More

    ಸಂಬಂಧಿಕರ ಮನೆಯಲ್ಲಿದ್ದ ವೃದ್ಧನಿಗೂ ಕರೊನಾ ಪಾಸಿಟಿವ್

    ಮುದ್ದೇಬಿಹಾಳ: ಪಟ್ಟಣದ ಬಸವ ನಗರದಲ್ಲಿ ಒಬ್ಬರಿಗೆ ಹಾಗೂ ತಾಲೂಕಿನ ಕವಡಿಮಟ್ಟಿ ಗ್ರಾಮದಲ್ಲಿ ಒಬ್ಬರಿಗೆ ಕರೊನಾ ಪಾಸಿಟಿವ್ ಇರುವುದು ದೃಢಪಟ್ಟಿದ್ದು, ಅವರನ್ನು ವಿಜಯಪುರದ ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗೆಂದು ಕಳಿಸಿಕೊಡಲಾಗಿದೆ.
    ತಾಲೂಕಾಡಳಿತ ವೈದ್ಯಾಧಿಕಾರಿ ಡಾ.ಸತೀಶ ತಿವಾರಿ ಮಾತನಾಡಿ, ಮುದ್ದೇಬಿಹಾಳ ಪಟ್ಟಣದ ಬಸವ ನಗರ, ಕವಡಿಮಟ್ಟಿಯಲ್ಲಿ ಒಬ್ಬರಿಗೆ ವೈರಸ್ ತಗುಲಿರುವ ಬಗ್ಗೆ ಮಾಹಿತಿ ಬಂದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಅವರನ್ನು ಕೋವಿಡ್ ಆಸ್ಪತ್ರೆಗೆ ಕಳಿಸಲಾಗಿದ್ದು, ಪ್ರಾಥಮಿಕ ಸಂಪರ್ಕದಲ್ಲಿರುವವರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದರು. ಮುದ್ದೇಬಿಹಾಳದ ಬಸವ ನಗರದ ಎರಡು ಪ್ರದೇಶಗಳನ್ನು ಸೀಲ್‌ಡೌನ್ ಮಾಡಲಾಗಿದ್ದು ಮುಂಜಾಗ್ರತಾ ಕ್ರಮವಾಗಿ 100 ಮೀಟರ್ ಅಂತರದಲ್ಲಿ ಬ್ಯಾರಿಕೇಡ್ ಹಾಕಿ ಜನರ ಸುತ್ತಾಟ ನಿರ್ಬಂಧಿಸಲಾಗಿದೆ.

    ಬ.ಬಾಗೇವಾಡಿ ತಾಲೂಕಿನ ವೃದ್ಧನಿಗೂ ಪಾಸಿಟಿವ್

    ಮುದ್ದೇಬಿಹಾಳದ ಬಸವ ನಗರದಲ್ಲಿ ತಮ್ಮ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದ ಬ. ಬಾಗೇವಾಡಿ ತಾಲೂಕಿನ ನಾಗೂರ ಗ್ರಾಮದ 65 ವಯಸ್ಸಿನ ವೃದ್ಧರೊಬ್ಬರಿಗೆ ಕರೊನಾ ವೈರಸ್ ಇರುವುದು ದೃಢಪಟ್ಟಿದೆ. ಇವರು ವಿಜಯಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸ್ವಾಬ್ ತಗಸಿ ಮುದ್ದೇಬಿಹಾಳದ ಅವರ ಸಂಬಂಧಿಕರ ಮನೆಗೆ ಬಂದು ಹೋಂ ಕ್ವಾರೆಂಟನ್‌ನಲ್ಲಿದ್ದರು. ಕೋವಿಡ್-19 ಪಾಸಿಟಿವ್ ಎಂದು ವರದಿ ಬಂದ ಕಾರಣ ಅವರ ಮನೆಗೆ ಆರೋಗ್ಯ ಇಲಾಖೆ ತಂಡ ಭೇಟಿ ನೀಡಿ ಸೋಂಕಿತ ವ್ಯಕ್ತಿಯನ್ನು ಕೋವಿಡ್ ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ ಸ್ಥಳಾಂತರಿಸಲಾಗಿದೆ.
    ವೈದ್ಯಾಧಿಕಾರಿಗಳಾದ ಡಾ. ಸಂಗಮೇಶ ದಶವಂತ, ನಗರ ಕೋವಿಡ್-19 ತಂಡದ ಮೇಲ್ವಿಚಾರಕ ಎಂ.ಎಸ್. ಗೌಡರ, ಎಂಎಚ್‌ಎಲ್‌ಪಿ ಶಶಿಕಲಾ, ಆಶಾ ಕಾರ್ಯಕರ್ತೆಯರಾದ ಉಮಾ ಶಾರದಳ್ಳಿ, ಮೋದಿನಮಾ ಮುಲ್ಲಾ, ಸಂಜು ಜಾಧವ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts