More

    ಎಂಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿ ಒಂದು ವರ್ಷ ಪೂರ್ಣ

    ಬೆಂಗಳೂರು: ಕಳೆದ ವರ್ಷದ ಸ್ವಾತಂತ್ರ್ಯೋತ್ಸವ ದಿನದ ಸಂಜೆ ಭಾರತೀಯ ಕ್ರಿಕೆಟ್ ಪ್ರೇಮಿಗಳ ಪಾಲಿಗೆ ಎಂದಿನಂತೆ ಇರಲಿಲ್ಲ. ಭಾರತೀಯ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಪ್ರಕಟಿಸುವ ಮೂಲಕ ಅಭಿಮಾನಿಗಳಿಗೆ ಬಹುದೊಡ್ಡ ಆಘಾತ ನೀಡಿದ್ದರು. ಯುಎಇಯಲ್ಲಿ ಐಪಿಎಲ್ ಟೂರ್ನಿ ಆಡಲು ಸಜ್ಜಾಗುತ್ತಿದ್ದ ಸಮಯದಲ್ಲಿ ಅನಿರೀಕ್ಷಿತವಾಗಿ ಧೋನಿ ಅವರಿಂದ ನಿವೃತ್ತಿ ನಿರ್ಧಾರ ಹೊರಬಿದ್ದಿತ್ತು. ಯಾವುದೇ ಸುದ್ದಿಗೋಷ್ಠಿ (ಕರೊನಾ ಸಮಯದಲ್ಲಿ ಇದು ಸಾಧ್ಯವೂ ಇರಲಿಲ್ಲ) ಇಲ್ಲದೆ, ಕೇವಲ ಇನ್‌ಸ್ಟಾಗ್ರಾಂ ಪೋಸ್ಟ್ ಒಂದರ 16 ಪದಗಳ ಬರಹದೊಂದಿಗೆ ದಿಢೀರ್ ವಿದಾಯ ಪ್ರಕಟಿಸಿದ್ದರು. ‘ಇಂದು ಸಂಜೆ 7.29ರಿಂದ (19.29) ನನ್ನನ್ನು ನಿವೃತ್ತಿ ಎಂದು ಪರಿಗಣಿಸಿ’ ಎಂದು ಅವರು ಅದರಲ್ಲಿ ಉಲ್ಲೇಖಿಸಿದ್ದರು. ಆ ದಿನಕ್ಕೆ ಭಾನುವಾರ ಒಂದು ವರ್ಷ ಪೂರ್ಣಗೊಂಡಿದೆ.

    ಭಾರತ ತಂಡ 2019ರ ಜುಲೈ 10ರಂದು ಏಕದಿನ ವಿಶ್ವಕಪ್ ಟೂರ್ನಿಯ ಸೆಮಿೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತು ಹೊರಬಿದ್ದ ಸಮಯದಿಂದಲೂ ಎಂಎಸ್ ಧೋನಿ ನಿವೃತ್ತಿಯ ಬಗ್ಗೆ ವದಂತಿಗಳು ಹರಿದಾಡುತ್ತಲೇ ಇದ್ದವು. ಆದರೆ ಆಗೆಲ್ಲ ಮೌನವೇ ಧೋನಿ ಉತ್ತರವಾಗಿತ್ತು. ದೇಶ 74ನೇ ಸ್ವಾತಂತ್ರ್ಯ ಸಂಭ್ರಮದಲ್ಲಿದ್ದ ವೇಳೆ ಧೋನಿ ಎಲ್ಲರಿಗೂ ಅಚ್ಚರಿಯ ಸುದ್ದಿ ನೀಡಿದ್ದರು. ಅದರ ಬೆನ್ನಲ್ಲೇ ಅವರ ಸಹ-ಆಟಗಾರ ಸುರೇಶ್ ರೈನಾ ಕೂಡ ನಿವೃತ್ತಿ ಪ್ರಕಟಿಸಿ ಮತ್ತಷ್ಟು ಅಚ್ಚರಿ ಹುಟ್ಟಿಸಿದ್ದರು.

    ಇದನ್ನೂ ಓದಿ: PHOTO | ಪ್ಯಾರಿಸ್‌ನಲ್ಲಿ ಮೆಸ್ಸಿಗೆ ಐಷಾರಾಮಿ ಹೋಟೆಲ್ ರೂಂ, ದಿನದ ಬಾಡಿಗೆ 17.5 ಲಕ್ಷ ರೂ!

    ಧೋನಿ ದೇಶಭಕ್ತಿಯ ಪ್ರತೀಕವಾಗಿ ನಿವೃತ್ತಿಗೆ ಸ್ವಾತಂತ್ರ್ಯದ ದಿನವನ್ನೇ ಆರಿಸಿಕೊಂಡಿದ್ದರು ಎಂದೂ ಹೇಳಲಾಗಿತ್ತು. ದೇಶಭಕ್ತಿಗೆ ಸ್ವಾತಂತ್ರ್ಯೋತ್ಸವಕ್ಕಿಂತ ಉತ್ತಮವಾದ ದಿನವಿಲ್ಲ. ಹೀಗಾಗಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಲು ಅದೇ ದಿನವನ್ನು ಆಯ್ಕೆ ಮಾಡಿಕೊಂಡಿದ್ದರು ಎನ್ನಲಾಗಿತ್ತು. ಧೋನಿ ನಿವೃತ್ತಿ ಪೋಸ್ಟ್‌ನಲ್ಲಿ 4 ನಿಮಿಷ, 7 ಸೆಕೆಂಡ್‌ಗಳ ವಿಡಿಯೋದಲ್ಲಿ 15 ವರ್ಷಗಳ ವೃತ್ತಿಜೀವನದ ವಿವಿಧ ಸಿಹಿ-ಕಹಿ ಕ್ಷಣಗಳ ಚಿತ್ರಗಳನ್ನು ಪ್ರಕಟಿಸಿದ್ದರು. ಅದರ ಹಿನ್ನೆಲೆಯಲ್ಲಿ ದಿಗ್ಗಜ ಗಾಯಕ ಮುಕೇಶ್ ಅವರ ‘ಮೈ ಪಲ್ ದೋ ಪಲ್ ಕಾ ಶಾಯರ್ ಹುಂ’ ಹಾಡು ಇತ್ತು. ಇದು ಧೋನಿ ಅವರ ನೆಚ್ಚಿನ ಹಾಡು ಮಾತ್ರವಲ್ಲ, ಅವರು ಇದನ್ನು ಆಗಾಗ ಹಾಡುತ್ತಿರುತ್ತಾರೆ.

    40 ವರ್ಷದ ಧೋನಿ ಈಗ ಐಪಿಎಲ್ 14ನೇ ಆವೃತ್ತಿಯ 2ನೇ ಭಾಗದಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ತಂಡವನ್ನು ಮುನ್ನಡೆಸಲು ಯುಎಇಯಲ್ಲಿ ಸಿದ್ಧತಾ ಶಿಬಿರದಲ್ಲಿದ್ದಾರೆ. ಭಾರತ ಪರ 90 ಟೆಸ್ಟ್, 350 ಏಕದಿನ ಮತ್ತು 98 ಟಿ20 ಪಂದ್ಯ ಆಡಿರುವ ಧೋನಿ ಕ್ರಮವಾಗಿ 4976, 10773 ಮತ್ತು 1617 ರನ್ ಗಳಿಸಿದ್ದಾರೆ. ಜತೆಗೆ ವಿಕೆಟ್ ಕೀಪಿಂಗ್‌ನಲ್ಲೂ ಹಲವು ದಾಖಲೆಗಳ ಒಡೆಯರಾಗಿದ್ದಾರೆ.

    VIDEO | ಟೀಮ್ ಇಂಡಿಯಾ ಜೆರ್ಸಿ ಧರಿಸಿ ಲಾರ್ಡ್ಸ್ ಮೈದಾನಕ್ಕೆ ನುಗ್ಗಿದ ಇಂಗ್ಲೆಂಡ್ ಪ್ರೇಕ್ಷಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts