More

    ತಾಲಿಬಾನನ್ನು ಸ್ವಾತಂತ್ರ್ಯ ಹೋರಾಟಗಾರರಿಗೆ ಹೋಲಿಸಿದ ಸಂಸದ! ದೇಶದ್ರೋಹದ ಪ್ರಕರಣ ದಾಖಲು

    ಲಖನೌ: ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಸಮಾಜವಾದಿ ಪಕ್ಷದ ಸಂಸದ ಮತ್ತು ಇತರ ಇಬ್ಬರ ವಿರುದ್ಧ ತಾಲಿಬಾನ್​​ಅನ್ನು ಭಾರತದ ಸ್ವಾತಂತ್ರ್ಯ ಹೋರಾಟಗಾರರಿಗೆ ಹೋಲಿಸಿದ ಆರೋಪದ ಮೇಲೆ ‘ದೇಶದ್ರೋಹ’ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಚರ್ಖೇಶ್ ಮಿಶ್ರ ಹೇಳಿದ್ದಾರೆ. ತಾಲಿಬಾನ್​ಅನ್ನು ಆತಂಕವಾದಿ ಗುಂಪೆಂದು ಭಾರತ ಸರ್ಕಾರ ಪರಿಗಣಿಸಿರುವ ಕಾರಣದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

    ಅಫ್ಘಾನಿಸ್ತಾನದ ಸನ್ನಿವೇಶದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಮಾಜವಾದಿ ಪಕ್ಷದ ಸಂಸದ ಶಫೀಖುರ್​ ರೆಹಮಾನ್​ ಬರ್ಖ್​​, “ಬ್ರಿಟೀಷರು ಭಾರತವನ್ನಾಳುತ್ತಿದ್ದಾಗ, ನಮ್ಮ ದೇಶ ಸ್ವಾತಂತ್ರ್ಯಕ್ಕಾಗಿ ಹೋರಾಡಿತು. ಈಗ ತಾಲಿಬಾನ್ ತಮ್ಮ ದೇಶವನ್ನು ಸ್ವತಂತ್ರಗೊಳಿಸಿಕೊಂಡು, ತಾವೇ ನಡೆಸಲು ಇಚ್ಛಿಸುತ್ತಾರೆ. ತಾಲಿಬಾನ್​​, ರಷ್ಯ ಮತ್ತು ಅಮೆರಿಕಾದಂತಹ ಬಲಶಾಲಿಗಳನ್ನು ತಮ್ಮ ದೇಶದಲ್ಲಿ ನೆಲೆಸಲು ಬಿಡದಂಥ ಶಕ್ತಿಯಾಗಿದೆ” ಎಂದು ಮಂಗಳವಾರ ಹೇಳಿಕೆ ನೀಡಿದ್ದರು. ಜಿಲ್ಲೆಯ ಇನ್ನಿಬ್ಬರು ವ್ಯಕ್ತಿಗಳು ಫೇಸ್​ಬುಕ್​ನಲ್ಲಿ ತಾಲಿಬಾನ್​​ಅನ್ನು ಭಾರತದ ಸ್ವಾತಂತ್ರ್ಯ ಹೋರಾಟಗಾರರಿಗೆ ಹೋಲಿಸಿದ್ದರು ಎನ್ನಲಾಗಿದೆ.

    ಆದರೆ ಇಂದು ತಾವು ಆ ರೀತಿ ಹೇಳಿಕೆ ನೀಡಿಲ್ಲ ಎಂದು ಸಂಸದ ಬರ್ಖ್​ ಹೇಳಿದ್ದಾರೆ. “ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ನಾನು ಭಾರತದ ನಾಗರಿಕ, ಅಫ್ಘಾನಿಸ್ತಾನದ ನಾಗರಿಕನಲ್ಲ… ಆದ್ದರಿಂದ ಅಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ನನಗೆ ಯಾವ ಕಾಳಜಿ ಇಲ್ಲ. ನಾನು ನನ್ನ ಸರ್ಕಾರದ ನೀತಿಗಳನ್ನು ಬೆಂಬಲಿಸುತ್ತೇನೆ” ಎಂದು ಸ್ಪಷ್ಟನೆ ನೀಡಿದ್ದಾರೆ ಎಂದು ಎಎನ್​ಐ ಸಂಸ್ಥೆ ವರದಿ ಮಾಡಿದೆ.

    ಮತ್ತೊಂದು ವರದಿಯ ಪ್ರಕಾರ ಆಲ್​ ಇಂಡಿಯ ಮುಸ್ಲಿಂ ಪರ್ಸನಲ್ ಲಾ ಬೋರ್ಡ್​ ವಕ್ತಾರ ಮೌಲಾನಾ ಸಜ್ಜದ್ ನೋಮಾನಿ, ತಾಲಿಬಾನ್ಅನ್ನು ಹೊಗಳಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. “ತಾಲಿಬಾನ್​ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವುದು ಸಮರ್ಥನೀಯ. ಭಾರತದ ಮುಸ್ಲಿಮರು ತಾಲಿಬಾನ್​ಗೆ ಸೆಲ್ಯೂಟ್​ ಮಾಡುತ್ತಾರೆ” ಎಂದು ನೋಮಾನಿ ಹೇಳಿದ್ದಾರೆ ಎಂದು ಡಿಎನ್​ಎ ವರದಿ ಮಾಡಿದೆ.

    ಸಂಸತ್​​ ಕಲಾಪ ಹಾಳು ಮಾಡಿದ ಕಾಂಗ್ರೆಸ್​, ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದೆ: ಸಚಿವ ಗೋವಿಂದ ಕಾರಜೋಳ

    ಸೆ.5 ರ ಎನ್​ಡಿಎ ಪರೀಕ್ಷೆಗೆ ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ: ಸುಪ್ರೀಂ ಕೋರ್ಟ್​ ಆದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts