More

    ವಿಪ ಸದಸ್ಯ ಸಿ.ಎಂ.ಇಬ್ರಾಹಿಂ ಬಹಿರಂಗ ಚರ್ಚೆಗೆ ಬರಲಿ

    ಮುದ್ದೇಬಿಹಾಳ: ಪೌರತ್ವ ಕಾಯ್ದೆಯಿಂದ ಯಾರಿಗೆ ಏನು ತೊಂದರೆ ಆಗಲಿದೆ ಎಂಬ ಬಗ್ಗೆ ಬಹಿರಂಗ ಚರ್ಚೆ ನಡೆಸಲು ನಾವು ಸಿದ್ಧರಿದ್ದು, ಆ ಕಾಯ್ದೆಯನ್ನು ಸರಿಯಾಗಿ ತಿಳಿದುಕೊಳ್ಳದೇ ಅಪಪ್ರಚಾರ ನಡೆಸುತ್ತಿರುವ ಕೇಂದ್ರದ ಮಾಜಿ ಸಚಿವ, ವಿಪ ಸದಸ್ಯ ಸಿ.ಎಂ.ಇಬ್ರಾಹಿಂ ಅವರು ಬಹಿರಂಗ ಚರ್ಚೆಗೆ ಬರಲಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಸವಾಲೆಸೆದಿದ್ದಾರೆ.
    ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸುವ ಮುನ್ನ ಆರು ತಿಂಗಳು ಆಕ್ಷೇಪಣೆಗೆ ಕಾಲಾವಕಾಶ ಇರುತ್ತದೆ. ಈ ಕಾಯ್ದೆ ನಿಮ್ಮದೇ ಸರ್ಕಾರದ ಪ್ರಧಾನ ಮಂತ್ರಿಯಾಗಿದ್ದ ಜವಹರಲಾಲ್ ನೆಹರು ಅವರ ಕಾಲದಲ್ಲಿಯೇ ಮಾಡಿಕೊಂಡಿದ್ದು ಎಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
    ದೇಶದಲ್ಲಿರುವ ಶಾಂತಿ ವಾತಾವರಣ ಕದಡಲು ಪ್ರಚೋದನಕಾರಿ ಭಾಷಣ ಮಾಡುತ್ತಿದ್ದೀರಿ. ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಚರ್ಚೆ ನಡೆಸಿದ್ದರೆ ಅದಕ್ಕೊಂದು ಅರ್ಥ ಇರುತ್ತದೆ. ಶರಣರ ನಾಡಿನಿಂದ ಬಂದವರಿಗೆ ವಚನಗಳನ್ನು ಯಾವ ಸಂದರ್ಭದಲ್ಲಿ ಎಲ್ಲಿ ಬಳಸಬೇಕು ಎಂಬುದೂ ನಿಮಗೆ ಗೊತ್ತಿಲ್ಲ. ವಚನಗಳನ್ನು ವ್ಯಂಗ್ಯೋಕ್ತಿಳನ್ನಾಗಿ ಬಳಸುತ್ತಿದ್ದೀರಿ. ವಚನಗಳು ಇರುವುದು ಹಾಸ್ಯ ಮಾಡಲು ಅಲ್ಲ ಎಂದು ಹೇಳಿದರು.
    ಸಂವಿಧಾನ 130 ಕೋಟಿ ಜನರಿಗೂ ಅನ್ವಯಿಸುತ್ತದೆ. ಅದನ್ನು ಕಿತ್ತು ಹಾಕಲು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ. ಕೇವಲ ಚಪ್ಪಾಳೆ ಗಿಟ್ಟಿಸಿಕೊಳ್ಳಲು ಉಡಾೆಯ ಮಾತುಗಳನ್ನಾಡುತ್ತಿರುವುದು ನಿಮ್ಮ ಸ್ಥಾನಕ್ಕೆ ಶೋಭೆಯಲ್ಲ ಎಂದು ಹೇಳಿದರು.
    ಕಾಂಗ್ರೆಸ್ ಪಕ್ಷ ನಿಮ್ಮನ್ನು ಯಾವ ರೀತಿ ನಡೆಸಿಕೊಳ್ಳುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ನಿಮಗೆ ನಿಮ್ಮ ಪಕ್ಷದಲ್ಲಿಯೇ ಮಾನ್ಯತೆ ಇಲ್ಲ. ಪ್ರಧಾನ ಮಂತ್ರಿಗಳು 6 ವರ್ಷದ ಅಡಳಿತದಲ್ಲಿ 130 ಕೋಟಿ ಜನರನ್ನು ಗಮನದಲ್ಲಿರಿಸಿಕೊಂಡು ಆಡಳಿತ ಮಾಡುತ್ತಿದ್ದಾರೆ. ಬಿಜೆಪಿ ಸಂವಿಧಾನವನ್ನು ದೇಶದ ಧರ್ಮಗ್ರಂಥ ಎಂದು ಒಪ್ಪಿಕೊಂಡಿದೆ ಎಂದರು.
    ದಲಿತರ ಅನ್ಯಾಯ ಯಾವ ರೀತಿ ಆಗುತ್ತದೆ ಎಂಬುದನ್ನು ತಿಳಿಸಬೇಕು. ಉಡಾೆ ಮಾತುಗಳನ್ನಾಡುತ್ತಿರುವುದರಿಂದ ಸಮಾಜದಲ್ಲಿ ಅಶಾಂತಿ ವಾತಾವರಣ ಸೃಷ್ಟಿಸಲು ನೋಡುತ್ತಿದ್ದೀರಿ ಎಂದು ಟೀಕಿಸಿದರು. ವೋಟ್‌ಬ್ಯಾಂಕ್ ಪಾಲಿಟಿಕ್ಸ್ ಮಾಡುತ್ತ ಬರುತ್ತಲೇ ಇರುವುದರಿಂದ ಎರಡನೇ ಅವಧಿಗೂ ಅಧಿಕೃತ ವಿರೋಧ ಪಕ್ಷ ಸ್ಥಾನಮಾನ ಸಿಕ್ಕಿಲ್ಲ ಎಂದು ಹೇಳಿದರು.

    ಸುದ್ದಿಗೋಷ್ಠಿಯಲ್ಲಿ ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಮುಖಂಡರಾದ ಪ್ರಭು ಕಡಿ, ನಗರ ಘಟಕದ ಅಧ್ಯಕ್ಷ ರಾಜು ಬಳ್ಳೊಳ್ಳಿ, ತಾಲೂಕಾಧ್ಯಕ್ಷ ಪರಶುರಾಮ ಪವಾರ, ಕಾಶೀಬಾಯಿ ರಾಂಪೂರ, ಶರಣು ಬೂದಿಹಾಳಮಠ, ರಾಜಶೇಖರ ಹೊಳಿ, ಮಹಾಂತೇಶ ಬೂದಿಹಾಳಮಠ, ಮನೋಹರ ತುಪ್ಪದ, ವಿಜಯಕುಮಾರ ಬಡಿಗೇರ, ಪುರಸಭೆ ಸದಸ್ಯ ಅಶೋಕ ವನಹಳ್ಳಿ, ಉದಯ ರಾಯಚೂರ, ಪುನೀತ ಹಿಪ್ಪರಗಿ, ಬಸ್ಸು ಸರೂರ, ಹಣಮಂತ ನಲವಡೆ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts