More

    ಸಿಎಂ ವಿರುದ್ಧ ಎಂಟಿಬಿ ನಾಗರಾಜ್​ ಅಸಮಾಧಾನ ಸ್ಫೋಟ!

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸಂಪುಟದಲ್ಲಿ ಸಚಿವರಾಗಲು ಹಲವರು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಒಂದಿಲ್ಲೊಂದು ಕಾರಣಕ್ಕೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಳಂಬ ಆಗುತ್ತಲೇ ಇದೆ. ಹಾಗೇ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದ್ದು, ನನಗೂ ಸಚಿವ ಸ್ಥಾನವನ್ನು ಕೊಡಲೇಬೇಕೆಂದು ಹಲವರು ಬೇಡಿಕೆಯನ್ನೂ ಇಟ್ಟಿದ್ದಾರೆ.

    ಈ ನಡುವೆ ಸಿಎಂ ಮೇಲೆ ಎಂಟಿಬಿ ನಾಗರಾಜ್​ ಅಸಮಧಾನ ಹೊರಹಾಕಿದ್ದಾರೆ. ಶುಕ್ರವಾರ ವಿಧನಾಸೌಧದಲ್ಲಿ ಮಾತನಾಡಿದ ಎಂಟಿಬಿ, ಸಿಎಂ ನಮ್ಮನ್ನು ನೋಡಿದ ಕೂಡಲೇ ಮಂತ್ರಿ ಮಾಡ್ತೀನಿ ಅಂತಾರೆ. ನಾವು ಅವರನ್ನು ಭೇಟಿ ಮಾಡಿದಗಲೆಲ್ಲ ಮಂತ್ರಿ ಮಾಡ್ತೀನಿ ಅಂತಾರೆ. ಆದರೆ ನಮ್ಮನ್ನು ಮಂತ್ರಿ ಮಾಡಲು ಸಿಎಂ ಇನ್ನೂ ನಿರ್ಧಾರ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಯಡಿಯೂರಪ್ಪ ಅವರು ಅವರ ಪಕ್ಷದಲ್ಲಿ ಯಾರನ್ನು ಬೇಕಾದರೂ ಮಂತ್ರಿ ಮಾಡಿಕೊಳ್ಳಲಿ. ತ್ಯಾಗ ಮಾಡಿ ಬಂದಿರುವ ನಮಗೆ ಮೊದಲು ಮಂತ್ರಿ ಮಾಡಬೇಕು ಎಂದು ಎಂಟಿಬಿ ನಾಗರಾಜ್​ ಆಗ್ರಹಿಸಿದರು.

    ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಸಿಗಲು ಇನ್ನೂ ಎರಡ್ಮೂರು ದಿನ ಕಾಯಬೇಕಿದೆ. ಶುಕ್ರವಾರ ಬೆಳಗ್ಗೆ ಸಿಎಂ ಬಿಎಸ್​ವೈಗೆ ಕರೆ ಮಾಡಿದ್ದ ಅಮಿತ್​ ಷಾ, ಎರಡ್ಮೂರು ದಿನದಲ್ಲಿ ಸಂಪುಟ ವಿಚಾರದಲ್ಲಿ ಗ್ರೀನ್ ಸಿಗ್ನಲ್ ಕೊಡ್ತೀವಿ ಎಂದು ಹೇಳಿದ್ದಾರೆ. ಈ ಬಗ್ಗೆ ಸಿಎಂ ಅವರೇ ಮಾಹಿತಿ ನೀಡಿದ್ದು, ಸಚಿವ ಸಂಪುಟ ವಿಸ್ತರಣೆಗೆ ಇನ್ನೆರಡು ದಿನದಲ್ಲಿ ಪಟ್ಟಿ ಬರಲಿದೆ ಎಂದಿದ್ದಾರೆ. ಅಂದು ಯಾರಿಗೆ ಮಣೆ ಹಾಕಲಿದ್ದಾರೆ ಎಂಬುದು ಬಹಿರಂಗ ಆಗಲಿದೆ.

    ಅಯ್ಯೋ, ಅಮ್ಮ ಬೇಗ ಬಾ.. ಹಸುಗಳು ಕೂಗುತ್ತಿವೆ… ಎನ್ನುತ್ತ ಒಳಗೆ ಬಂದ ಮಗನಿಗೆ ಕಾದಿತ್ತು ಶಾಕ್​!

    ಕಾಡು ಹಂದಿ ಬೇಟೆಗೆ ಹೋದವನ ದೇಹವೇ ಛಿದ್ರಛಿದ್ರ ಆಯ್ತು ! ವರಾಹನ ಶಾಪ ತಟ್ಟೀತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts