More

    ಐದೇ ತಾಸಿನಲ್ಲಿ ಆರು ಎಕರೆ ಜೋಳದ ತೆನೆ ಕಣಕಿ ಗೂಡು

    ಮುದ್ದೇಬಿಹಾಳ: ಆರು ಎಕರೆ ಹೊಲದಲ್ಲಿ ರಾಶಿಗೆಂದು ಕಿತ್ತು ಹಾಕಿದ್ದ ಜೋಳದ ತೆನೆಯ ಕಣಕಿಯನ್ನು ಐದೇ ತಾಸಿನಲ್ಲಿ ಒಬ್ಬನೇ ಯುವಕ ಒಂದೇ ಕಡೆಗೆ ಗೂಡು ಹಾಕುವ ಮೂಲಕ ದಾಖಲೆ ನಿರ್ಮಿಸಿ ರೈತಾಪಿ ವರ್ಗದ ಪ್ರಶಂಸೆಗೆ ಪಾತ್ರನಾಗಿದ್ದಾನೆ.
    ಪಟ್ಟಣದ ನಾಲತವಾಡ ರಸ್ತೆಯಲ್ಲಿರುವ ಈರಪ್ಪ ರೇವಡಿ ಎಂಬುವರ ಹೊಲವನ್ನು ಪಾಲಿಗೆ ತೆಗೆದುಕೊಂಡಿರುವ ಮೇಲಿನಮನಿ ಕುಟುಂಬದವರು ಜೋಳ ಬಿತ್ತನೆ ಮಾಡಿದ್ದರು. ತೆನೆ ರಾಶಿಗೆ ಬಂದ ಹಿನ್ನೆಲೆ ಕಿತ್ತು ಅಲ್ಲಲ್ಲಿ ಗುಂಪು ಹಾಕಿದ್ದರು. ಬುಧವಾರ ಮೇಲಿನಮನಿ ಮನೆತನದ ಯುವಕ ಮುತ್ತಪ್ಪ ಬಸಪ್ಪ ಮೇಲಿನಮನಿ ಬೆಳಗ್ಗೆ 5 ಗಂಟೆಗೆ ಜೋಳದ ಕಣಕಿಯನ್ನು ಒಂದೆಡೆ ಗೂಡು ಸೇರಿಸುವ ಕೆಲಸಕ್ಕೆ ಕೈ ಹಾಕಿ 10 ಗಂಟೆ ವೇಳೆಗೆ ಇಡೀ ಜೋಳದ ತೆನೆಯ ಕಣಕಿಯನ್ನು ಗೂಡು ಹಾಕುವ ಮೂಲಕ ಹಿರಿಯರಿಂದ ಶಹಬ್ಬಾಸ್‌ಗಿರಿ ಪಡೆದುಕೊಂಡಿದ್ದಾನೆ. 6-8 ಜನ ಕೂಲಿಕಾರ್ಮಿಕರು ಒಂದು ದಿನದಲ್ಲಿ ಮಾಡುವ ಕೆಲಸವನ್ನು ಐದೇ ತಾಸಿನಲ್ಲಿ ಮಾಡಿರುವ ಯುವಕನ ಸಾಧನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
    ವಿಷಯ ತಿಳಿದ ಹೊಲದ ಮಾಲೀಕ ಈರಪ್ಪ ರೇವಡಿ, ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ, ಯಲ್ಲಪ್ಪ ನಾಯ್ಕಮಕ್ಕಳ, ಮಾಜಿ ಸದಸ್ಯ ಸಂತೋಷ ನಾಯ್ಕೋಡಿ, ಮುಖಂಡ ರವಿ ಜಗಲಿ, ಹಣಮಂತ ಮೇಲಿನಮನಿ ಮತ್ತಿತರರು ಯುವಕನ ಸಾಧನೆ ಕೊಂಡಾಡಿ ಸನ್ಮಾನಿಸಿದರು.
    ಸಂಗಪ್ಪ ನಡಗೇರಿ, ಸಂಗಪ್ಪ ಮೇಲಿನಮನಿ, ಪೂಜಪ್ಪ ಪೂಜಾರಿ, ನಿಂಗಪ್ಪ ಪೂಜಾರಿ, ಗುರುರಾಜ ಮದರಿ, ಬಸಪ್ಪ ಮೇಲಿನಮನಿ, ರೇವಣೆಪ್ಪ ಮೇಲಿನಮನಿ, ಯಮನೂರಿ ಮೇಲಿನಮನಿ ಮತ್ತಿತರಿದ್ದರು. ಸಾಧನೆಗೈದ ಯುವಕನನ್ನು ಅಭಿಮಾನಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಗುಲಾಲು ಹಾಕಿ ಮೆರವಣಿಗೆ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts