More

    ಶಿಕ್ಷಣದಲ್ಲಿ ಮೌಲ್ಯ ಬೆಸೆದ ಎಂ.ಎಸ್ ರಾಮಯ್ಯ; ಕೇಂದ್ರ ಸಚಿವ ನಿತಿನ್ ಗಡ್ಕರಿ ಬಣ್ಣನೆ

    ಬೆಂಗಳೂರು ಪದವಿ, ತಂತ್ರಜ್ಞಾನಕ್ಕಿಂತ ವ್ಯಕ್ತಿಗೆ ಜ್ಞಾನ, ಸಂಸ್ಕೃತಿ, ಸಂಸ್ಕಾರ ಮತ್ತು ಪರಂಪರೆ ಇರುವ ವ್ಯಕ್ತಿ ದೇಶ ಮತ್ತು ಸಮಾಜಕ್ಕೆ ಉತ್ತಮ ಪ್ರಜೆಯಾಗಿ ರೂಪುಗೊಳ್ಳಲಿದ್ದಾನೆ. ಎಂ. ಎಸ್. ರಾಮಯ್ಯ ಅವರು ಅಂತಹ ಸಂಸ್ಕಾರವನ್ನು ಹೊಂದಿದ್ದರಿಂದ ಶಿಕ್ಷಣದಲ್ಲಿ ಮೌಲ್ಯವನ್ನು ಬೆಸೆಯುವ ಪ್ರಯತ್ನ ಎಂದು ಕೇಂದ್ರದ ಸಾರಿಗೆ ಸಚಿವ ನಿತಿನ್ ಗಡ್ಕರಿ ಬಣ್ಣಿಸಿದರು.

    ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಡಾ. ಎಂ. ಎಸ್. ರಾಮಯ್ಯ ಅವರ ಆಂಗ್ಲಭಾಷಾ ಆತ್ಮಕತೆ ’ರಾಮೈಯಾನಂ’ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

    ಬೆಂಗಳೂರು ಜ್ಞಾನದ ರಾಜಧಾನಿಯಾಗಿ ರೂಪುಗೊಳ್ಳುವಲ್ಲಿ ಎಂ. ಎಸ್. ರಾಮಯ್ಯ ಅವರ ಕೊಡುಗೆ ಮಹತ್ವದ್ದಾಗಿದೆ. ರಾಮಯ್ಯ ಅವರು ದೇಶಕ್ಕೆ ವಿಶಿಷ್ಟ ಕೊಡುಗೆಗಳನ್ನು ನೀಡಿದ ವಿಶೇಷ ವ್ಯಕ್ತಿಯಾಗಿದ್ದಾರೆ. ವರ್ತಮಾನದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಉತ್ತಮ ಭವಿಷ್ಯ ರೂಪಿಸಬೇಕಾದರೆ ಭೂತಕಾಲದ ಅರಿವು ನಮ್ಮಲ್ಲಿರಬೇಕು ಎಂದರು.

    ದೇಶದ ಅಭಿವೃದ್ಧಿಗೆ ’ಜ್ಞಾನ’ವನ್ನು ಪ್ರಮುಖ ಶಕ್ತಿ ಎಂದು ನಾವು ಭಾವಿಸಿದ್ದೇವೆ. ಶಿಕ್ಷಣದ ಸಾರ್ವತ್ರಿಕರಣದ ಜತೆಗೆ ಗುಣಮಟ್ಟದ ಮೌಲ್ಯಧಾರಿತ ಶಿಕ್ಷಣ ಮುಖ್ಯ. ಶಿಕ್ಷಣದಲ್ಲಿ ಮುಂದುವರಿದಿರುವ ದಕ್ಷಿಣ ಭಾರತದಲ್ಲಿ ನೂರಾರು ವಿವಿಗಳಿವೆ. ಈ ವಿವಿಗಳಲ್ಲಿ ಗುಣಮಟ್ಟದ ಮೌಲ್ಯಾಧಾರಿತ ಶಿಕ್ಷಣ ದೊರೆಯಬೇಕು ಎಂದು ಆಶಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts