More

    ಎಂಎಸ್ ಧೋನಿಗೆ ಇಂದು 40ನೇ ಜನ್ಮದಿನದ ಸಂಭ್ರಮ, ಅವರ 40 ದಾಖಲೆಗಳು ಹೀಗಿವೆ…

    ಬೆಂಗಳೂರು: ಭಾರತೀಯ ಕ್ರಿಕೆಟ್ ಇತಿಹಾಸ ಕಂಡ ಶ್ರೇಷ್ಠ ನಾಯಕ ಹಾಗೂ ಅತ್ಯುತ್ತಮ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಎನಿಸಿರುವ ಮಹೇಂದ್ರ ಸಿಂಗ್ ಧೋನಿಗೆ ಬುಧವಾರ 40ನೇ ಜನ್ಮದಿನದ ಸಂಭ್ರಮ. ಕಳೆದ ವರ್ಷ ಆಗಸ್ಟ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಬಳಿಕ ಐಪಿಎಲ್‌ನಲ್ಲಿ ಮಾತ್ರ ಆಡುತ್ತಿರುವ ಧೋನಿ, ರಾಂಚಿಯ ಮನೆಯಲ್ಲೇ ಪತ್ನಿ ಸಾಕ್ಷಿ ಮತ್ತು ಪುತ್ರಿ ಝಿವಾ ಜತೆಗೆ ಸರಳವಾಗಿ ಹುಟ್ಟುಹಬ್ಬ ಆಚರಿಸಲಿದ್ದಾರೆ. ಸೆಪ್ಟೆಂಬರ್‌ನಲ್ಲಿ ಐಪಿಎಲ್ 14ನೇ ಆವೃತ್ತಿ ಯುಎಇಯಲ್ಲಿ ಪುನರಾರಂಭಗೊಂಡಾಗ ಧೋನಿ ಚೆನ್ನೈ ಸೂಪರ್‌ಕಿಂಗ್ಸ್ ನಾಯಕರಾಗಿ ಮತ್ತೆ ಕಣಕ್ಕಿಳಿಯಲಿದ್ದಾರೆ. 2007ರ ಟಿ20 ಮತ್ತು 2011ರ ಏಕದಿನ ವಿಶ್ವಕಪ್ ವಿಜೇತ ನಾಯಕ ಧೋನಿ, ಭಾರತ ಪರ 90 ಟೆಸ್ಟ್, 350 ಏಕದಿನ ಮತ್ತು 98 ಟಿ20 ಪಂದ್ಯ ಆಡಿದ್ದು, ಒಟ್ಟು 15 ಸಾವಿರಕ್ಕೂ ಅಧಿಕ ರನ್ ಗಳಿಸಿದ್ದಾರೆ. ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದ 40 ಪ್ರಮುಖ ಸಾಧನೆಗಳ ಸಂಕ್ಷಿಪ್ತ ವಿವರ ಇಲ್ಲಿದೆ.

    1. ಐಸಿಸಿಯ ಎಲ್ಲ ಟ್ರೋಫಿಗಳನ್ನು (ಟಿ20 ವಿಶ್ವಕಪ್, ಏಕದಿನ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ, ಟೆಸ್ಟ್ ಚಾಂಪಿಯನ್‌ಷಿಪ್ ಗದೆ) ಜಯಿಸಿದ ವಿಶ್ವದ ಏಕೈಕ ನಾಯಕ.

    2. ಏಕದಿನ ಮತ್ತು ಟಿ20 ವಿಶ್ವಕಪ್ ಜಯಿಸಿದ ಏಕೈಕ ನಾಯಕ.

    3. ಟಿ20 ವಿಶ್ವಕಪ್ ಜಯಿಸಿದ ಮೊದಲ ನಾಯಕ.

    4. ಏಕದಿನ ವಿಶ್ವಕಪ್ ಜಯಿಸಿದ 2ನೇ ಭಾರತೀಯ ನಾಯಕ.

    5. ಐಸಿಸಿ ಚಾಂಪಿಯನ್ಸ್ ಟ್ರೋಫಿ ಜಯಿಸಿದ 2ನೇ ಭಾರತೀಯ ನಾಯಕ.

    6. ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ (10,773) ರನ್ ಸಿಡಿಸಿದ ಭಾರತೀಯ ವಿಕೆಟ್ ಕೀಪರ್‌ಬ್ಯಾಟ್ಸ್‌ಮನ್.

    7. ಐಸಿಸಿ ವರ್ಷದ ಏಕದಿನ ಆಟಗಾರ ಪ್ರಶಸ್ತಿಯನ್ನು (2008, 2009) ಸತತ 2 ಬಾರಿ ಜಯಿಸಿದ ಮೊದಲ ಆಟಗಾರ.

    8. ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ಖೇಲ್‌ರತ್ನಕ್ಕೆ ಭಾಜನರಾದ 2ನೇ ಕ್ರಿಕೆಟಿಗ.

    9. ಕಪಿಲ್ ದೇವ್ ಬಳಿಕ ಭಾರತೀಯ ಸೇನೆಯ ಗೌರವ ಲೆಫ್ಟಿನೆಂಟ್ ಕರ್ನಲ್ ಪದವಿ ಪಡೆದ 2ನೇ ಕ್ರಿಕೆಟಿಗ.

    10. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ಸ್ಟಂಪಿಂಗ್ (195) ವಾಡಿರುವ ವಿಕೆಟ್ ಕೀಪರ್.

    11. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾಯಕನಾಗಿ 2ನೇ ಅತ್ಯಧಿಕ ಸಿಕ್ಸರ್ (204).

    12. ಅತ್ಯಧಿಕ ಏಕದಿನ (110) ಪಂದ್ಯ ಜಯಿಸಿದ ಭಾರತೀಯ ನಾಯಕ.

    13. ಅತ್ಯಧಿಕ ಟಿ20 (41) ಪಂದ್ಯ ಜಯಿಸಿದ ನಾಯಕ.

    14. ಅತ್ಯಧಿಕ (332) ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ನಾಯಕತ್ವ.

    15. 100ಕ್ಕೂ ಅಧಿಕ ಏಕದಿನ ಪಂದ್ಯ ಜಯಿಸಿದ ಮೊದಲ ಆಸ್ಟ್ರೇಲಿಯೇತರ ನಾಯಕ.

    16. ಏಕದಿನ ಕ್ರಿಕೆಟ್‌ನಲ್ಲಿ 200 ಸಿಕ್ಸರ್ ಸಿಡಿಸಿದ ಮೊದಲ ಭಾರತೀಯ.

    17. ಏಕದಿನ ಕ್ರಿಕೆಟ್ ಇನಿಂಗ್ಸ್‌ನಲ್ಲಿ ಅತ್ಯಧಿಕ ವೈಯಕ್ತಿಕ ರನ್ (183*) ಸಿಡಿಸಿದ ವಿಕೆಟ್ ಕೀಪರ್.

    18. ನಾಯಕನಾಗಿ ಅತ್ಯಧಿಕ ಟಿ20 (72) ಅಂತಾರಾಷ್ಟ್ರೀಯ ಪಂದ್ಯ.

    19. ಭಾರತವನ್ನು ಐಸಿಸಿ ಟೆಸ್ಟ್ ರ‌್ಯಾಂಕಿಂಗ್‌ನಲ್ಲಿ ನಂ. 1 ಪಟ್ಟಕ್ಕೇರಿಸಿದ ಮೊದಲ ನಾಯಕ.

    20. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿವೇಗದ ಶತಕ (93 ಎಸೆತ) ಸಿಡಿಸಿದ ಭಾರತೀಯ ವಿಕೆಟ್ ಕೀಪರ್.

    21. ಟೆಸ್ಟ್ ಕ್ರಿಕೆಟ್ ಇನಿಂಗ್ಸ್‌ನಲ್ಲಿ ಅತ್ಯಧಿಕ (224) ರನ್ ಗಳಿಸಿದ ಭಾರತೀಯ ವಿಕೆಟ್ ಕೀಪರ್.

    22. ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಧಿಕ ಬಲಿ (294) ಪಡೆದ ಭಾರತೀಯ ವಿಕೆಟ್ ಕೀಪರ್.

    23. ಆಸ್ಟ್ರೇಲಿಯಾದಲ್ಲಿ ಕ್ಲೀನ್‌ಸ್ವೀಪ್ (2016ರ ಟಿ20 ಸರಣಿ) ಸಾಧಿಸಿದ ಮೊದಲ ನಾಯಕ.

    24. ಐಸಿಸಿ ಏಕದಿನ ರ‌್ಯಾಂಕಿಂಗ್‌ನಲ್ಲಿ ಅತಿವೇಗವಾಗಿ ನಂ. 1 ಪಟ್ಟಕ್ಕೆ (42 ಇನಿಂಗ್ಸ್) ಏರಿದ ಬ್ಯಾಟ್ಸ್‌ಮನ್.

    25. ಸಿಕ್ಸರ್ ಮೂಲಕವೇ ಅತ್ಯಧಿಕ ಏಕದಿನ ಪಂದ್ಯ (9) ಗೆದ್ದುಕೊಟ್ಟ ಆಟಗಾರ.

    26. ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ಬಾರಿ (84) ಔಟಾಗದೆ ಉಳಿದ ಆಟಗಾರ.

    27. ಏಕದಿನದಲ್ಲಿ ಅತ್ಯಧಿಕ ಬಲಿ (434) ಪಡೆದ ಭಾರತೀಯ ವಿಕೆಟ್ ಕೀಪರ್.

    28. 50ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ ಏಕದಿನದಲ್ಲಿ 10 ಸಾವಿರ ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್.

    29. ಟೆಸ್ಟ್ ಕ್ರಿಕೆಟ್‌ನಲ್ಲಿ 50 ಸಿಕ್ಸರ್ ಸಿಡಿಸಿದ ಮೊದಲ ಭಾರತೀಯ ನಾಯಕ.

    30. ಟೆಸ್ಟ್ ಪಂದ್ಯವೊಂದರಲ್ಲಿ ಅತ್ಯಧಿಕ ಬಲಿ (9) ಪಡೆದ ಭಾರತೀಯ ವಿಕೆಟ್ ಕೀಪರ್.

    31. ಅತ್ಯಧಿಕ ಏಕದಿನ ಪಂದ್ಯಗಳಲ್ಲಿ ನಾಯಕತ್ವ ವಹಿಸಿದ ವಿಕೆಟ್ ಕೀಪರ್ (200).

    32. ಏಕದಿನ ಪಂದ್ಯದಲ್ಲಿ 6ನೇ ಕ್ರವಾಂಕದಲ್ಲಿ ಬ್ಯಾಟಿಂಗ್ ವಾಡಿದಾಗ ಸರ್ವಾಧಿಕ ರನ್ (4 ಸಾವಿರಕ್ಕೂ ಅಧಿಕ) ಗಳಿಕೆ.

    33. ಏಕದಿನದಲ್ಲಿ 7 ಅಥವಾ ಅದಕ್ಕಿಂತ ಕೆಳಗಿನ ಕ್ರವಾಂಕದಲ್ಲಿ ಬ್ಯಾಟಿಂಗ್ ವಾಡಿದಾಗ 2 ಶತಕ ಸಿಡಿಸಿದ ಏಕೈಕ ಆಟಗಾರ.

    34. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿಕೆಟ್ ಕೀಪರ್ ಆಗಿ ಆಡಿದರೂ ಅತ್ಯಧಿಕ ಎಸೆತ (132) ಬೌಲಿಂಗ್ ವಾಡಿದ ದಾಖಲೆ.

    35. ಟಿ20 ಕ್ರಿಕೆಟ್‌ನಲ್ಲಿ ಶೂನ್ಯ ಗಳಿಸದೆ ಅತ್ಯಧಿಕ ಇನಿಂಗ್ಸ್ (82) ಆಟ.

    36. ಟಿ20 ಕ್ರಿಕೆಟ್‌ನಲ್ಲಿ ಚೊಚ್ಚಲ ಅರ್ಧಶತಕ ಸಿಡಿಸುವುದಕ್ಕೆ ಮುನ್ನ ಅತ್ಯಧಿಕ ರನ್ (1,153) ಗಳಿಕೆ.

    37. ಟಿ20 ಕ್ರಿಕೆಟ್‌ನಲ್ಲಿ ಅತ್ಯಧಿಕ ಕ್ಯಾಚ್ (57), ಸ್ಟಂಪಿಂಗ್ (34) ಬಲಿ ಪಡೆದ ವಿಕೆಟ್ ಕೀಪರ್.

    38. ಟಿ20 ಇನಿಂಗ್ಸ್ ಒಂದರಲ್ಲಿ ಅತ್ಯಧಿಕ ಕ್ಯಾಚ್ (5) ವಿಶ್ವದಾಖಲೆ.

    39. ಏಕದಿನ ಕ್ರಿಕೆಟ್‌ನಲ್ಲಿ ಯಶಸ್ವಿ ಚೇಸಿಂಗ್ ವೇಳೆ ಅತ್ಯಧಿಕ ಬಾರಿ ಅಜೇಯ ಮತ್ತು ಗರಿಷ್ಠ ಸರಾಸರಿ.

    40. ಸಚಿನ್, ಗಂಗೂಲಿ, ದ್ರಾವಿಡ್ ಬಳಿಕ ಏಕದಿನ ಕ್ರಿಕೆಟ್‌ನಲ್ಲಿ 10 ಸಾವಿರ ರನ್ ಪೂರೈಸಿದ 4ನೇ ಭಾರತೀಯ ಬ್ಯಾಟ್ಸ್‌ಮನ್.

    ಬ್ಯಾಟ್ ಪಕ್ಕದ ಮನೆಯವನ ಹೆಂಡ್ತಿ ಇದ್ದಂತೆ ಎಂದ ದಿನೇಶ್​ ಕಾರ್ತಿಕ್‌ಗೆ ತಾಯಿ-ಪತ್ನಿಯಿಂದ ಕ್ಲಾಸ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts