More

    ‘ಮಿಸ್ಟರ್​ ಬ್ಯಾಚುಲರ್​’ ಆಗಿ ನಾಳೆ ಚಿತ್ರಮಂದಿರಕ್ಕೆ ಬರಲಿದ್ದಾರೆ ‘ಡಾರ್ಲಿಂಗ್​’ ಕೃಷ್ಣ

    ಬೆಂಗಳೂರು: ಕಳೆದ ವರ್ಷ ‘ಡಾರ್ಲಿಂಗ್​’ ಕೃಷ್ಣ ಅಭಿನಯದ ನಾಲ್ಕು ಚಿತ್ರಗಳು ಬಿಡುಗಡೆಯಾಗಿದ್ದವು. ಈ ಪೈಕಿ ‘ಲವ್​ ಮಾಕ್ಟೇಲ್​ 2’ ಮತ್ತು ‘ದಿ ಲಕ್ಕಿ ಮ್ಯಾನ್​’ ಚಿತ್ರಗಳು ಗಮನ ಸೆಳೆದರೆ, ‘ಲೋಕಲ್​ ಟ್ರೈನ್​’ ಮತ್ತು ‘ದಿಲ್​ ಪಸಂದ್’ ಚಿತ್ರಗಳು ಹೇಳ ಹೆಸರಿಲ್ಲದಂತೆ ಮಾಯವಾದವು. ಈಗ ಹೊಸ ವರ್ಷದ ಮೊದಲ ಶುಕ್ರವಾರ (ಜ.6) ಕೃಷ್ಣ ಅಭಿನಯದ ಚಿತ್ರವೊಂದು ಬಿಡುಗಡೆಯಾಗುತ್ತಿದೆ. ಅದೇ ‘ಮಿಸ್ಟರ್​ ಬ್ಯಾಚುಲರ್​’.

    ಇದನ್ನೂ ಓದಿ: ಮತ್ತೆ ಒಂದಾಗ್ತಾರಾ ವಿಜಯ್​ ದೇವರಕೊಂಡ, ರಶ್ಮಿಕಾ ಮಂದಣ್ಣ?

    ‘ಮಿಸ್ಟರ್​ ಬ್ಯಾಚುಲರ್​’ ಚಿತ್ರವನ್ನು ನಾಯ್ಡು ಎನ್ನುವವರು ನಿರ್ದೇಶನ ಮಾಡಿದರೆ, ಶ್ರೀನಿವಾಸ್, ಹನುಮಂತ ರಾವ್ ಹಾಗೂ ಸ್ವರ್ಣಲತ ನಿರ್ಮಾಣ ಮಾಡಿದ್ದಾರೆ, ಕರೊನಾಗೂ ಮುಂಚೆಯೇ ಪ್ರಾರಂಭವಾದ ಈ ಚಿತ್ರದಲ್ಲಿ ಕೃಷ್ಣಗೆ ನಾಯಕಿಯರಾಗಿ ನಿಮಿಕಾ ರತ್ನಾಕರ್​ ಮತ್ತು ಮಿಲನಾ ನಟಿಸಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ಮತ್ತು ಶ್ರೀ ಕ್ರೇಜಿಮೈಂಡ್ಸ್ ಛಾಯಾಗ್ರಹಣ ಈ ಚಿತ್ರಕ್ಕಿದೆ.

    ಈ ಚಿತ್ರದ ಕುರಿತು ಮಾತನಾಡುವ ಕೃಷ್ಣ, ‘ಈ ಚಿತ್ರದ ಮೇಲೆ ನನಗೆ ವಿಶೇಷ ಪ್ರೀತಿ. ಏಕೆಂದರೆ, ನಾನು ಈ ಚಿತ್ರ ಒಪ್ಪಿಕೊಂಡ ನಂತರ ನಿರ್ಮಾಪಕನಾಗಿ ‘ಲವ್ ಮಾಕ್ಟೇಲ್’ ಚಿತ್ರ ಮಾಡಿದ್ದು. ನಾಯ್ಡು ಕಥೆ ಹೇಳಲು ಬಂದಾಗಲೇ ಕಥೆ ಕೇಳಿ ಸಾಕಷ್ಟು ಎಂಜಾಯ್ ಮಾಡಿದ್ದೆ. ನಾನು ಇಲ್ಲಿಯವರೆಗೆ ಯಾವ ಚಿತ್ರದಲ್ಲೂ ಹಾಕಿರದಷ್ಟು ಬಟ್ಟೆಗಳನ್ನು ಈ ಚಿತ್ರದಲ್ಲಿ ಹಾಕಿದ್ದೇನೆ. ಮಿಲನಾ ನಾಗರಾಜ್ ಅವರು ಈ ಚಿತ್ರದ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ನಿಮಿಕಾ ರತ್ನಾಕರ್ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ’ ಎನ್ನುತ್ತಾರೆ ಕೃಷ್ಣ.

    ಇದನ್ನೂ ಓದಿ: ಡಾಲಿ ಗೆಳೆಯರ ಬಳಗದಿಂದ ‘ಆರ್ಕೆಸ್ಟ್ರಾ ಮೈಸೂರು’

    ‘ಮಿಸ್ಟರ್​ ಬ್ಯಾಚುಲರ್​’ ಚಿತ್ರದಲ್ಲಿ ಕೃಷ್ಣ ಮತ್ತು ಮಿಲನಾ ಜತೆಗೆ ಚಿಕ್ಕಣ್ಣ, ಸಾಧು ಕೋಕಿಲ, ಸ್ವಾತಿ, ಮಂಜುನಾಥ ಹೆಗಡೆ, ಚಿಕ್ಕಣ್ಣ, ಅಯ್ಯಪ್ಪ ಪಿ ಶರ್ಮ, ಯಶ್​ ಶೆಟ್ಟಿ ಮುಂತಾದವರು ನಟಿಸಿದ್ದಾರೆ.

    ‘ಗೂರ್ಖಾ’ ಚಿತ್ರದಿಂದ ಹಿಂದೆ ಸರಿದ ಅಕ್ಷಯ್​ ಕುಮಾರ್​; ಕಾರಣ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts