More

    ಕಾಂಗ್ರೆಸ್ ದೇಶದ್ರೋಹದ ಪಿತೂರಿ ನಡೆಸುತ್ತಿದೆ ; ಸಂಸದ ಎಸ್.ಮುನಿಸ್ವಾಮಿ ಆರೋಪ

    ಮುಳಬಾಗಿಲು: ಕಾಂಗ್ರೆಸ್ ಪಾಕಿಸ್ತಾನದ ಏಜೆಂಟ್ ರೀತಿ ವರ್ತಿಸುತ್ತಿದ್ದು, ದೇಶದ್ರೋಹಿಗಳ ಜತೆ ಪರೋಕ್ಷವಾಗಿ ಕೈ ಜೋಡಿಸಿ ಗೊಂದಲ ಸೃಷ್ಟಿ ಸುತ್ತಿದೆ ಎಂದು ಸಂಸದ ಎಸ್.ಮುನಿಸ್ವಾಮಿ ಆರೋಪಿಸಿದರು.

    ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗದಲ್ಲಿ ಹಿಂದು ಕಾರ್ಯಕರ್ತನ ಹತ್ಯೆಗೆ ಪಿಎಫ್‌ಐ, ಎಸ್‌ಡಿಪಿಐ ಸಂಘಟಗಳ ಸಂಚು ಇದೆ. ಈ ಬಗ್ಗೆ ಎಂಎಲ್ಸಿ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಕಾಂಗ್ರೆಸ್ ಮುಖಂಡರು ದೇಶ ದ್ರೋಹಿಗಳ ಪರ ನಿಂತು ಕೊಲೆ ತಿರುಚಲು ಹೊರಟಿದ್ದಾರೆ. ಕೆಲವೇ ಕೆಲ ದುಷ್ಟರಿಂದ ಹಿಂದು-ಮುಸ್ಲಿಮರ ಒಗ್ಗಟ್ಟು ಒಡೆಯಲು ಸಾಧ್ಯವಿಲ್ಲ. ತಾಲೂಕಿನಲ್ಲಿ ಹಿಜಾಬ್ ಗೊಂದಲ ಇಲ್ಲದಿದ್ದರೂ ಪ್ರತಿಭಟನೆ ಮಾಡಿ ಹಿಂದು ದೇವರ ಮತ್ತು ಹಿಂದು ಧರ್ಮಕ್ಕೆ ಹಿಯಾಳಿಸಿದ್ದು ಕಾನೂನು ಹೋರಾಟ ಅಣಿಗೊಳಿಸಲಾಗುತ್ತಿದೆ ಎಂದರು.

    ಸೋಮೇಶ್ವರಪಾಳ್ಯ ಶಾಲೆಯಲ್ಲಿ ನಮಾಜ್ ಮಾಡಿದ್ದು ಸೇರಿ ಹಲವು ಲೋಪಗಳಿಗೆ ಆಗಿನ ಬಿಇಒ ಡಿ.ಗಿರಿಜೇಶ್ವರಿದೇವಿ ಪಾತ್ರದ ಶಂಕೆ ಇದೆ. ಅಧಿಕಾರಿಯಾಗಿ ಉತ್ತಮ ನಡವಳಿಕೆ ಇರಬೇಕೇ ಹೊರತು ದುರ್ನಡತೆಯಿಂದ ವರ್ತಿಸಬಾರದು. ಇದಕ್ಕೆ ಸಮಾಜದಲ್ಲಿ ಬೆಂಬಲ ಇಲ್ಲ ಎಂದು ಎಚ್ಚರಿಸಿದರು.

    ಬಿಜೆಪಿ ಮುಸ್ಲಿಂ ವಿರೋಧಿಯಲ್ಲ. ತಲಾಕ್ ವಿರುದ್ಧ ಕಾನೂನು ತಂದು ಮುಸ್ಲಿಂ ಮಹಿಳೆಯರ ಹಕ್ಕು ರಕ್ಷಣೆ ಮಾಡಿದೆ. ಇದನ್ನು ಅರ್ಥ ಮಾಡಿಕೊಳ್ಳುವಲ್ಲಿ ಮಹಿಳೆಯರು ಮುಂದಾಗಬೇಕು. ಮುಸ್ಲಿಮರಿಗೆ ಹಲವು ಕ್ಷೇತ್ರಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ರಾಷ್ಟ್ರಪ್ರೇಮ ಪ್ರತಿಯೊಬ್ಬ ಭಾರತೀಯನಲ್ಲಿ ಇರಬೇಕು ಎಂದರು.

    ನಗರಸಭೆ ಸದಸ್ಯ ಎಂ.ಪ್ರಸಾದ್, ವಿಎಚ್‌ಪಿ ನಗರ ಘಟಕ ಅಧ್ಯಕ್ಷ ಎಚ್.ಎಸ್.ಹರೀಶ್, ಬಿಜೆಪಿ ತಾ. ಅಧ್ಯಕ್ಷ ಬಿ.ಕೆ.ಅಶೋಕ್, ಪ್ರಧಾನ ಕಾರ್ಯದರ್ಶಿ ಬಿ.ಎಸ್.ರಮೇಶ್, ವಿಶ್ವನಾಥರೆಡ್ಡಿ, ಬಿಜೆಪಿ ನಗರ ಘಟಕ ಅಧ್ಯಕ್ಷ ಕಲ್ಲುಪಲ್ಲಿ ಕೆ.ಜೆ.ಮೋಹನ್, ವಿ.ಟಿ.ಶಂಕರ್, ವಿ.ಆದಿನಾರಾಯಣ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts