More

    ಸ್ಟಂಪಿಂಗ್​ನಲ್ಲಿ ಎಂ.ಎಸ್​. ಧೋನಿ ಪಿಕ್​ಪಾಕೆಟ್​ಗಿಂತಲೂ ವೇಗವಂತೆ: ಹೇಳಿದ್ಯಾರು ಗೊತ್ತಾ?

    ನವದೆಹಲಿ: ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿರುವ ಕೂಲ್​ ಕ್ಯಾಪ್ಟನ್​ ಖ್ಯಾತಿಯ ಮಹೇಂದ್ರ ಸಿಂಗ್​ ಧೋನಿ ಅವರನ್ನು ಟೀಮ್​ ಇಂಡಿಯಾದ ಮುಖ್ಯ ತರಬೇತುದಾರ ರವಿಶಾಸ್ತ್ರಿ ಅವರು ಕೊಂಡಾಡಿದ್ದಾರೆ.

    ನಾಯಕತ್ವದಲ್ಲಿ ಟೀಮ್​ ಇಂಡಿಯಾಗೆ ಹೊಸ ಆಯಾಮವನ್ನು ತಂದು ಕೊಟ್ಟ ಧೋನಿ ಅವರನ್ನು ಕ್ರಿಕೆಟ್​ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠರಲ್ಲಿ ಒಬ್ಬರು ಎಂದು ರವಿಶಾಸ್ತ್ರಿ ಪರಿಗಣಿಸಿದ್ದಾರೆ.

    ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ಬೈ ಹೇಳಿದ ಧೋನಿ ಕುರಿತು ಪತ್ನಿ ಸಾಕ್ಷಿಯಿಂದ ಭಾವುಕ ಸಂದೇಶ!

    ಈ ವ್ಯಕ್ತಿ (ಧೋನಿ) ಯಾವುದರಲ್ಲೂ ಎರಡನೇಯವ ಎಂಬ ಮಾತೇ ಇಲ್ಲ. ಆತ ಎಲ್ಲಿಂದ ಬಂದರೋ ಅಲ್ಲಿಂದ ಕ್ರಿಕೆಟ್​ ಅನ್ನು ಎಲ್ಲ ಸಮಯದಲ್ಲೂ ಬದಲಾಯಿಸಿದ್ದಾರೆ. ಅವರ ಬ್ಯೂಟಿ ಏನೆಂದರೆ ಎಲ್ಲ ಮಾದರಿಯ ಕ್ರಿಕೆಟ್​ನಲ್ಲೂ ಬದಲಾವಣೆಯನ್ನು ತಂದರು. ಟಿ20 ವಿಶ್ವಕಪ್​, ಅನೇಕ ಐಪಿಎಲ್​ ಕಿರೀಟವನ್ನು ಜಯಗಳಿಸಿದರು. ಏಕದಿನ ವಿಶ್ವಕಪ್​ ಗೆದ್ದುಕೊಟ್ಟರು. ಟೆಸ್ಟ್​ ಕ್ರಿಕೆಟ್​ನಲ್ಲಿ ದೇಶವನ್ನು ನಂಬರ್​ ಒನ್​ ಸ್ಥಾನಕ್ಕೆ ತೆಗೆದುಕೊಂಡು ಹೋದರು ಎಂದು ರವಿಶಾಸ್ತ್ರಿ ಶ್ಲಾಘಿಸಿದ್ದಾರೆ.

    ಓರ್ವ ವಿಕೆಟ್​ ಕೀಪರ್​ ಆಗಿ ಅನೇಕ ಬ್ಯಾಟ್ಸ್​ಮನ್​ಗಳಿಗೆ ಅವರು ಸಿಂಹಸ್ವಪ್ನವಾಗಿದ್ದರು. ತುಂಬಾ ಸ್ಟಂಪಿಂಗ್​ ಮತ್ತು ರನೌಟ್​ ಮಾಡಿರುವ ಅವರ ಕೈಗಳು ಪಿಕ್​ಪಾಕೆಟ್​ಗಿಂತಲೂ ವೇಗವಾಗಿದೆ ಎಂದು ರವಿಶಾಸ್ತ್ರಿಯವರು ಬಣ್ಣಿಸಿದ್ದಾರೆ.

    ಅಂದಹಾಗೆ ಧೋನಿ 2014ರಲ್ಲೇ ಟೆಸ್ಟ್​ ಕ್ರಿಕೆಟ್​ಗೆ​ ಗುಡ್​ಬೈ ಹೇಳಿದ್ದರು. ನಿನ್ನೆ ಎಲ್ಲರೂ 74ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿರುವಾಗಲೇ ಧೋನಿ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದರು.

    ಇದನ್ನೂ ಓದಿ: ಟೀಮ್​ ಇಂಡಿಯಾ ಕ್ಯಾಪ್ಟನ್​ ಆಗಿ ಎಲ್ಲರನ್ನು ಚಕಿತಗೊಳಿಸಿದ ಧೋನಿಯ 5 ದೃಢ ನಿರ್ಧಾರಗಳಿವು!

    ಧೋನಿ 350 ಏಕದಿನ ಪಂದ್ಯ 98 ಟಿ20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಏಕದಿನದಲ್ಲಿ 10 ಶತಕ ಹಾಗೂ 73 ಅರ್ಧಶತಕಗಳೊಂದಿಗೆ 50.57 ಸರಾಸರಿಯಲ್ಲಿ 10,773 ರನ್​ ಗಳಿಸಿದ್ದಾರೆ. ಟಿ20ಯಲ್ಲಿ 2 ಅರ್ಧಶತಕಗಳೊಂದಿಗೆ 37.60 ರನ್​ ಸರಾಸರಿಯಲ್ಲಿ 1,617 ರನ್​ ಕಲೆ ಹಾಕಿದ್ದಾರೆ. (ಏಜೆನ್ಸೀಸ್​)

    ಥ್ಯಾಂಕ್ ಯೂ ಧೋನಿ: 15 ವರ್ಷದ ಟೀಂ ಇಂಡಿಯಾ ಜರ್ನಿಗೆ ವಿದಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts