More

    ಅಂಗದಾನ ಸರ್ವಶ್ರೇಷ್ಠ ದಾನ

    ಮುದ್ದೇಬಿಹಾಳ: ಅಂಗಾಂಗ ದಾನ ಸರ್ವಶ್ರೇಷ್ಠ ದಾನವಾಗಿದೆ. ಪ್ರತಿಯೊಬ್ಬರೂ ಇನ್ನೊಂದು ಜೀವ ಉಳಿಸಲು ಅಂಗ ದಾನ ಮಾಡಲು ಮುಂದೆ ಬರುವ ಮನಸ್ಸು ಮಾಡಬೇಕು ಎಂದು ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ ಹೇಳಿದರು.
    ಪಟ್ಟಣದ ಹುಡ್ಕೋದ ಮಾರುತೇಶ್ವರ ದೇವಸ್ಥಾನದಲ್ಲಿ ವಿಶ್ವ ಅಂಗಾಂಗ ದಿನಾಚರಣೆ ಕಾರ್ಯಕ್ರಮದ ನಿಮಿತ್ತ ಕಿಡ್ನಿ ದಾನಿ ಕುಸುಮಾ ಮಠ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ಅಂಗಾಂಗ ದಾನದಿಂದ ನಮ್ಮ ಆರೋಗ್ಯದಲ್ಲಿ ಏರುಪೇರಾಗುತ್ತದೆ ಎಂಬ ಭಯದಿಂದ ಹೊರಬರಬೇಕು. ಮನುಷ್ಯನ ದೇಹದಲ್ಲಿರುವ ಎರಡು ಕಿಡ್ನಿಗಳಲ್ಲಿ ಒಂದನ್ನು ದಾನ ಮಾಡಿದರೂ ಇನ್ನೊಂದರಿಂದ ಜೀವನ ನಡೆಸಬಹುದು. ಪುರಸಭೆ ಮಾಜಿ ಸದಸ್ಯ, ಕೆಯುಸಿ ಬ್ಯಾಂಕ್ ನಿರ್ದೇಶಕ ಶರಣು ಬೂದಿಹಾಳಮಠ ಅವರಿಗೆ ತಮ್ಮ ಅತ್ತೆಯವರ ಕಿಡ್ನಿ ದಾನವಾಗಿ ಪಡೆದುಕೊಂಡು ಇಂದು ಎಲ್ಲರಂತೆ ಆರೋಗ್ಯವಂತ ಜೀವನ ನಡೆಸಿದ್ದಾರೆ ಎಂದು ಹೇಳಿದರು.
    ಪುರಸಭೆ ಸದಸ್ಯ ಅಶೋಕ ವನಹಳ್ಳಿ, ವಿಕ್ರಂ ಓಸ್ವಾಲ್, ಬಲಭೀಮ ನಾಯ್ಕಮಕ್ಕಳ, ಮಹಾಂತೇಶ ಮಡಿವಾಳರ, ಶರಣು ಪಡದಾಳಿ, ವೀರೇಶ ಹಿರೇಮಠ, ದೀಪಕ ಕಲಾಲ, ಸುನೀಲ ಹಡಲಗೇರಿ, ಮಹಾಂತೇಶ ಬೂದಿಹಾಳಮಠ, ಶ್ರೀದೇವಿ ಬೂದಿಹಾಳಮಠ, ಸಂತೋಷ ನಡಗೆರಿ,ಸಚಿನ್ ಹಿರೇಮಠ, ಪರಶುರಾಮ ನಾಲತವಾಡ,ವಿಶ್ವನಾಥ ರಾಮಗಿರಿಮಠ, ಹಣಮಂತ್ರಾಯ ದೇವರಳ್ಳಿ ಇದ್ದರು.

    ಅಂಗದಾನ ಸರ್ವಶ್ರೇಷ್ಠ ದಾನ
    ಅಂಗದಾನ ಸರ್ವಶ್ರೇಷ್ಠ ದಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts