More

    ಮತಕ್ಷೇತ್ರದ ಸಮಗ್ರ ಅಭಿವೃದ್ಧಿ ನನ್ನ ಕನಸು

    ಮುದ್ದೇಬಿಹಾಳ: ಮತಕ್ಷೇತ್ರದ ಸಮಗ್ರ ಅಭಿವೃದ್ಧಿ ನನ್ನ ಕನಸು. ಅದಕ್ಕೆ ಯಾವುದೇ ಅಡಿಗಳು ಬಂದರೂ ಅದನ್ನು ಎದುರಿಸಲು ಸಿದ್ಧನಿದ್ದೇನೆ ಎಂದು ಆಹಾರ ಪೂರೈಕೆ ನಿಗಮದ ಅಧ್ಯಕ್ಷ, ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
    ತಾಲೂಕಿನ ಬಿದರಕುಂದಿ ಗ್ರಾಮದ ಬಳಿ ಕೆಬಿಜೆಎನ್‌ಎಲ್ ಇಲಾಖೆಯಡಿ ಚಿಮ್ಮಲಗಿ ಏತ ನೀರಾವರಿ ಯೋಜನೆಯಡಿ 7.516ರಲ್ಲಿ ಎಸ್ಕೇಪ್ ರೆಗ್ಯೂಲೇಟರ್‌ದ 1.10ರವರೆಗೆ 1.73 ಕೋಟಿ ರೂ.ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
    ಇಡೀ ಕ್ಷೇತ್ರದಲ್ಲಿ ವಿವಿಧ ಕೆಲಸಗಳನ್ನು ಮಾಡಲು ಎರಡು ಸಾವಿರ ಕೋಟಿ ರೂ. ಅಂದಾಜು ಪತ್ರಿಕೆಯನ್ನು ತಯಾರಿಸಿದ್ದೇನೆ .ಮೂರು ಪಟ್ಟಣಗಳಿಗೆ 24 ಞ 7 ಕುಡಿಯುವ ನೀರು ಯೋಜನೆ, ತಾಲೂಕಿನ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡುತ್ತೇನೆ ಎಂದು ಹೇಳಿದರು.
    ಸದ್ಯಕ್ಕೆ ಸಿಎಂ ಅವರು 500 ಕೋಟಿ ರೂ.ಗಳ ಕಾಮಗಾರಿಯನ್ನು ಮಂಜೂರಾತಿ ನೀಡಿದ್ದಾರೆ. ಹಳ್ಳಿಯಿಂದ ಬಂದಿರುವ ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಕ್ಷೇತ್ರದ ಜನತೆ ಶಾಸಕರನ್ನಾಗಿ ಆಯ್ಕೆ ಮಾಡಿದ್ದೀರಿ. ನಿಮ್ಮ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ. ಅಭಿವೃದ್ಧಿ ವಿಷಯ ನಡೆಯುವಾಗ ವಿರೋಧಗಳು ಬರುವುದು ಸಹಜ. ಅದಕ್ಕೆಲ್ಲ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಶಾಸಕರು ಹೇಳಿದರು.

    ಗ್ರಾಮದ ಮುಖಂಡ ಚನ್ನಬಸಪ್ಪಗೌಡ ಪಾಟೀಲ, ಗ್ರಾಪಂ ಮಾಜಿ ಅಧ್ಯಕ್ಷ ಮಲ್ಲು ಬಿದರಕುಂದಿ, ಗುತ್ತಿಗೆದಾರ ರಾಜು ಮೇಟಿ, ಮಲ್ಲು ಹತ್ತಿ, ಚನ್ನಪ್ಪ ವಿಜಯಕರ್, ಲಕ್ಷ್ಮಣ ವಡ್ಡರ, ಕೆಬಿಜೆಎನ್‌ಎಲ್ ಅಧಿಕಾರಿ ಎಂ.ಆರ್.ಹಲಗತ್ತಿ ಮತ್ತಿತರರು ಇದ್ದರು.

    ಪಂಚಾಯಿತಿ ವಿಲೀನ, ತಪ್ಪು ಕಲ್ಪನೆ ಬೇಡ

    ಮುದ್ದೇಬಿಹಾಳ ಪಟ್ಟಣದ ಪುರಸಭೆ ವ್ಯಾಪ್ತಿಗೆ ಬರುವ ಬಿದರಕುಂದಿ, ಹಡಲಗೇರಿ, ಕವಡಿಮಟ್ಟಿ ಹಾಗೂ ಕುಂಟೋಜಿ ಗ್ರಾಪಂಗಳ ಕೆಲವು ಆಸ್ತಿಗಳು ಈಗಾಗಲೇ ಪುರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಲಾಗಿದ್ದು, ಅವುಗಳನ್ನು ಪುರಸಭೆ ಸುಪರ್ದಿಗೆ ತೆಗೆದುಕೊಳ್ಳಲಾಗುತ್ತದೆ. ಆದರೆ ಯಾವುದೇ ಕಾರಣಕ್ಕೂ ಪಂಚಾಯಿತಿಗಳನ್ನು ಪುರಸಭೆಯಲ್ಲಿ ವಿಲೀನ ಮಾಡುವುದಿಲ್ಲ. ಈ ಬಗ್ಗೆ ಎದ್ದಿರುವ ಸುಳ್ಳು ವದಂತಿಗೆಗಳಿಗೆ ಯಾರೂ ಕಿವಿಗೊಡಬಾರದು. 2011ರಲ್ಲಿಯೇ ಸರ್ಕಾರದಿಂದ ಗೆಜೆಟ್ ನೋಟಿಫಿಕೇಶನ್ ಆಗಿದ್ದು ಅಭಿವೃದ್ಧಿಗೆ ವಿರೋಸುವುದು ಸರಿಯಲ್ಲ ಎಂದು ಶಾಸಕ ನಡಹಳ್ಳಿ ಗ್ರಾಮಸ್ಥರಿಗೆ ತಿಳಿಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts