More

    ಸಂಖ್ಯಾಶಾಸ್ತ್ರದ ಪ್ರಕಾರ ಸಂಸದ ಪ್ರತಾಪ ಸಿಂಹ ಹೆಸರು ಇಂಗ್ಲಿಷ್‌ ನಲ್ಲಿ ಸ್ವಲ್ಪ ಬದಲು

    ಮೈಸೂರು: ಕೆಲವು ರಾಜಕಾರಣಿಗಳು ಸಂಖ್ಯಾ ಶಾಸ್ತ್ರ, ನಾಮಬಲ, ಜ್ಯೋತಿಷ್ಯವನ್ನು ನಂಬುತ್ತಾರೆ. ಇದರಿಂದಲೇ ಕೆಲವು ರಾಜಕಾರಣಿಗಳಿಗೆ ಅದೃಷ್ಟದ ಬಾಗಿಲು ತೆರೆದಿದೆ. ಮಾಜಿ ಸಿಎಂ ಯಡಿಯೂರಪ್ಪ ಸಹ ತಮ್ಮ ಹೆಸರಿನಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದರು. Yeddyurappa ಎಂದು ಇದ್ದ ಹೆಸರನ್ನು Yediyurappa ಎಂದು ಬದಲಾಯಿಸಿಕೊಂಡಿದ್ದರು. 

    ಇದೀಗ ಮೈಸೂರು- ಕೊಡಗು ಲೋಕಸಭಾ ಸದಸ್ಯ ಪ್ರತಾಪ ಸಿಂಹ ಅವರು ತಮ್ಮ ಇಂಗ್ಲಿಷ್‌ ಹೆಸರಿನಲ್ಲಿ ಸಂಖ್ಯಾಶಾಸ್ತ್ರದ ಅನ್ವಯ ಸಣ್ಣ ಬದಲಾವಣೆ ಮಾಡಿಕೊಂಡಿದ್ದಾರೆ. Prathap simha ಎಂಬ ಹೆಸರನ್ನು ಅವರು Pratap simmha ಎಂದು ಬದಲಿಸಿಕೊಂಡಿರುವುದಾಗಿ ಅಫಿಡೆವಿಟ್‌ ಮೂಲಕ ಘೋಷಿಸಿಕೊಂಡಿದ್ದಾರೆ.

    ಎಚ್‌. ವಿಶ್ವನಾಥ್‌ ಅವರು ಕೂಡ ತಮ್ಮ ಹೆಸರಿನ ಹಿಂದೆ ಅಡಗೂರು ಸೇರಿಸಿಕೊಂಡಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು. ರಾಜಕಾರಣಿಗಳು ಮಾತ್ರವಲ್ಲದೆ, ಸಿನಿಮಾ ಕ್ಷೇತ್ರದಲ್ಲೂ ಅನೇಕ ನಟ-ನಟಿಯರು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.

    ಮೋದಿ ನಮ್ಮ ದೇವರು 
    ಇತ್ತೀಚೆಗಷ್ಟೇ ಪ್ರತಾಪ ಸಿಂಹ ಅವರು ಲೋಕಸಭಾ ಚುನಾವಣೆಗೂ, ರಾಜ್ಯಾಧ್ಯಕ್ಷರ ನೇಮಕಕ್ಕೂ ಸಂಬಂಧ ಇಲ್ಲ. ಬಿಜೆಪಿ ಸಂಘಟನೆ ದೃಷ್ಟಿಯಿಂದಷ್ಟೆ ರಾಜ್ಯಾಧ್ಯಕ್ಷರು ಬೇಕು ಎಂದು ಹೇಳಿದ್ದರು. ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ರಾಜ್ಯಾಧ್ಯಕ್ಷರು ಯಾರಾಗಬೇಕು? ಯಾವಾಗ ಮಾಡಬೇಕು? ಇದನ್ನು ನಮ್ಮ ಹೈಕಮಾಂಡ್ ನಿರ್ಧರಿಸುತ್ತದೆ. ಅದನ್ನು ಹೇಳಲು ನಾನು ಬಹಳ ಕಿರಿಯ. ನಾನು ಪಕ್ಷಕ್ಕೆ ಬಂದು ಈಗ 10 ವರ್ಷ ಆಗುತ್ತಿದೆ ಅಷ್ಟೆ. ನಾನು ಪಕ್ಷದ ನೇಮಕ ವಿಚಾರದಲ್ಲಿ ಏನೂ ಹೇಳಲು ಆಗುವುದಿಲ್ಲ ಎಂದು ತಿಳಿಸಿದ್ದರು. ಪಕ್ಷದ ಕಾರ್ಯಕರ್ತರು ರಾಜ್ಯ ರಾಜಕಾರಣಕ್ಕೆ ಬನ್ನಿ ಎಂದು ಶೋಭಾ ಕರಂದ್ಲಾಜೆ ಅವರನ್ನು ಕರೆಯುತ್ತಿದ್ದರು. ನಾನು ಅದೇ ದಾಟಿಯಲ್ಲೇ ಶುಭಾಶಯ ಕೋರಿದ್ದೇನೆ. ನಾವೆಲ್ಲ ಗೆಲ್ಲುವುದು ಪ್ರಧಾನಿ ಮೋದಿ ಅವರ ಹೆಸರಿನಿಂದ, ಮೋದಿ ನಮ್ಮ ದೇವರು. ಲೋಕಸಭಾ ಚುನಾವಣೆ ಮೋದಿ ಹೆಸರಿನಲ್ಲೇ ನಡೆಯುತ್ತದೆ ಎಂದು ಹೇಳಿದರು.

    https://www.vijayavani.net/bengaluru-cm-siddaramaiah-to-hold-janata-darshan-on-nov-27

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts