ಮುದ್ದೇಬಿಹಾಳ: ಕರ್ನಾಟಕದಲ್ಲಿ ನೀರು, ಅನ್ನ, ಗಾಳಿ ಸೇವಿಸಿ ಆಂಗ್ಲ ಭಾಷೆಗೆ ಮೊದಲ ಆದ್ಯತೆ ಕೊಡುವ ವ್ಯಾಪಾರಸ್ಥರು ತಮ್ಮ ಅಂಗಡಿಗಳ ನಾಮಲಕಗಳನ್ನು ಕನ್ನಡದಲ್ಲಿ ಹಾಕಬೇಕು. ಈಗಾಗಲೇ ಹಾಕಿರುವ ಆಂಗ್ಲ ಭಾಷೆಯ ನಾಮಲಕಗಳಿಗೆ ಮಸಿ ಬಳಿಯುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಅಧ್ಯಕ್ಷ ಸಂಗಯ್ಯ ಸಾರಂಗಮಠ ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜ್ಯೂ.ವಿಷ್ಣುವರ್ಧನ್ ಖ್ಯಾತಿಯ ರಾಣೆಬೆನ್ನೂರ ತಾಲೂಕಿನ ಐರಣಿ ಗ್ರಾಮದ ಮಲ್ಲಯ್ಯ ಮಳಲಿಮಠ ಅವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನವೆಂಬರ್ ಮೊದಲ ವಾರದವರೆಗೆ ಗಡುವು ನೀಡಲಾಗುತ್ತದೆ. ಒಂದು ವೇಳೆ ಕನ್ನಡದಲ್ಲಿ ನಾಮಲಕ ಇರದೇ ಇದ್ದರೆ ಅಂತಹ ನಾಮಲಕಗಳಿಗೆ ಮಸಿ ಬಳಿಯುತ್ತೇವೆ ಎಂದು ತಿಳಿಸಿದರು.
ಪುರಸಭೆ ಮಾಜಿ ಸದಸ್ಯ ಕಾಮರಾಜ ಬಿರಾದಾರ, ಪ್ರೊ.ಎಸ್.ಎಸ್. ಹೂಗಾರ ಮಾತನಾಡಿ, ರಸ್ತೆ ನಿಯಮಗಳ ಪಾಲನೆ, ಕರೊನಾ ವೈರಸ್ ಹಾವಳಿ ಸಂದರ್ಭ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಅರಿವು ಮೂಡಿಸುತ್ತಿರುವ ಕಲಾವಿದ ಮಳಲಿಮಠ ಅವರ ಕಾರ್ಯ ಶ್ಲಾಘನೀಯವಾದದು ಎಂದರು.
ಕಲಾವಿದ ಶ್ರೀಶೈಲ ಹೂಗಾರ, ಮಹಾಂತೇಶ ಬೂದಿಹಾಳಮಠ, ಕಲಾವಿದ ಗೋಪಾಲ ಹೂಗಾರ, ಮುನೀರ್ ಅವಟಗೇರ, ಪುರಸಭೆ ಸದಸ್ಯರಾದ ಮಹಿಬೂಬ್ ಗೊಳಸಂಗಿ, ರಿಯಾಜ್ ಢವಳಗಿ, ಯಲ್ಲಪ್ಪ ನಾಯ್ಕಮಕ್ಕಳ, ನಾಗರಾಜ ಬಿರಾದಾರ, ಗಣೇಶ ಝಿಂಗಾಡೆ ಮತ್ತಿತರರಿದ್ದರು.