More

    ಲಾಕ್‌ಡೌನ್‌ನಲ್ಲಿ ಉಚಿತ ಊಟದ ವ್ಯವಸ್ಥೆ

    ಮುದ್ದೇಬಿಹಾಳ: ಕೋವಿಡ್ ನಿಯಂತ್ರಣಕ್ಕೆ ಘೋಷಣೆಯಾಗಿರುವ ಲಾಕ್‌ಡೌನ್ ಜೂ.7ರ ವರೆಗೆ ಇದ್ದು ಅಲ್ಲಿಯವರೆಗೆ ಉಚಿತವಾಗಿ ಊಟ ಪೂರೈಸುವ ಕಾರ್ಯ ಮಾಡಲಾಗುತ್ತದೆ. ಸಮಾಜಮುಖಿ ಕೆಲಸ ಯಾರೇ ಮಾಡಲಿ ಅದನ್ನು ಸ್ವಾಗತಿಸುವ ಕಾರ್ಯ ಆಗಬೇಕು ಎಂದು ಜಿ.ಪಂ. ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಹೇಳಿದರು.

    ತಾಲೂಕಿನ ಬಸರಕೋಡ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಸೋಮವಾರ ಸಾಧು-ಸಂತರಿಗೆ ಊಟದ ವ್ಯವಸ್ಥೆ ಕಲ್ಪಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಸಾಮಾಜಿಕ ಸೇವೆಗೆ ನಾನು ಸ್ವಲ್ಪ ಮಾತ್ರ ಆರ್ಥಿಕ ನೆರವು ನೀಡಿದ್ದೇನೆ. ಇನ್ನುಳಿದ ವೆಚ್ಚವನ್ನು ನಮ್ಮ ಸ್ನೇಹಿತರು, ಮುಖಂಡರಾದ ಆರ್.ಎಸ್. ಪಾಟೀಲರು ಸೇರಿ ಈ ಕಾರ್ಯ ಮಾಡುತ್ತಿದ್ದಾರೆ ಎಂದರು.

    ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ್ ಕೂಚಬಾಳ, ಬಿಜೆಪಿ ಮುಖಂಡರಾದ ಎಂ.ಡಿ. ಕುಂಬಾರ, ಗ್ರಾಪಂ ಸದಸ್ಯ ಸುರೇಶಗೌಡ ಪಾಟೀಲ, ತಾಪಂ ಮಾಜಿ ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ, ಶ್ರೀಶೈಲ ಸೂಳಿಭಾವಿ, ಶರಣಪ್ಪ ಹೊಳಿ, ಬಸವರಾಜ ಚಿತ್ತರಗಿ, ಮಂಜುನಾಥ ರತ್ನಾಕರ, ಮಹೇಶ್ ಬಿಸನಾಳ, ಮಲ್ಲಪ್ಪ ಹೆಗಡೆ, ಯಲ್ಲನಗೌಡ ಮಂಕಣಿ, ಬಸವರಾಜ(ಶಿವು) ದಡ್ಡಿ, ಪ್ರಕಾಶ ಹೂಗಾರ, ಮಹಾಂತೇಶ ಹಡಪದ ಇತರರಿದ್ದರು.

    ಗರ್ಭಿಣಿಯರಿಗೂ ಉಚಿತ ಊಟ
    ತಾಲೂಕಿನ ಕಾಳಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಬಳಗದ ಪದಾಧಿಕಾರಿಗಳು ಆಸ್ಪತ್ರೆಯಲ್ಲಿದ್ದ ಗರ್ಭಿಣಿಯರು, ಬಾಣಂತಿಯರಿಗೆ ಊಟದ ಪೂರೈಕೆ ಮಾಡಿದರು. ವೈದ್ಯ ಡಾ. ರಂಗನಾಥ, ಮುಖಂಡರಾದ ದೇವೇಂದ್ರ ವಾಲಿಕಾರ, ಕಾಳಗಿ ಗ್ರಾಮದ ಯುವ ಮುಖಂಡರಾದ ಬಸಯ್ಯ ಹಿರೇಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts