More

    ಮುದ್ದೇಬಿಹಾಳ ಕ್ಷೇತ್ರದಲ್ಲಿ 123.5 ಮಿಮೀ ಮಳೆ

    ಮುದ್ದೇಬಿಹಾಳ: ಮತಕ್ಷೇತ್ರದ ವ್ಯಾಪ್ತಿಯಲ್ಲಿ ಗುರುವಾರ ಬೆಳಗಿನ ಜಾವದವರೆಗೆ ಒಂದೇ ದಿನ 123.5 ಮಿಮೀ ಮಳೆ ಆಗಿದ್ದು, ಭಾರೀ ಮಳೆ ಹಿನ್ನೆಲೆಯಲ್ಲಿ ಮುದ್ದೇಬಿಹಾಳ ಪಟ್ಟಣದ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಎರಡ್ಮೂರು ಅಂಗಡಿಗಳಿಗೆ ಹಾಗೂ ಇಂದಿರಾನಗರ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿದೆ.
    ಪಟ್ಟಣದ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ರಾಮದೇವ ಕಿರಾಣಿ ಸ್ಟೋರ್ಸ್, ಬಾಲಾಜಿ ಕಿರಾಣಿ, ಮಾರುತಿ ಮೆಟಲ್ಸ್ ಸ್ಟೋರ್, ಬಸವ ಸ್ವೀಟ್ ಮಾರ್ಟ್ ಅಂಗಡಿಗಳಲ್ಲಿ ಮಳೆ ನೀರು ನುಗ್ಗಿದೆ. ಅಲ್ಲದೆ, ಹುಡ್ಕೋಗೆ ತೆರಳುವ ಕಿತ್ತೂರ ರಾಣಿ ಚನ್ನಮ್ಮ ಮಹಾದ್ವಾರದ ಬಳಿ ಇರುವ ಡಬ್ಬಾ ಅಂಗಡಿಗಳಲ್ಲೂ ನೀರು ನುಗ್ಗಿದ್ದು ಬುಕ್ ಸ್ಟಾಲ್, ಔಷಧ ಅಂಗಡಿ, ಝರಾಕ್ಸ್ ಅಂಗಡಿಗಳಿಗೆ ನೀರು ನುಗ್ಗಿ ಲಕ್ಷಾಂತರ ರೂ. ನಷ್ಟವಾಗಿದೆ.
    ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಒಂದು ರಸ್ತೆಯ ಹಂಪ್‌ನಿಂದ ಪ್ರವಾಹದ ರೀತಿಯಲ್ಲಿ ಮಳೆ ನೀರು ತಗ್ಗು ಪ್ರದೇಶದಲ್ಲಿರುವ ಅಂಗಡಿಗಳಿಗೆ ನುಗ್ಗಿದೆ. ಅಗ್ನಿಶಾಮಕ ಇಲಾಖೆ ಅಧಿಕಾರಿ ಪ್ರಮೋದ ಸುಂಕದ ನೇತೃತ್ವದಲ್ಲಿ ಸಿಬ್ಬಂದಿ ಬೆಳಗಿನ ಜಾವ ಮಳೆ ನೀರು ಹೊರಹಾಕಲು ಕಾರ್ಯಾಚರಣೆ ನಡೆಸಿದ್ದಾರೆ. ತಾಲೂಕಿನ ನಾಲತವಾಡ ಹೆಸ್ಕಾಂ ಉಪ ಶಾಖೆಯಡಿಯಲ್ಲಿ ಬರುವ ಡೊಂಕಮಡು, ಖ್ಯಾತನಡೋಣಿ, ಅಡವಿ ಸೋಮನಾಳ, ಚವನಬಾವಿ, ಅಡವಿ ಹುಲಬಾಳ ತಾಂಡಾ ಮತ್ತಿತರೆಡೆಗಳಲ್ಲಿ ವಿದ್ಯುತ್ ಕಂಬ ಧರೆಗುರುಳಿವೆ. ಆದರೂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಶಾಖಾಧಿಕಾರಿ ಎಂ.ಎಸ್. ತೆಗ್ಗಿನಮಠ ಕ್ರಮ ಕೈಗೊಂಡಿದ್ದಾರೆ. ಪುರಸಭೆ ವ್ಯಾಪ್ತಿಯಲ್ಲಿ ಅಂಗಡಿಗಳಿಗೆ ಮಳೆ ನೀರು ನುಗ್ಗಿ ಹಾನಿಯಾಗಿರುವ ಕುರಿತಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಮುಖ್ಯಾಧಿಕಾರಿ ಗೋಪಾಲ ಕಾಸೆ ತಿಳಿಸಿದ್ದಾರೆ.
    ಅಂಗಡಿಕಾರ ಶ್ರೀಶೈಲ ದೊಡಮನಿ ಸುದ್ದಿಗಾರರೊಂದಿಗೆ ಮಾತನಾಡಿ, ಭಾರೀ ಮಳೆಯಾದರೆ ಪಟ್ಟಣದ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಹಂಪ್‌ನಿಂದ ನೀರು ನೇರವಾಗಿ ಹರಿದು ಹೋಗದೆ ಅಕ್ಕಪಕ್ಕದ ತಗ್ಗುಪ್ರದೇಶಗಳಿಗೆ ನುಗ್ಗುತ್ತದೆ. ಇಲ್ಲಿ ಹಲವಾರು ವ್ಯಾಪಾರದ ಅಂಗಡಿಗಳಿದ್ದು ನೀರು ನುಗ್ಗಿದೆ ಎಂದು ತಿಳಿಸಿದ್ದಾರೆ. ಕೂಡಲೇ ಇದಕ್ಕೆ ಪರ್ಯಾಯವಾಗಿ ಹಂಪ್ ತೆರವುಗೊಳಿಸಬೇಕು. ಅಂಗಡಿಕಾರರಿಗೆ ನಷ್ಟ ತುಂಬಿಕೊಡಬೇಕು ಎಂದು ಮನವಿ ಮಾಡಿದ್ದಾರೆ. ಕ್ಷೇತ್ರದಲ್ಲಿ ಸುರಿದ ಮಳೆಯ ವಿವರವನ್ನು ಕೃಷಿ ಇಲಾಖೆಯ ಅಧಿಕಾರಿಗಳು ನೀಡಿದ್ದು ಮುದ್ದೇಬಿಹಾಳದಲ್ಲಿ 48.05, ನಾಲತವಾಡದಲ್ಲಿ 20.8 ತಾಳಿಕೋಟೆಯಲ್ಲಿ 45 ಮೀ.ಮಿ ಢವಳಗಿಯಲ್ಲಿ 10.4 ಮಿ.ಮೀ. ಮಳೆ ಸುರಿದಿದೆ ಎಂದು ತಿಳಿಸಿದ್ದಾರೆ.

    ಮುದ್ದೇಬಿಹಾಳ ಕ್ಷೇತ್ರದಲ್ಲಿ 123.5 ಮಿಮೀ ಮಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts