆ. ತೀವ್ರ ಆರ್ಥಿಕ ಹಿಂಜರಿತದ ಮಧ್ಯೆಯೂ ಗ್ರಾಮೀಣ ಪ್ರದೇಶದಲ್ಲಿ ಸ್ಥಾಪನೆಗೊಳ್ಳುತ್ತಿರುವ ಸಹಕಾರಿ ಸಂಘ ಬಡವರ ಏಳಿಗೆಗೆೆ ಶ್ರಮಿಸಬೇಕು.
    ಸುನೀಲಗೌಡ ಪಾಟೀಲ, ವಿಧಾನಪರಿಷತ್ ಸದಸ್ಯ


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts