More

    ಶಿಕ್ಷಣದೊಂದಿಗೆ ಸಂಸ್ಕಾರ ರೂಢಿಸಿಕೊಳ್ಳಿ, ಸಿಪಿಐ ಮಹಾಂತೇಶ ಸಜ್ಜನ್ ಸಲಹೆ

    ಮುದಗಲ್: ಮಕ್ಕಳಿಗೆ ಶಿಕ್ಷಣ ಕಲಿಸುವುದರ ಜತೆಗೆ ಬದುಕಲು ಬೇಕಾದ ಸಂಸ್ಕಾರವನ್ನು ನೀಡುವುದು ಅವಶ್ಯವಾಗಿದೆ ಎಂದು ಲಿಂಗಸುಗೂರು ಸಿಪಿಐ ಮಹಾಂತೇಶ ಸಜ್ಜನ್ ಹೇಳಿದರು.

    ಸ್ಥಳೀಯ ಆರ್.ಸಿ.ಮಿಷನ್ ಪ್ರಾಥಮಿಕ ಶಾಲೆ ಹಾಗೂ ಕ್ರಿಸ್ತ್ ಜ್ಯೋತಿ ಪ್ರೌಢ ಶಾಲೆ ಆವರಣದಲ್ಲಿ ಮಂಗಳವಾರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಪಾಲಕರು ಮತ್ತು ಮಕ್ಕಳು ಉನ್ನತ ಉದ್ಯೋಗದ ಕನಸು ಕಾಣುತ್ತಾ ಅಂಕ ಗಳಿಕೆಗಾಗಿ ಶಿಕ್ಷಣದ ಹಿಂದೆ ಓಡುತಿದ್ದಾರೆ. ಆದರೆ, ವಿದ್ಯೆಯೊಂದಿಗೆ ಸಂಸ್ಕಾರ ಇದ್ದಾಗ ಶಿಕ್ಷಣಕ್ಕೆ ಅರ್ಥಬರಲು ಸಾಧ್ಯ ಎಂದರು.

    ಗುರುವಿಗೆ ಗುಲಾಮರಾಗಬೇಕು ಮತ್ತು ತಂದೆ-ತಾಯಿಗೆ ಒಳ್ಳೆಯ ಮಕ್ಕಳಾಗಬೇಕು. ಮಕ್ಕಳಿಗೆ ಪಾಲಕರು ಸಂಸ್ಕಾರ ನೀಡಿದಲ್ಲಿ ಶಿಕ್ಷಕರ ಕರ್ತವ್ಯದ ಹೊರೆ ಕಡಿಮೆಯಾಗಲಿದೆ. ಬದುಕಿನ ಕತ್ತಲನ್ನು ತೆಗೆದು ಭವಿಷ್ಯ ರೂಪಿಸಲು ಪ್ರಯತ್ನಿಸುವವರೇ ನಿಜವಾದ ಶಿಕ್ಷಕರು ಎಂದು ಮಹಾಂತೇಶ ಸಜ್ಜನ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts