More

    ಡೇಟಿಂಗ್​ ಆ್ಯಪ್​ ವಿರುದ್ಧ ತಿರುಗಿಬಿದ್ದ ನಟಿ, ಟಿಎಂಸಿ ಸಂಸದೆ ನುಸ್ರತ್​ ಜಹಾನ್​..!

    ನವದೆಹಲಿ: ನಟಿ ಹಾಗೂ ತೃಣಮೂಲ ಕಾಂಗ್ರೆಸ್​ ಸಂಸದೆ ನುಸ್ರತ್​ ಜಹಾನ್ ಅವರು ವಿಡಿಯೋ ಡೇಟಿಂಗ್​ ಆ್ಯಪ್ FancyU​ ವಿರುದ್ಧ ತಿರುಗಿಬಿದ್ದಿದ್ದು, ತನ್ನ ಒಪ್ಪಿಗೆ ಇಲ್ಲದೆಯೇ ಫೋಟೋ ಬಳಸಿದ್ದಕ್ಕೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಿದ್ದಾರೆ.

    ಸೋಮವಾರ ಟ್ವೀಟ್​ ಮಾಡಿರುವ ನುಸ್ರತ್​, ಆ್ಯಪ್​ ವಿರುದ್ಧ ದೂರು ನೀಡಿದ್ದು, ನನ್ನ ಅನುಮತಿ ಇಲ್ಲದೆ FancyU​ ಆ್ಯಪ್ ನನ್ನ​ ಫೋಟೋ ಬಳಸಿದೆ. ಇದು ನಿಜಕ್ಕೂ ಸ್ವೀಕೃತವಲ್ಲ. ಈಗಾಗಲೇ ನಾನು ಕಾನೂನು ಕ್ರಮದ ಹೆಜ್ಜೆ ಇಟ್ಟಿದ್ದೇನೆಂದು ಕೋಲ್ಕತ ಸೈಬರ್ ಸೆಲ್​ ಪೊಲೀಸರು ಮತ್ತು ಪೊಲೀಸ್​ ಆಯುಕ್ತ ಅನುಜ್​ ಶರ್ಮಾ ಅವರಿಗೆ ಟ್ಯಾಗ್​ ಮಾಡಿದ್ದು, ಈ ಬಗ್ಗೆ ಗಮನಹರಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ಇದನ್ನೂ ಓದಿ: ಸ್ನೇಹಿತನಿಗೆ ಹೇಳಿದ ಜೋಕ್ಸ್​ ನಿಜವಾಗೋಯ್ತು: ಒಂದೇ ದಿನದಲ್ಲಿ 12 ಕೋಟಿ ರೂ. ಒಡೆಯನಾದ ಯುವಕ!

    ಇದಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿರುವ ಕೋಲ್ಕತ ಅಪರಾಧ ವಿಭಾಗದ ಜಂಟಿ ಆಯುಕ್ತರು ತಕ್ಷಣ ಈ ಬಗ್ಗೆ ಗಮನಹರಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದಿದ್ದಾರೆ.

    ಯಾವುದು ಈ FancyU ಆ್ಯಪ್?
    FancyU ಆ್ಯಪ್​ ತನ್ನ ಬಳಕೆದಾರರಿಗೆ ಜಾಗತಿಕವಾಗಿ ಯಾರೊಂದಿಗಾದರೂ ವಿಡಿಯೋ ಚಾಟ್​ ಮಾಡಲು ಅನುಮತಿ ನೀಡುತ್ತದೆ. ತನ್ನ ಜಾಹಿರಾತು ಪೋಸ್ಟರ್​ನಲ್ಲಿ ಆ್ಯಪ್​ ನುಸ್ರತ್​​ ಅವರ ಫೋಟೋ ಬಳಸಿಕೊಂಡಿದ್ದು, ಲಾಕ್​ಡೌನ್​ ಸಮಯದಲ್ಲಿ ಮನೆಯಲ್ಲೇ ಕುಳಿತು ಹೊಸ ಸ್ನೇಹಿತರನ್ನು ಸಂಪಾದಿಸಿಕೊಳ್ಳಿ ಎಂದು ಪೋಸ್ಟರ್​ನಲ್ಲಿ ಬರೆಯಲಾಗಿದೆ.

    ಇನ್ನು ಕೋವಿಡ್​ ಲಾಕ್​ಡೌನ್​ನಿಂದಾಗಿ ವಿಡಿಯೋ ಚಾಟ್​ ಆ್ಯಪ್​ ಈಗಾಗಲೇ ಲಕ್ಷಾಂತರ ಬಳಕೆದಾರರನ್ನು ತನ್ನ ಬತ್ತಳಿಕೆಗೆ ಹಾಕಿಕೊಂಡಿದೆ. ಗೂಗಲ್​ ಪ್ಲೇಸ್ಟೋರ್​ನಲ್ಲಿ ಲಕ್ಷಾಂತರ ಮಂದಿ ಆ್ಯಪ್​ ಡೌನ್​ಲೋಡ್​ ಮಾಡಿದ್ದಾರೆ. (ಏಜೆನ್ಸೀಸ್​)

    ‘ಮಾದಕ’ ನಟಿಯರಿಗೆ ಮುಂದುವರಿದ ಜೈಲುವಾಸ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts