More

    ಸಂಸದ ಜೊಲ್ಲೆಯಿಂದ ಕ್ಷೇತ್ರದ ಅಭಿವೃದ್ಧಿ

    ಚಿಕ್ಕೋಡಿ: ಹಳ್ಳಿಗಳು ಅಭಿವೃದ್ಧಿಯಾದಾಗ ಮಾತ್ರ ದೇಶ ಅಭಿವೃದ್ಧಿ ಆಗಲು ಸಾಧ್ಯ. ಆ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸಬೇಕು ಎಂದು ಜಿಪಂ ಮಾಜಿ ಸದಸ್ಯ ಮಹೇಶ ಭಾತೆ ಹೇಳಿದ್ದಾರೆ.

    ತಾಲೂಕಿನ ಬೆಳಕೂಡ ಗ್ರಾಮದ ಬಸವ ನಗರದಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ ಅನುದಾನದಡಿ ಮಂಜೂರಾದ 5 ಲಕ್ಷ ರೂ.ವೆಚ್ಚದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಸಂಸದರ ಜನ್ಮದಿನದ ಹಿನ್ನೆಲೆಯಲ್ಲಿ ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ 2.5 ಕೋಟಿ ರೂ. ಅಂದಾಜು ಮೊತ್ತದ ಹಲವು ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ಕಾರ್ಯಕರ್ತರು ನೆರವೇರಿಸಿರುವುದು ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಗ್ರಾಮೀಣ ಕ್ಷೇತ್ರದ ಮೇಲಿರುವ ಕಾಳಜಿಯನ್ನು ಎತ್ತಿ ತೋರಿಸುತ್ತದೆ ಎಂದರು. ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿನ ಪ್ರತಿ ಗ್ರಾಮಗಳಿಗೆ ಮೂಲ ಸೌಕರ್ಯ ಒದಗಿಸುವಲ್ಲಿ ಪ್ರಾಮಾಣಿಕವಾದ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

    ವಿಠ್ಠಲ ಮಾಳಿ, ವಿಜಯ ಕೋಠೆವಾಲೆ, ಬಸವರಾಜ ಡೋಣವಾಡೆ ಮಾತನಾಡಿದರು. ಮಹಾಂತೇಶ ಯಶವಂತ, ಸಂಭಾಜಿ ಚವ್ಹಾಣ, ದೇವರಾಜ ಪಾಶ್ಚಾಪುರೆ, ಪ್ರಭು ಡಬ್ಬಣ್ಣವರ, ವಿಠ್ಠಲ ಮಾಳಿ, ರಮೇಶ ಕಾಳಣ್ಣವರ, ಬಸವರಾಜ ಮಾಳಿ, ಸದಾಶಿವ ಹಳಂಗಳಿ, ರಾಜು ಹರಗಣ್ಣವರ, ಗಣಪತಿ ಮಾಳಿ ಇತರರು ಉಪಸ್ಥಿತರಿದ್ದರು. ಲಕ್ಷ್ಮಣ ಮಾಳಿ ನಿರೂಪಿಸಿದರು.

    ರಾಯಬಾಗ: ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ ಪ್ರಯತ್ನದಿಂದ ಲೋಕಸಭೆ ಸದಸ್ಯರ ಪ್ರದೇಶಾಭಿವೃದ್ಧಿ ಯೋಜನೆಯಡಿ ತಾಲೂಕಿನ ಭಿರಡಿ ಯಲ್ಲಮ್ಮ ದೇವಸ್ಥಾನದ ಹತ್ತಿರ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಮಂಜೂರಾದ 5 ಲಕ್ಷ ರೂ. ಅನುದಾನ ಪತ್ರವನ್ನು ದೇವಸ್ಥಾನ ಕಮಿಟಿ ಅವರಿಗೆ ಸ್ಥಳೀಯ ಮುಖಂಡ ರಾಮಚಂದ್ರ ನಿಶಾನದಾರ ಹಸ್ತಾಂತರಿಸಿ, ಕಾಮಗಾರಿಗೆ ಚಾಲನೆ ನೀಡಿದರು. ಮಹಾದೇವ ಬೊರಗಾಂವೆ, ಮುರಗೇಶ ನಿಶಾನದಾರ, ಸುಭಾಷ ನಿಡೋಣಿ, ಶಿವಲಿಂಗ ನಿಡೋಣಿ, ಶಂಕರ ಭೆಂಡೆ, ಮಹಾಲಿಂಗ ನಿಡೋಣಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts