More

    ಪಟ್ಟಣದ ಸ್ವಚ್ಛತೆಗೆ ವ್ಯಾಪಾರಸ್ಥರ ಸಹಕಾರ ಅವಶ್ಯ

    ಮುದಗಲ್: ಪಟ್ಟಣದ ಸ್ವಚ್ಛತೆಗೆ ವ್ಯಾಪಾಸ್ಥರ ಸಹಕಾರ ಅವಶ್ಯ ಎಂದು ಪುರಸಭೆ ಮುಖ್ಯಾಧಿಕಾರಿ ಪರಶುರಾಮ ನಾಯಕ ಹೇಳಿದರು. ಪುರಸಭೆ ಸಭಾಂಗಣದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಮತ್ತು ತ್ಯಾಜ್ಯ ವಿಲೇವಾರಿ ಕುರಿತು ಮಾಂಸ ಮಾರಾಟ ಹಾಗೂ ಬೀದಿ ಬದಿ ವ್ಯಾಪಾರಸ್ಥರಿಗೆ ಹಮ್ಮಿಕೊಂಡಿದ್ದ ಅರಿವು ಸಭೆಯಲ್ಲಿ ಗುರುವಾರ ಮಾತನಾಡಿದರು.

    ಎಲ್ಲೆಂದರಲ್ಲಿ ಕಸ ಹಾಕುವುದನ್ನು ನಿಲ್ಲಿಸಬೇಕು. ನವೀಕರಿಸಲಾಗದ ತ್ಯಾಜ್ಯ ಹಾಗೂ ಪ್ಲಾಸ್ಟಿಕ್ ಬಳಕೆ ತಡೆಗೆ ವ್ಯಾಪಾರಸ್ಥರು ಮುಂದಾಗಬೇಕು. ನಿಗದಿತ ಸ್ಥಳದಲ್ಲಿ ಪುರಸಭೆಯಿಂದ ಅಧಿಕೃತ ಪರವಾನಗಿ ಪಡೆದು ಮಾಂಸ ಇತ್ಯಾದಿ ಅಂಗಡಿಗಳ ವ್ಯಾಪಾರ ಮಾಡಬೇಕು. ಹೆಚ್ಚು ತ್ಯಾಜ್ಯ ವಿಸರ್ಜನೆ ಮಾಡುವ ಅಂಗಡಿಗಳಿಗೆ ಶುಲ್ಕ ನಿಗದಿಮಾಡಲಾಗುತ್ತಿದೆ ಎಂದು ತಿಳಿಸಿದರು.

    ನೈರ್ಮಲ್ಯಾಧಿಕಾರಿಗಳಾದ ಆರೀಫ್ ಬೇಗಂ, ರಹಮತ್ ಉನ್ನೀಸಾ ಬೇಗಂ, ವ್ಯಾಪಾರಸ್ಥರಾದ ಮೈಬೂಬ್ ಸಾಬ್, ಹುಸೇನ್, ಹನುಮಂತ, ಸುಭಾಷ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts