More

    ಕೋವಿಡ್ ಲಸಿಕೆ ಬಗ್ಗೆ ಕಾಂಗ್ರೆಸ್ ಅಪಪ್ರಚಾರ ಮಾಡಿಲ್ಲ

    ಮುದ್ದೇಬಿಹಾಳ: ಯಾವುದೇ ಪರೀಕ್ಷೆಗೊಳಪಡಿಸದೆ ಮೂರೇ ತಿಂಗಳಲ್ಲಿ ಕರೊನಾಗೆ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದ್ದರಿಂದ ಅದನ್ನು ಮೋದಿ ವ್ಯಾಕ್ಸಿನ್ ಎಂದು ಪಕ್ಷದ ನಾಯಕರು ವ್ಯಂಗ್ಯವಾಡಿದ್ದಾರೆ ಹೊರತು ಅದು ಅಪಪ್ರಚಾರವಲ್ಲ ಎಂದು ಮಾಜಿ ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಹೇಳಿದರು.

    ಪಟ್ಟಣದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಸೋಮವಾರ ದೇವಿಕಾ ಸುಬ್ಬಾರಾವ್ ಫೌಂಡೇಷನ್ ನೇತೃತ್ವದಲ್ಲಿ ಸರ್ಕಾರಿ ಆಸ್ಪತ್ರೆಗೆ ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳನ್ನು ವಿತರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

    ಪ್ರಧಾನಿ ಮೋದಿ ಅವರು ದೊಡ್ಡ ದೊಡ್ಡ ಭಾಷಣ ಮಾಡುತ್ತಾರೆ. ಇವತ್ತು ಪೆಟ್ರೋಲ್, ಡಿಸೇಲ್ ಬೆಲೆ ಗಗನಕ್ಕೇರಿದೆ. ಜಿಂದಾಲ್‌ಗೆ ಭೂಮಿ ಪರಭಾರೆ ಮಾಡುತ್ತೀರಿ. ನಿಮಗೆ ನಾಚಿಕೆಯಾಗುವುದಿಲ್ಲವೇ ? ಎಂದು ಪ್ರಶ್ನಿಸಿದರು. ವಿದೇಶದ ಲಸಿಕೆ ಸಿದ್ಧವಾಗಿದ್ದರೂ ಅದನ್ನು ತರಲಾಗಲಿಲ್ಲ ಎಂದು ಹೇಳಿದರು.

    ಫೌಂಡೇಷನ್ ಮುಖ್ಯಸ್ಥೆ ಪಲ್ಲವಿ ನಾಡಗೌಡ ಮಾತನಾಡಿ, ನಮ್ಮ ಚಿಕ್ಕಪ್ಪ ಈಚೆಗೆ ಕರೊನಾದಿಂದ ಅಸುನೀಗಿದರು. ಅವರಿಗೆ ಆಕ್ಸಿಜನ್ ಸಮರ್ಪಕ ವೇಳೆಯಲ್ಲಿ ದೊರೆಯಲಿಲ್ಲ.ಬಡವರಿಗೂ ಈ ಸಂಕಷ್ಟ ಬರಬಾರದು ಎಂಬ ಉದ್ದೇಶದಿಂದ ನಮ್ಮ ಫೌಂಡೇಷನ್ ನಿಂದ ಆಸ್ಪತ್ರೆಗಳಿಗೆ ಆಕ್ಸಿಜನ್ ಕಾನ್ಸ್‌ನಟ್ರೇಟರ್‌ಗಳನ್ನು ಕೊಡುತ್ತಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಸ್ಪಷ್ಟಪಡಿಸಿದರು.

    ಡಾ. ಸತೀಶ ತಿವಾರಿ, ಡಾ. ಅನಿಲಕುಮಾರ ಶೇಗುಣಸಿ, ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ರಾಹುಲ್ ನಾಡಗೌಡ, ಚಿನ್ನು ನಾಡಗೌಡ, ನಿಯತಿ ನಾಡಗೌಡ, ಪೃಥ್ವಿರಾಜ್ ನಾಡಗೌಡ, ಪುರಸಭೆ ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ, ಗುರು ತಾರನಾಳ, ವೈ.ಎಚ್. ವಿಜಯಕರ್, ಸಚಿನ ಪಾಟೀಲ, ಸದ್ದಾಂ ಕುಂಟೋಜಿ, ರಫೀಕ ಶಿರೋಳ ಹಾಗೂ ಪುರಸಭೆ ಸದಸ್ಯರು, ಕಾಂಗ್ರೆಸ್ ಕಾರ್ಯಕರ್ತರು ಇದ್ದರು.

    ಭಾವುಕರಾದ ನಾಡಗೌಡ
    ಇತ್ತೀಚೆಗೆ ತಮ್ಮ ಸಹೋದರ ಲಿಂಗರಾಜ ನಾಡಗೌಡ ಕರೊನಾ ಸೋಂಕಿಗೆ ಬಲಿಯಾದದ್ದನ್ನು ಮಾಜಿ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ನೆನೆಸಿಕೊಂಡು ಭಾವುಕರಾದರು. ಕರೊನಾ ಕಾಯಿಲೆ ಗಂಭೀರವಾಗಿದೆ. ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಎಂದು ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts