More

    ನಾಯಿಯ ಡಿಎನ್​ಎ ಪರೀಕ್ಷೆಗೆ ಮುಂದಾದ ಪೊಲೀಸರು: ಕಾರಣ ಕೇಳಿದ್ರೆ ಅಚ್ಚರಿಗೊಳ್ತೀರಾ!

    ಭೋಪಾಲ್​: ಒಂದೇ ಶ್ವಾನವನ್ನು ಇಬ್ಬರು ವ್ಯಕ್ತಿಗಳು ತನ್ನದೆಂದು ವಾದಿಸುತ್ತಿದ್ದು, ಇದೀಗ ಪ್ರಕರಣ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದು, ನಿಜವಾದ ಮಾಲೀಕರು ಯಾರೆಂದು ತಿಳಿಯಲು ನಾಯಿಯ ಡಿಎನ್​ಎ ಪರೀಕ್ಷೆ ಮಾಡಿಸಲು ಪೊಲೀಸರು ಮುಂದಾಗಿದ್ದಾರೆ.

    ಮಧ್ಯಪ್ರದೇಶದ ಹೊಶಾಂಗಾಬಾದ್​ನಲ್ಲಿ ಅಪರೂಪದ ಪ್ರಕರಣ ಬೆಳಕಿಗೆ ಬಂದಿದ್ದು, ಶ್ವಾನ ನನ್ನದೆಂದು ವಾದಕ್ಕಿಳಿದಿರುವ ಪತ್ರಕರ್ತ ಮತ್ತು ರಾಜಕೀಯ ವ್ಯಕ್ತಿಯ ಸಮಸ್ಯೆ ಬಗೆಹರಿಸಲು ಪೊಲೀಸರು ಒಲ್ಲದ ಮನಸ್ಸಿನಿಂದ ಮುಂದಾಗಿದ್ದಾರೆ.

    ಇದನ್ನೂ ಓದಿ: ತೃಪ್ತಿ ದೇಸಾಯಿ ಶಬರಿಮಲೆ ಪ್ರವೇಶ ಯತ್ನದ ಹಿಂದೆ ಬಿಜೆಪಿ ಕೈವಾಡ?: ಫ್ಯಾಕ್ಟ್​ಚೆಕ್​ನಲ್ಲಿ ಸತ್ಯಾಂಶ ಬಯಲು!

    ಪ್ರಕರಣ ಬಗ್ಗೆ ಹೊಶಾಂಗಾಬಾದ್​ನ ದೆಹತ್​ ಪೊಲೀಸ್​ ಠಾಣೆಯ ಉಸ್ತುವಾರಿ ಹೇಮಂತ್​ ಶ್ರೀವಾತ್ಸವ ಮಾತನಾಡಿದ್ದು, ಮೂರು ತಿಂಗಳ ಹಿಂದೆ ಪತ್ರಕರ್ತ ಶದಾಬ್​ ಖಾನ್ ತನ್ನ ಮೂರು ವರ್ಷದ ಕಾಕೋ​ ನಾಯಿ ನಾಪತ್ತೆಯಾಗಿದೆ ಎಂದು ದೂರು ದಾಖಲಿಸಿದ್ದರು. ನವೆಂಬರ್​ 18ರಂದು ಠಾಣೆಗೆ ಬಂದ ಶದಾಬ್​ ಶ್ವಾನವೂ ಅಖಿಲ್​ ಭಾರತೀಯ ವಿದ್ಯಾರ್ಥಿ ಪರಿಷದ್​ (ಎಬಿವಿಪಿ) ನಾಯಕ ಕಾರ್ತಿಕ್​ ಶಿವಾರೆ ಮನೆಯಲ್ಲಿದೆ ಎಂದು ಹೇಳಿ ಪೊಲೀಸರ ಜತೆ ತೆರಳಿ ಶ್ವಾನವನ್ನು ತೆಗೆದುಕೊಂಡು ಬಂದಿದ್ದರು. ಆದರೆ, ನ. 19ರಂದು ಶಿವಾರೆ ಪೊಲೀಸ್​ ಠಾಣೆಗೆ ತೆರಳಿ ಶ್ವಾನ ತನ್ನದೆಂದು ವಾದಿಸಿ, ನಾಯಿಯ ಹೆಸರು ಟೈಗರ್​, ಅದನ್ನು ಕೆಲವು ವಾರಗಳ ಹಿಂದೆ ಇಟಾರ್ಸಿಯಿಂದ ಕೊಂಡು ತಂದಿದ್ದಾಗಿ ತಿಳಿಸಿದರು ಎಂದು ಶ್ರೀವಾತ್ಸವ ಹೇಳಿದ್ದಾರೆ.

    ಅಚ್ಚರಿಯ ವಿಚಾರವೆಂದರೆ ಶ್ವಾನವೂ ಕೊಕೋ ಮತ್ತು ಟೈಗರ್​ ಹೆಸರಿಗೆ ಚೆನ್ನಾಗಿಯೇ ಪ್ರತಿಕ್ರಿಯಿಸುತ್ತದೆ ಮತ್ತು ಇಬ್ಬರೊಂದಿಗೂ ಸಲುಗೆಯಿಂದ ವರ್ತಿಸುತ್ತದೆ. ಹೀಗಾಗಿ ಶ್ವಾನದ ಮಾಲೀಕ ಯಾರೆಂದು ಪತ್ತೆಹಚ್ಚಲು ಗೊಂದಲವಾಗಿದೆ. ಅದಕ್ಕಾಗಿ ಡಿಎನ್​ಎ ಪರೀಕ್ಷೆ ನಡೆಸಲು ಮುಂದಾಗಿದ್ದೇವೆ. ಶ್ವಾನದ ಪೋಷಕರು ಪಂಚ್​ಮರ್ಹಿಯಲ್ಲಿದ್ದಾರೆ ಎಂದು ಶದಾಬ್​ ಹೇಳಿದರೆ, ಇಟಾರ್ಸಿಯಲ್ಲಿದ್ದಾರೆಂದು ಶಿವಾರೆ ತಿಳಿಸಿದ್ದಾರೆ. ಹೀಗಾಗಿ ಪೋಷಕರ ರಕ್ತದ ನಮೂನೆ ತೆಗೆದುಕೊಂಡು ಬರು ಎರಡು ಪೊಲೀಸ್​ ತಂಡಗಳನ್ನು ಕಳುಹಿಸಿದ್ದೇವೆ. ಶುಕ್ರವಾರ ರಾತ್ರಿ ಪಶುವೈದ್ಯರ ಸಹಾಯದಿಂದ ಶ್ವಾನ ರಕ್ತದ ಮಾದರಿಯನ್ನು ತೆಗೆದುಕೊಂಡಿದ್ದೇವೆ. ಅಲ್ಲಿಯವರೆಗೆ ಶ್ವಾನ ಶಿವಾರೆ ಬಳಿಯಿರಲಿ ನಿರ್ಧರಿಸಿದ್ದೇವೆ ಎಂದು ಶ್ರೀವಾತ್ಸವ ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ: ಭಾರಿ ವೈರಲ್​ ಆಗ್ತಿದೆ ಐಆರ್​ಟಿಎಸ್ ಅಧಿಕಾರಿಯ ಲಗ್ನ ಪತ್ರಿಕೆ ಸಂದೇಶ: ನೀವೂ ಫಿದಾ ಆಗೋದು ಗ್ಯಾರೆಂಟಿ!

    ಡಿಎನ್​ಎ ಪರೀಕ್ಷೆಯು ಸತ್ಯವನ್ನು ಹೊರ ಹಾಕಲಿದೆ ಎಂದು ಶದಾಬ್​ ಮತ್ತು ಶಿವಾರೆ ಇಬ್ಬರು ಭರವಸೆ ಹೊಂದಿದ್ದಾರೆ. ಡಿಎನ್​ಎ ಪರೀಕ್ಷೆ ಹೊರತು ಪಡಿಸಿ ವ್ಯಾಕ್ಸಿನೇಷನ್ ಕಾರ್ಡ್​ ಸೇರಿದಂತೆ ಶ್ವಾನ ನನ್ನದೆಂದು ಸಾಬೀತು ಮಾಡುವ ಎಲ್ಲ ದಾಖಲಾತಿಗಳನ್ನು ಪೊಲೀಸರಿಗೆ ನೀಡಿದ್ದೇನೆಂದು ಶದಾಬ್​ ಹೇಳಿದ್ದಾರೆ. ಶದಾಬ್​ ನನ್ನ ಅನುಮತಿ ಇಲ್ಲದೆ ಮನೆಯಿಂದ ಶ್ವಾನವನ್ನು ತೆಗೆದುಕೊಂಡು ಹೋಗಿದ್ದಾರೆ. ಡಿಎನ್​ಎ ಪರೀಕ್ಷೆ ಸತ್ಯವನ್ನು ತಿಳಿಸಲಿದೆ ಎಂದು ಶಿವಾರೆ ಹೇಳಿದ್ದಾರೆ. (ಏಜೆನ್ಸೀಸ್​)

    VIDEO| ದಾಖಲೆ ಬರೆಯುವ ಆಸೆಗೆ ಮೂಕ ಪ್ರಾಣಿಗಳಿಗೆ ಶಿಕ್ಷೆ: ಯುವಕರ ಹುಚ್ಚಾಟಕ್ಕೆ ಭಾರಿ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts