More

    ಕೋವಿಡ್​ಗೆ ಬಲಿಯಾದ ಭೋಪಾಲ ಅನಿಲ ದುರಂತ ಸಂತ್ರಸ್ತರ ಸಂಖ್ಯೆ ಎಷ್ಟು?

    ಭೋಪಾಲ: ಮಧ್ಯಪ್ರದೇಶದ ಭೋಪಾಲದಲ್ಲಿ 1984ರಲ್ಲಿ ಸಂಭವಿಸಿದ್ದ ಅನಿಲ ದುರಂತದ ಸಂತ್ರಸ್ತರ ಪೈಕಿ ಕೋವಿಡ್​ ಕಾರಣಕ್ಕೆ ಮೃತಪಟ್ಟವರ ಸಂಖ್ಯೆ ಎಷ್ಟು? ನಿನ್ನೆ ಒಂದೇ ದಿನ ಭಿನ್ನ ಅಂಕಿ ಸಂಖ್ಯೆಗಳು ಪ್ರಕಟವಾಗಿರುವ ಕಾರಣ ಇಂಥದ್ದೊಂದು ಪ್ರಶ್ನೆ ಹುಟ್ಟಿಕೊಂಡಿದೆ.

    ಮಧ್ಯಪ್ರದೇಶ ಸರ್ಕಾರ ನಿನ್ನೆ ಪ್ರಕಟಿಸಿರುವ ಡೇಟಾ ಪ್ರಕಾರ, ಕೋವಿಡ್​ಗೆ ಬಲಿಯಾದ ಭೋಪಾಲ ಅನಿಲ ದುರಂತ ಸಂತ್ರಸ್ತರ ಸಂಖ್ಯೆ 102. ಆದರೆ ಕೆಲವು ಎನ್​ಜಿಒಗಳು ಬಹಿರಂಗಪಡಿಸಿರುವ ವರದಿಗಳ ಪ್ರಕಾರ ಕೋವಿಡ್​​ಗೆ ಬಲಿಯಾದ ಅನಿಲ ದುರಂತ ಸಂತ್ರಸ್ತರ ಸಂಖ್ಯೆ 254. ಅನಿಲ ದುರಂತ ಸಂಭವಿಸಿ ನಿನ್ನೆಗೆ 36 ವರ್ಷ. ಹೀಗಾಗಿ ಈ ಕುರಿತ ಅಂಕಿ ಅಂಶಗಳು ನಿನ್ನೆ ಪ್ರಕಟವಾಗಿವೆ.

    ಇದನ್ನೂ ಓದಿ: ಕಾಸರವಳ್ಳಿಗೆ 70; ಎರಡು ಚಿತ್ರೋತ್ಸವಗಳಿಗೆ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’

    ಭೋಪಾಲ ಅನಿಲ ದುರಂತ ಪರಿಹಾರ ಮತ್ತು ಪುನರ್ವಸತಿ ನಿರ್ದೇಶಕ ಬಸಂತ್ ಕುರ್ರೆ ಹೇಳುವ ಪ್ರಕಾರ, ಭೋಪಾಲ ಜಿಲ್ಲೆಯಲ್ಲಿ ಕೋವಿಡ್​ನಿಂದ ಮೃತಪಟ್ಟವರ ಸಂಖ್ಯೆ ಡಿಸೆಂಬರ್ 2ರ ಪ್ರಕಾರ 518. ಇದರಲ್ಲಿ 102 ಅನಿಲ ದುರಂತ ಸಂತ್ರಸ್ತರು. ಈ 102 ಜನರ ಪೈಕಿ 69 ಜನ 50 ವರ್ಷ ವಯಸ್ಸಿನ ಮೇಲ್ಪಟ್ಟವರು. ಇನ್ನುಳಿದ 33 ಜನ 50 ವರ್ಷ ವಯಸ್ಸಿನೊಳಗಿನವರು.

    ಇದನ್ನೂ ಓದಿ:Web Exclusive | ಹಳ್ಳಿಫೈಟ್​ನಲ್ಲಿ ಹುರಿಯಾಳುಗಳ ಸರ್ಕಸ್; ಶಾಸಕರು, ಪ್ರಬಲರ ಭೇಟಿಗೆ ದೌಡು

    ಇದೇ ವೇಳೆ ಭೋಪಾಲ ಗ್ರೂಪ್ ಫಾರ್ ಇನ್​ಫಾರ್ಮೇಶನ್ ಆ್ಯಂಡ್ ಆ್ಯಕ್ಷನ್ ಎಂಬ ಎನ್​ಜಿಒ ಪ್ರತಿನಿಧಿ ರಚನಾ ಧಿಂಗ್ರಾ ಹೇಳುವ ಪ್ರಕಾರ, ಸರ್ಕಾರ ಹೇಳಿದ 518 ಮೃತರ ಪೈಕಿ 450 ಮೃತರ ಮನೆಗಳಿಗೆ ನಾವು ಭೇಟಿ ನೀಡಿದ್ದೇವೆ. ಭೋಪಾಲ ಅನಿಲ ದುರಂತ ಸಂತ್ರಸ್ತರೋ ಅಲ್ಲವೋ ಎಂಬುದನ್ನು ಖಾತರಿಪಡಿಸುವುದಕ್ಕಾಗಿ. ಈ ಪೈಕಿ 254 ಮೃತರು ಅನಿಲ ದುರಂತದ ಸಂತ್ರಸ್ತರೆಂಬುದು ಖಾತರಿಯಾಗಿದೆ. (ಏಜೆನ್ಸೀಸ್)

    ರೈತರ ಓಲೈಕೆಗೆ ಹರಸಾಹಸ; ಇಂದು 2ನೇ ಸುತ್ತಿನ ಮಾತುಕತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts