More

    ಜಯದೇವ ಮೆಟ್ರೋ ನಿಲ್ದಾಣಕ್ಕೆ ತೇಜಸ್ವಿ ಸೂರ್ಯ ಭೇಟಿ; ಪ್ರಗತಿ ಕಾಮಗಾರಿಗಳ ಪರಿಶೀಲನೆ

    ಬೆಂಗಳೂರು: ಬನ್ನೇರುಟ್ಟ ರಸ್ತೆಯ ಜಯದೇವ ಆಸ್ಪತ್ರೆ ಬಳಿ ನಿರ್ಮಾಣವಾಗುತ್ತಿರುವ ನಗರದ ಅತಿದೊಡ್ಡ ಮೆಟ್ರೋ ನಿಲ್ದಾಣಕ್ಕೆ ದಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಬುಧವಾರ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು. ಈ ವೇಳೆ ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ ಸಾಥ್​ ಕೊಟ್ಟರು.

    ಜಯದೇವ ಮೆಟ್ರೋ ನಿಲ್ದಾಣ ಮಲ್ಟಿ ಲೆವೆಲ್​ ಇಂಟರ್​ಚೇಂಜ್​ ನಿಲ್ದಾಣವಾಗಿದ್ದು, ಪ್ರಗತಿ ಕಾರ್ಯಗಳ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಬಹುದಿನಗಳ ಬೇಡಿಕೆಯಾಗಿರುವ ಆರ್​.ವಿ. ರೋಡ್​& ಬೊಮ್ಮಸಂದ್ರ ನಡುವಿನ 18.8 ಕಿ.ಮೀ. ಗಳ ಮೆಟ್ರೋ ಹಳದಿ ಮಾರ್ಗದ ಕಾಮಗಾರಿಯನ್ನು ಮುಂದಿನ ಫೆಬ್ರವರಿ ಒಳಗಾಗಿ ಪೂರ್ಣಗೊಳಿಸಬೇಕು. ಬಳಿಕ ಶ್ರೀವೇ ಸಾರ್ವಜನಿಕ ಸೇವೆಗೆ ಒದಗಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

    ಇದನ್ನೂ ಓದಿ: Mandya: Artists In Kaveri Protest: ಕಾವೇರಿ ಹೋರಾಟದ ಸ್ಥಳಕ್ಕೆ ಬಂದ ಯಮಧರ್ಮ, ಚಿತ್ರಗುಪ್ತ

    ನಗರದಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವುದು ನಮ್ಮ ಮುಂದಿರುವ ದೊಡ್ಡ ಸವಾಲು. ಜಯದೇವ ನಿಲ್ದಾಣದ ಮೂಲಕ ಹಾದು ಹೋಗುವ ಹಳದಿ ಮಾರ್ಗದಲ್ಲಿ ಒಂದು ಬಾರಿ ಮೆಟ್ರೋ ಸಂಚಾರ ಆರಂಭವಾದರೆ ನಿತ್ಯ 2.5 ಲಕ್ಷದಷ್ಟು ಜನರು ಓಡಾಡಲಿದ್ದಾರೆ. ಇದರಿಂದ ಸಿಲ್ಕ್​ ಬೋರ್ಡ್​ ಜಂಕ್ಷನ್​ ಹಾಗೂ ಎಲೆಕ್ಟ್ರಾನಿಕ್​ ಸಿಟಿ ಜಂಕ್ಷನ್​ನಲ್ಲಿ ಟ್ರಾಫಿಕ್​ ಸಮಸ್ಯೆಯೂ ಕಡಿಮೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಹಳದಿ ಮಾರ್ಗದಲ್ಲಿ ಓಡಾಡಬೇಕಾದ ರೈಲನ್ನು ಚೀನಾ ಮೂಲದ ಸಂಸ್ಥೆ ಸರಬರಾಜು ಮಾಡಬೇಕಿದೆ. ಒಟ್ಟು 8 ರೈಲುಗಳು ಈ ಮಾರ್ಗಕ್ಕೆ ಬೇಕಾಗಿದ್ದು, ಮೊದಲ ಎರಡು ರೈಲು ಮುಂದಿನ ನವೆಂಬರ್​ನಲ್ಲಿ ಬರಲಿದೆ. ಮುಂದಿನ ಮಾರ್ಚ್​ನಿಂದ ಪ್ರತಿ ತಿಂಗಳು ಎರಡೆರಡು ರೈಲುಗಳನ್ನು ಒದಗಿಸಿಕೊಡುತ್ತೇವೆ. ಇದಕ್ಕೆ ಪೂರಕವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಿಗಬೇಕಾದ ಸಹಕಾರದ ಬಗ್ಗೆ ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ. ಚೈನೀಸ್​ ಕಂಪೆನಿಯ ಕೆಲ ಇಂಜಿನಿಯರ್​ಗಳು ಬೆಂಗಳೂರಿಗೆ ಬಂದು ಕೆಲಸ ಮಾಡಲು ವೀಸಾ ಸಮಸ್ಯೆ ಅಡ್ಡ ಬಂದಿದೆ. ಈ ಬಗ್ಗೆ ವಿದೇಶಾಂಗ ಸಚಿವ ಜೈಶಂಕರ್​ ಅವರಲ್ಲಿ ಚರ್ಚಿಸಿ ಸಮಸ್ಯೆ ಬಗೆ ಹರಿಸಲಾಗುವುದು ಎಂದು ತಿಳಿಸಿದರು.

    https://cutt.ly/MwbxE3f7

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts