More

    ರೈತರಿಗೆ ಉಚಿತ ಬಿತ್ತನೆ ಬೀಜ ವಿತರಣೆಗೆ ಆಗ್ರಹ

    ಮುದ್ದೇಬಿಹಾಳ: ಜೆಡಿಎಸ್ ಅಧಿಕಾರಾವಧಿಯಲ್ಲಿ ಒಂದು ಬಾರಿ ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಳ ಮಾಡಿದ್ದಕ್ಕೆ ಬೊಬ್ಬೆ ಹೊಡೆದಿದ್ದ ಬಿಜೆಪಿ ನಾಯಕರು ಈಗ 12 ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳವಾದರೂ ಯಾವುದೇ ಮಾತನಾಡುತ್ತಿಲ್ಲ. ಕೂಡಲೇ ಸರ್ಕಾರ ಇಂಧನದ ಬೆಲೆ ಇಳಿಕೆಗೆ ಮುಂದಾಗಬೇಕೆಂದು ಜೆಡಿಎಸ್ ರಾಜ್ಯ ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ಮಂಗಳಾದೇವಿ ಬಿರಾದಾರ ಹೇಳಿದರು.
    ಕರೊನಾ ವೈರಸ್ ತಡೆಗೆ ರಾಜ್ಯದಲ್ಲಿ ಲಾಕ್‌ಡೌನ್ ಯಶಸ್ವಿಯಾಗಿ ಜಾರಿಯಾಗಿಲ್ಲ. ಶಿಕ್ಷಣ ಸಚಿವ ಸುರೇಶಕುಮಾರ ಅವರು ಶಾಲೆಗಳ ಪುನಾರಂಭಕ್ಕೆ ಮಾರ್ಗಸೂಚಿಗಳನ್ನು ಪ್ರಕಟಿಸಿ ಅನುಮತಿ ನೀಡಬೇಕು. ಮಕ್ಕಳ ಜೀವದ ಜತೆಗೆ ಶೈಕ್ಷಣಿಕ ಭವಿಷ್ಯವೂ ಅಷ್ಟೇ ಮುಖ್ಯವಾಗಿದ್ದು, ಸರ್ಕಾರ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ರೈತರಿಗೆ ಬಿತ್ತನೆಗೆ ಉಚಿತವಾಗಿ ಬೀಜಗಳನ್ನು ಒದಗಿಸಿ, ಕರೊನಾ ನಿಯಂತ್ರಣಕ್ಕೆ ಇನ್ನಷ್ಟು ಪರಿಣಾಮಕಾರಿ ಕ್ರಮಗಳನ್ನು ಜಾರಿಗೆ ತರಬೇಕು. ಅಧಿಕಾರಿಗಳು ಸ್ಥಳೀಯ ಶಾಸಕರ ಕೈಗೊಂಬೆಯಂತೆ ವರ್ತಿಸದೆ ಕ್ಷೇತ್ರ ಅಭಿವೃದ್ಧಿಗೆ ಶ್ರಮಿಸಬೇಕೆಂದರು.
    ಜೆಡಿಎಸ್ ಮುಖಂಡರಾದ ಗುರುಪ್ರಸಾದ ದೇಶಮುಖ, ತಾಲೂಕಾಧ್ಯಕ್ಷ ಪ್ರಭುಗೌಡ ಪಾಟೀಲ, ರಾಜ್ಯ ಯುವ ಘಟಕದ ಬಸವರಾಜ ಭಜಂತ್ರಿ, ಈರಣ್ಣ ತಾರನಾಳ, ಅರವಿಂದ ಕಾಶಿನಕುಂಟಿ, ಭೀಮನಗೌಡ ಕೊಡಗಾನೂರ, ಜಲಾಲ ಮುದ್ನಾಳ ಮತ್ತಿತರರಿದ್ದರು.

    ಸ್ಥಳೀಯ ಶಾಸಕರ ವಿರುದ್ಧವೂ ಆರೋಪ

    ಸ್ಥಳೀಯ ಶಾಸಕರು ಕರೊನಾ ಜಾಗೃತಿಯನ್ನು ವ್ಯಕ್ತಿ ಪ್ರತಿಷ್ಠೆಯಾಗಿ ತೆಗೆದುಕೊಳ್ಳದೆ ಜನರ ಹಿತಕ್ಕಾಗಿ ಕೆಲಸ ಮಾಡಬೇಕೆಂದು ಜೆಡಿಎಸ್ ನಾಯಕಿ ಮಂಗಳಾದೇವಿ ಬಿರಾದಾರ ಹೇಳಿದರು. ಏಕಪಕ್ಷೀಯ ರೀತಿಯಲ್ಲಿ, ಏಕಸ್ವಾಮ್ಯದ ಆಡಳಿತ ಒಬ್ಬರ ಮನೆಯ ಸ್ವತ್ತಾಗಿದೆ. ಸರ್ಕಾರ ಮತದಾರರ ಸರ್ಕಾರವಾಗಿದೆ. ಸರ್ವಾಧಿಕರತ್ವ, ಅರಸೊತ್ತಿಗೆ ಗೂಂಡಾಗಿರಿ ನಡೆಯುತ್ತಿದೆ. ಯಾರಾದರೂ ಏನಾದರೂ ಮಾಡಿದರೆ ಅವರನ್ನು ಹೆದರಿಸುವ ಕೆಲಸ ಆಗುತ್ತಿದೆ. ಇಲಾಖೆಯ ಸಭೆಗಳು ಮನೆಯಲ್ಲಾಗಬಾರದು. ಶಾಸಕರ ಅಧಿಕೃತ ಕಚೇರಿಯಲ್ಲಿ ಆಗಬೇಕು. ಅಧಿಕಾರಿಗಳು ಕಣ್ಣು ಮುಚ್ಚಿದ್ದಾರೆ. ಬಿಇಒ ಪೋನ್ ಮಾಡಿದರೆ ತೆಗೆಯುತ್ತಿಲ್ಲ. ಇಲಾಖೆಯ ಅಧಿಕಾರಿಗಳ ನಡೆಯನ್ನು ಖಂಡಿಸುತ್ತೇನೆ. ನೊಂದವರ, ಬಡವರ ಪರ ಕೆಲಸ ಮಾಡಬೇಕು. ಅನ್ಯಾಯದ ತವರು ಮುದ್ದೇಬಿಹಾಳ ಆಗಬಾರದು. ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಮಾಡಿ ಎಂದು ಹೇಳಿದರು.

    ರೈತರಿಗೆ ಉಚಿತ ಬಿತ್ತನೆ ಬೀಜ ವಿತರಣೆಗೆ ಆಗ್ರಹ
    Diesel
    ರೈತರಿಗೆ ಉಚಿತ ಬಿತ್ತನೆ ಬೀಜ ವಿತರಣೆಗೆ ಆಗ್ರಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts