More

    ಕರೊನಾ ಹೋಗುವುದರೊಳಗೆ ಬಂತು ಮತ್ತೊಂದು ಡೆಡ್ಲಿ ಸೋಂಕು! ದೇಶದ ಹಲವು ಭಾಗಗಳಲ್ಲಿ ಪತ್ತೆ, 9 ಸಾವು!

    ನವದೆಹಲಿ: ಕರೊನಾ ಸೋಂಕಿನ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ನೆಮ್ಮದಿಯಿಂದಿರುವವರು ಇತ್ತ ಗಮನಿಸಿ. ಕರೊನಾ ಸೋಂಕು ಇನ್ನೂ ಸಂಪೂರ್ಣವಾಗಿ ನಿರ್ಮೂಲನೆಯಾಗಿಲ್ಲ, ಅಷ್ಟರೊಳಗೆ ಹೊಸ ಸೋಂಕೊಂದು ಭಾರತೀಯರಲ್ಲಿ ಕಾಣಿಸಿಕೊಳ್ಳಲಾರಂಭಿಸಿದೆ. ದೇಶದ ಹಲವು ಭಾಗಗಳಲ್ಲಿ ಈಗಾಗಲೇ ಈ ಸೋಂಕಿಗೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿದ್ದು ಕನಿಷ್ಠ 9 ಮಂದಿ ಸಾವನ್ನಪ್ಪಿದ್ದಾರೆ.

    ಇದನ್ನೂ ಓದಿ: ವಾಟ್ಸ್​ಆ್ಯಪ್​ ವಿಡಿಯೋ ಕಾಲ್​ನಲ್ಲಿ ಬೆತ್ತಲಾದ ಯುವತಿಯರು… ಕಣ್ತುಂಬಿಕೊಂಡವನಿಗೆ ಕಾದಿತ್ತು ಭಾರಿ ಸಂಕಷ್ಟ!

    ಇದೀಗ ಕಾಣಿಸಿಕೊಳ್ಳಲಾರಂಭಿಸಿರುವ ರೋಗದ ಹೆಸರು ಮ್ಯೂಕಾರ್ಮೈಕೋಸಿಸ್. ದೆಹಲಿ ಮತ್ತು ಮುಂಬೈನ ಆಸ್ಪತ್ರೆಗಳು ಈ ರೋಗಕ್ಕೆ ಸಂಬಂಧ ಪಟ್ಟ ಕೆಲವು ಪ್ರಕರಣಗಳನ್ನು ವರದಿ ಮಾಡಿವೆ. ಹಾಗೆಯೇ ಗುಜರಾತ್‌ನ ಅಹಮದಾಬಾದ್‌ನಲ್ಲಿ ಕನಿಷ್ಠ 44 ಮ್ಯೂಕೋರ್ಮೈಕೋಸಿಸ್ ಪ್ರಕರಣಗಳು ದಾಖಲಾಗಿವೆ ಮತ್ತು ಅದರಲ್ಲಿ ಒಂಬತ್ತು ರೋಗಿಗಳು ಸಾವನ್ನಪ್ಪಿದ್ದಾರೆ.

    ಮ್ಯೂಕೋರ್ಮೈಕೋಸಿಸ್ ಎಂದರೇನು?
    ಮ್ಯೂಕೋರ್ಮೈಕೋಸಿಸ್ (ಹಿಂದೆ ಗೈಗೋಮೈಕೋಸಿಸ್ ಎಂದು ಕರೆಯಲಾಗುತ್ತಿತ್ತು) ಎನ್ನುವುದು ಮ್ಯೂಕೋರ್ಮೈಸೆಟ್ಸ್ ಗಂಭೀರ ಆದರೆ ಅಪರೂಪದ ಶಿಲೀಂಧ್ರ ಸೋಂಕು. ಇದು ಪರಿಸರದಾದ್ಯಂತ ವಾಸಿಸುತ್ತವೆ. ಸೋಂಕು ಸಾಮಾನ್ಯವಾಗಿ ಮೂಗಿನಿಂದ ಪ್ರಾರಂಭವಾಗುತ್ತದೆ ಮತ್ತು ಕಣ್ಣುಗಳಿಗೂ ಹರಡುತ್ತದೆ. ರೋಗದ ಪ್ರಾರಂಭಿಕ ಗುರುತಿಸುವಿಕೆಯಿಂದ ಮತ್ತು ಸೂಕ್ತ ಚಿಕಿತ್ಸೆಯಿಂದ ರೋಗಿಯನ್ನು ಗುಣಪಡಿಸಬಹುದು, ಚಿಕಿತ್ಸೆ ನೀಡದೆ ಹೋದರೆ ಈ ರೋಗ ರೋಗಿಯ ಪ್ರಾಣವನ್ನೂ ತಗೆಯಬಲ್ಲಂತದ್ದಾಗಿದೆ.

    ಇದನ್ನೂ ಓದಿ: ಭಾರತಕ್ಕೆ ಬಂತು ವಾಟ್ಸ್​ಆ್ಯಪ್​ ಪೇ! ನಿಮ್ಮ ಮೊಬೈಲ್‌ನಲ್ಲಿ ವಾಟ್ಸಾಪ್ ಪೇ ಆ್ಯಕ್ಟಿವೇಟ್ ಮಾಡಿಕೊಳ್ಳುವುದು ಹೇಗೆ?

    ರೋಗದ ಲಕ್ಷಣ:
    ಸೋಂಕು ಹರಡುತ್ತಿದ್ದಂತೆ, ಇದು ಕಣ್ಣಿನ ಸುತ್ತವಿರುವ ಸ್ನಾಯುಗಳಿಗೆ ಪಾರ್ಶ್ವವಾಯು ತರುತ್ತದೆ, ಇದರಿಂದಾಗಿ ಕುರುಡುತನ ಉಂಟಾಗಬಹುದು. ಶಿಲೀಂಧ್ರಗಳ ಸೋಂಕು ಮಿದುಳಿಗೆ ಹರಡಿದರೆ, ರೋಗಿಯು ಮಿದುಳಿನ ರೋಗಕ್ಕೆ ತುತ್ತಾಗಬಹುದು.

    ಕರೊನಾ ಹೋಗುವುದರೊಳಗೆ ಬಂತು ಮತ್ತೊಂದು ಡೆಡ್ಲಿ ಸೋಂಕು! ದೇಶದ ಹಲವು ಭಾಗಗಳಲ್ಲಿ ಪತ್ತೆ, 9 ಸಾವು!
    ಯಾರು ಹೆಚ್ಚು ಅಪಾಯದಲ್ಲಿದ್ದಾರೆ?
    ಮ್ಯೂಕಾರ್ಮೈಕೋಸಿಸ್ ಮುಖ್ಯವಾಗಿ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ ಅಥವಾ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ಕರೊನಾ ಸೋಂಕಿಗೆ ತುತ್ತಾಗಿರುವವರು ಅಥವಾ ಕರೊನಾ ನಂತರದ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಹೆಚ್ಚು ಅಪಾಯವಾಗಬಹುದು. ಮಧುಮೇಹವಿರುವ ಜನರಿಗೂ ಇದು ಟಾರ್ಗೆಟ್​ ಮಾಡುತ್ತದೆ. ಅಹಮದಾಬಾದ್‌ನಲ್ಲಿ, ಮ್ಯೂಕೋರ್ಮೈಕೋಸಿಸ್ನೊಂದಿಗೆ ಆಸ್ಪತ್ರೆಗೆ ಬಂದಿರುವ ಹೆಚ್ಚಿನ ರೋಗಿಗಳು ಮಧುಮೇಹ ಹೊಂದಿದ್ದರು ಮತ್ತು ಕೋವಿಡ್ -19 ನಿಂದ ಚೇತರಿಸಿಕೊಳ್ಳುತ್ತಿದ್ದವರು ಎಂದು ವೈದ್ಯರು ತಿಳಿಸಿದ್ದಾರೆ.

    ಇದನ್ನೂ ಓದಿ: ಕೈಲಾಸಕ್ಕೆ ಕಾಸಿಲ್ಲದೆ ವೀಸಾ ತೆಗೆದುಕೊಂಡು ಬನ್ನಿ! ಭಕ್ತರಿಗೆ ಚಳಿಗಾಲದ ಆಫರ್​ ನೀಡಿದ ನಿತ್ಯಾನಂದ ಸ್ವಾಮಿ!

    ಎಲ್ಲೆಲ್ಲಿ ಎಷ್ಟು ಪ್ರಕರಣ?
    ಎರಡು ದಿನಗಳ ಹಿಂದೆ ದೆಹಲಿಯ ಸರ್ ಗಂಗಾರಾಂ ಆಸ್ಪತ್ರೆಯಲ್ಲಿ 12 ಮ್ಯೂಕಾರ್ಮೈಕೋಸಿಸ್​ ಪ್ರಕರಣಗಳು ವರದಿಯಾಗಿವೆ. ಅಹಮದಾಬಾದ್​ನಲ್ಲಿ 44 ಜನರು ದಾಖಲಾಗಿದ್ದಾರೆ.

    ರೋಗ ಹರಡದಂತೆ ತಡೆಯುವುದು ಹೇಗೆ?
    ಉತ್ತಮ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ. ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್​ ಧರಿಸಿ ಮತ್ತು ನಿಮ್ಮ ಕೈಗಳನ್ನು ಆಗಾಗ ತೊಳೆಯುತ್ತಿರಿ. ನಿಮ್ಮ ಕಣ್ಣು ಮತ್ತು ಮೂಗು ಮುಟ್ಟುತ್ತಿರಬೇಡಿ. ಮೂಗು, ಕಣ್ಣು ಅಥವಾ ಗಂಟಲಿನಲ್ಲಿ ತುರಿಕೆ ಕಾಣಿಸಿಕೊಂಡರೆ, ತಪಾಸಣೆಗಾಗಿ ವೈದ್ಯರ ಬಳಿಗೆ ಹೋಗಿ. (ಏಜೆನ್ಸೀಸ್​)

    ರಾಜ್ಯದಲ್ಲಿ ಇಂದು 1,236 ಜನರಲ್ಲಿ ಕರೊನಾ ಸೋಂಕು ಪತ್ತೆ; 10 ಮಂದಿ ಸಾವು

    ಕಿರಿ ಸೊಸೆ ಜತೆ ಮಾವನ ಅಕ್ರಮ ಸಂಬಂಧ; ವಿಚಾರ ತಿಳಿದ ಹಿರಿ ಸೊಸೆ, ಅತ್ತೆ ಮಾಡಿದ್ದೇನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts