More

    ಸದ್ಗುರು ಮಣ್ಣು ರಕ್ಷಿಸಿ ಅಭಿಯಾನ; ಮಧ್ಯಪ್ರದೇಶದ ಮುಖ್ಯಮಂತ್ರಿಯಿಂದಲೂ ಬೆಂಬಲ..

    ಮಧ್ಯಪ್ರದೇಶ: ಸದ್ಗುರು ಒಬ್ಬ ಆಧ್ಯಾತ್ಮಿಕ ವ್ಯಕ್ತಿಯಾದರೂ ಅವರು ಪರಿಸರ ಕಾಳಜಿ ಮತ್ತು ಆಧ್ಯಾತ್ಮಿಕತೆಯ ಅಭೂತಪೂರ್ವ ಸಂಯೋಜನೆಯನ್ನು ತೋರಿಸಿದ್ದಾರೆ ಎಂದು ಸದ್ಗುರು ಅವರ ಮಣ್ಣು ರಕ್ಷಿಸಿ ಅಭಿಯಾನದ ಕುರಿತು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಬೆಂಬಲ ಸೂಚಿಸಿದ್ದಾರೆ.

    ಭೋಪಾಲ್‌ನಲ್ಲಿ ಸದ್ಗುರು ಜತೆ ಮಾತನಾಡಿದ ಅವರು, ಸದ್ಗುರು ನಮಗೆ ನೀಡಿದ ಕಾರ್ಯನೀತಿಯ ಕೈಪಿಡಿಯನ್ನು ನಾವು ಸ್ವೀಕರಿಸಿದ್ದೇವೆ. ಅದನ್ನು ಮತ್ತಷ್ಟು ಅಧ್ಯಯನ ಮಾಡುತ್ತೇವೆ. ರಾಜ್ಯದ ಮಣ್ಣಿನಲ್ಲಿ ಶೇ. 3ರಿಂದ 6 ಜೈವಿಕ ಅಂಶ ತಲುಪಲು ಸರ್ಕಾರವು ಸಂಪೂರ್ಣ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತದೆ. ಮಧ್ಯಪ್ರದೇಶವು ಈ ಪ್ರಯತ್ನದಲ್ಲಿ ಎಲ್ಲ ವಿಚಾರಗಳನ್ನು ಗಮನದಲ್ಲಿಡುವುದಾಗಿ ಭರವಸೆ ನೀಡಿದರು.

    ಸದ್ಗುರು ಸಾವಿರಾರು ಜನರ ಸಮ್ಮುಖದಲ್ಲಿ ಮುಖ್ಯಮಂತ್ರಿಗೆ ‘ಮಣ್ಣು ಉಳಿಸಿ’ ಕಾರ್ಯನೀತಿಯ ಕೈಪಿಡಿಯನ್ನು ಒಪ್ಪಿಸಿದರು ಮತ್ತು ಮಣ್ಣಿನ ಸಮಸ್ಯೆಯನ್ನು ಇತರ ಪರಿಸರ ಕಾಳಜಿಗಳಿಂದ ಪ್ರತ್ಯೇಕಿಸುವಂತೆ ಮುಖ್ಯಮಂತ್ರಿಯನ್ನು ಕೋರಿಕೊಂಡರು.

    ಸದ್ಗುರು ಮಣ್ಣು ರಕ್ಷಿಸಿ ಅಭಿಯಾನ; ಮಧ್ಯಪ್ರದೇಶದ ಮುಖ್ಯಮಂತ್ರಿಯಿಂದಲೂ ಬೆಂಬಲ..

    ಮಣ್ಣಿನ ವಿಚಾರಕ್ಕೆ ಬಂದಾಗ ನಾವು ಅರ್ಥಮಾಡಿಕೊಳ್ಳಬೇಕಾದುದು ಏನೆಂದರೆ, ಯಾವುದೇ ಗಡಿಗಳಿಗೆ ಏನೂ ಅರ್ಥವಿಲ್ಲ ಎಂದು ಸದ್ಗುರು ಒತ್ತಿ ಹೇಳಿದರು. ಸನ್ನಿಹಿತವಾದ ವಿಪತ್ತಿನ ಬಗ್ಗೆ ನೆರೆದ ಜನೆತೆಗೆ ವಿವರಿಸುತ್ತ, ಅಗತ್ಯ ಕಾರ್ಯನೀತಿಗಳೊಂದಿಗೆ ನಾವು ನಿರ್ಣಾಯಕವಾಗಿ ಕಾರ್ಯನಿರ್ವಹಿಸಿದರೆ ಆಪತ್ತನ್ನು ಹಿಮ್ಮೆಟ್ಟಿಸಿ ನಡೆಯಬಹುದಾದ ದುರಂತವನ್ನು ತಡೆಯುವ ಪೀಳಿಗೆ ನಾವಾಗಬಹುದು ಅಥವಾ ದುರಂತವನ್ನು ಘಟಿಸಲು ಬಿಟ್ಟು ಮಲಗಿ ನಿದ್ದೆ ಮಾಡುವ ಪೀಳಿಗೆ ಆಗಬಹುದು ಎಂದು ಸದ್ಗುರು ಎಚ್ಚರಿಸಿದರು.

    ಈ ಅಭಿಯಾನದಲ್ಲಿ ಭಾಗವಹಿಸುವಂತೆ ಎಲ್ಲರಿಗೂ ಕರೆ ನೀಡಿದ ಅವರು, ಮಣ್ಣಿನ ಅವನತಿಗೆ ಕಾರಣ ಎಲ್ಲೋ ಕುಳಿತಿರುವ ಯಾವುದೋ ದುಷ್ಟಶಕ್ತಿಯಲ್ಲ, ಇದು ಮಾನವರ ಸಂತೋಷ ಮತ್ತು ಯೋಗಕ್ಷೇಮದ ಅನ್ವೇಷಣೆಯಿಂದಾಗಿ ಸಂಭವಿಸಿದೆ. ಅಂದರೆ ನಾವು ಪ್ರತಿಯೊಬ್ಬರೂ ತಿಳಿದೋ ತಿಳಿಯದೆಯೋ ಈ ವಿನಾಶದಲ್ಲಿ ಪಾಲುದಾರರು. ನಾವು ಇದನ್ನು ಸರಿಪಡಿಸುವ ಏಕೈಕ ಮಾರ್ಗವೆಂದರೆ ನಾವೆಲ್ಲರೂ ಪರಿಹಾರದಲ್ಲೂ ಪಾಲುದಾರರಾಗಬೇಕು ಎಂದರು.

    ಸದ್ಗುರು ಮಣ್ಣು ರಕ್ಷಿಸಿ ಅಭಿಯಾನ; ಮಧ್ಯಪ್ರದೇಶದ ಮುಖ್ಯಮಂತ್ರಿಯಿಂದಲೂ ಬೆಂಬಲ..

    ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ಮಾತನಾಡಿದ ಸಿಎಂ ಶಿವರಾಜ್ ಸಿಂಗ್​ ಚೌಹಾಣ್, ಇಡೀ ಪ್ರಪಂಚವನ್ನು ಒಂದೇ ಕುಟುಂಬವೆಂದು ಪರಿಗಣಿಸಿದ ‘ವಸುದೈವ ಕುಟುಂಬಕಂ’ ಸಂಸ್ಕೃತಿಯನ್ನು ಪ್ರೇಕ್ಷಕರಿಗೆ ನೆನಪಿಸಿದರು. ತಮ್ಮ ಭಾಷಣದಲ್ಲಿ ಅವರು ಸರ್ಕಾರದ ವಿವಿಧ ಪರಿಸರ ಉಪಕ್ರಮಗಳನ್ನು ವಿವರಿಸಿದರು. ರಾಜ್ಯದಲ್ಲಿ ‘ಅಂಕುರ್’ ಅಭಿಯಾನವು ಜನ್ಮದಿನ, ವಾರ್ಷಿಕೋತ್ಸವ ಮತ್ತು ಇತರ ವಿಶೇಷ ಸಂದರ್ಭಗಳಲ್ಲಿ ಮರಗಳನ್ನು ನೆಡಲು ಜನರನ್ನು ಪ್ರೇರೇಪಿಸುತ್ತಿದೆ. ಜಲಾಭಿಷೇಕ ಅಭಿಯಾನದ ಅಡಿಯಲ್ಲಿ ರಾಜ್ಯವು ಐದು ಸಾವಿರ ಅಮೃತ ಸರೋವರಗಳನ್ನು (ಜಲಮೂಲ) ರಚಿಸುತ್ತಿದೆ. ರಾಜ್ಯದಲ್ಲಿ ವಿದ್ಯುಚ್ಛಕ್ತಿಯನ್ನು ಸೃಷ್ಟಿಸಲು ನವೀಕರಿಸಬಹುದಾದ ಇಂಧನ ಮೂಲಗಳತ್ತ ಕೇಂದ್ರೀಕರಿಸುವ ಸರ್ಕಾರದ ಪ್ರಯತ್ನಗಳನ್ನು ಅವರು ವಿವರಿಸಿದರು. ಪ್ರಸ್ತುತ 7.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರಾಜ್ಯವು ರಾಸಾಯನಿಕ ಗೊಬ್ಬರಗಳನ್ನು ಬಳಸದೆ, ಜೈವಿಕ ಕೃಷಿ ಅಳವಡಿಸಿಕೊಳ್ಳುತ್ತಿರುವ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದರು.

    ಯುರೋಪ್, ಮಧ್ಯ ಏಷ್ಯಾ ಮತ್ತು ಮಧ್ಯಪ್ರಾಚ್ಯದಾದ್ಯಂತ ಒಬ್ಬಂಟಿ ಮೋಟಾರ್‌ ಬೈಕ್ ಪ್ರಯಾಣವನ್ನು ಮಾ.21ರಂದು ಪ್ರಾರಂಭಿಸಿದ ಸದ್ಗುರು ಕೆಲವು ದಿನಗಳ ಹಿಂದೆ ಗುಜರಾತ್‌ನ ಪಶ್ಚಿಮ ಭಾಗದ ಬಂದರು ನಗರವಾದ ಜಾಮ್‌ನಗರವನ್ನು ತಲುಪಿದರು. ಒಂಬತ್ತು ಭಾರತೀಯ ರಾಜ್ಯಗಳಲ್ಲಿ ತಮ್ಮ ಪ್ರಯಾಣವನ್ನು ಮುಂದುವರಿಸಿದ ಅವರು ಗುಜರಾತ್, ರಾಜಸ್ಥಾನ, ಹರಿಯಾಣ ಮತ್ತು ನವದೆಹಲಿಯಲ್ಲಿ ಕಾರ್ಯಕ್ರಮಗಳನ್ನು ನಡೆಸಿದರು. ಹೊಸದಿಲ್ಲಿಯಲ್ಲಿ ನಡೆದ ಮಣ್ಣು ಉಳಿಸಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸದ್ಗುರುವಿನ ಮಣ್ಣು ಉಳಿಸಿ ಅಭಿಯಾನಕ್ಕೆ ತಮ್ಮ ಸಂಪೂರ್ಣ ಬೆಂಬಲ ಮತ್ತು ಪ್ರೋತ್ಸಾಹವನ್ನು ವ್ಯಕ್ತಪಡಿಸಿದ್ದರು. ಸದ್ಗುರು ಮಣ್ಣಿನ ಪುನರುಜ್ಜೀವನಕ್ಕಾಗಿ ಬೇಕಾದ ಪ್ರಾಯೋಗಿಕ ಮತ್ತು ವೈಜ್ಞಾನಿಕ ಪರಿಹಾರಗಳುಳ್ಳ ಮಣ್ಣು ಉಳಿಸಿ ಕಾರ್ಯನೀತಿ ಕೈಪಿಡಿಯನ್ನು ಸಹ ಪ್ರಧಾನಿಯವರಿಗೆ ನೀಡಿದರು.

    ಸದ್ಗುರು ಮಣ್ಣು ರಕ್ಷಿಸಿ ಅಭಿಯಾನ; ಮಧ್ಯಪ್ರದೇಶದ ಮುಖ್ಯಮಂತ್ರಿಯಿಂದಲೂ ಬೆಂಬಲ..

    ಈಗಾಗಲೇ ಗುಜರಾತ್ ಮತ್ತು ರಾಜಸ್ಥಾನ ಸರ್ಕಾರಗಳು ತಮ್ಮ ರಾಜ್ಯದಲ್ಲಿ ಮಣ್ಣು ಉಳಿಸಲು ಒಡಂಬಡಿಕೆ(ಎಂಒಯು)ಗೆ ಸಹಿ ಹಾಕಿವೆ. ಅಭಿಯಾನವು ಇಲ್ಲಿಯವರೆಗೆ, 2.5 ಶತಕೋಟಿ ಜನರನ್ನು ತಲುಪಿದೆ, ಜೊತೆಗೆ 74 ದೇಶಗಳು ತಮ್ಮ ರಾಷ್ಟ್ರಗಳ ಮಣ್ಣನ್ನು ಉಳಿಸಲು ಕಾರ್ಯನಿರ್ವಹಿಸಲು ಸಿದ್ಧವಾಗಿವೆ. ಭಾರತದ 15 ಲಕ್ಷಕ್ಕೂ ಹೆಚ್ಚು ಮಕ್ಕಳು ಪ್ರಧಾನ ಮಂತ್ರಿಯವರಿಗೆ ಪತ್ರ ಬರೆದು ಮಣ್ಣು ಮತ್ತು ಅವರ ಭವಿಷ್ಯವನ್ನು ಉಳಿಸಲು ಕಾರ್ಯನಿರ್ವಹಿಸುವಂತೆ ವಿನಂತಿಸಿದ್ದಾರೆ. ಉತ್ತರ ಪ್ರದೇಶದ 25 ಜಿಲ್ಲೆಗಳ 300 ಕ್ಕೂ ಹೆಚ್ಚು ಶಾಲೆಗಳ 65,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಧಾನಿಯವರಿಗೆ ಪತ್ರ ಬರೆದಿದ್ದಾರೆ.

    ಸದ್ಗುರು ಮಣ್ಣು ರಕ್ಷಿಸಿ ಅಭಿಯಾನ; ಮಧ್ಯಪ್ರದೇಶದ ಮುಖ್ಯಮಂತ್ರಿಯಿಂದಲೂ ಬೆಂಬಲ..

    ಮಣ್ಣು ಉಳಿಸಿ ಅಭಿಯಾನದ ಪ್ರಾಥಮಿಕ ಉದ್ದೇಶವೆಂದರೆ ತುರ್ತು ಕಾರ್ಯನೀತಿ ಸುಧಾರಣೆಗಳ ಮೂಲಕ ಕೃಷಿ ಮಣ್ಣಿನಲ್ಲಿ ಕನಿಷ್ಠ 3-6% ಜೈವಿಕ ಅಂಶವನ್ನು ಕಡ್ಡಾಯಗೊಳಿಸುವಂತೆ ಪ್ರಪಂಚದ ಎಲ್ಲಾ ರಾಷ್ಟ್ರಗಳನ್ನು ಆಗ್ರಹಪಡಿಸುವುದು. ಇಷ್ಟು ಕನಿಷ್ಠ ಜೈವಿಕ ಅಂಶವಿಲ್ಲದೆ, ಮಣ್ಣಿನ ವಿಜ್ಞಾನಿಗಳು ಮಣ್ಣಿನ ನಿರ್ಧಾರಿತ ಅವನತಿಯ ಬಗ್ಗೆ ಎಚ್ಚರಿಸಿದ್ದಾರೆ, ಈ ವಿದ್ಯಮಾನವನ್ನು ಅವರು ‘ಮಣ್ಣಿನ ಅಳಿವು’ ಎಂದು ಕರೆಯುತ್ತಿದ್ದಾರೆ.

    ಸದ್ಗುರು ಮಣ್ಣು ರಕ್ಷಿಸಿ ಅಭಿಯಾನ; ಮಧ್ಯಪ್ರದೇಶದ ಮುಖ್ಯಮಂತ್ರಿಯಿಂದಲೂ ಬೆಂಬಲ..

    ಭಾರತದಲ್ಲಿ ಸುಮಾರು ಶೇ.30 ಫಲವತ್ತಾದ ಮಣ್ಣು ಈಗಾಗಲೇ ಬಂಜರಾಗಿ ವ್ಯವಸಾಯ ಮಾಡಲು ಅಸಮರ್ಥವಾಗಿದೆ. ಪ್ರಸ್ತುತದಲ್ಲಿ ನಡೆಯುತ್ತಿರುವ ಮಣ್ಣಿನ ಅವನತಿಯು ಹೀಗೇ ಮುಂದುವರಿದರೆ 2050ರ ಹೊತ್ತಿಗೆ ಪ್ರಪಂಚದ ಶೇ. 90 ಮಣ್ಣು ಮರುಭೂಮಿಯಾಗಿ ಬದಲಾಗಬಹುದು ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ. ಈ ಅನಾಹುತವನ್ನು ತಪ್ಪಿಸಲು ಸದ್ಗುರುಗಳು ಈ ವರ್ಷದ ಮಾರ್ಚ್‌ನಲ್ಲಿ ಮಣ್ಣು ಉಳಿಸಿ ಅಭಿಯಾನವನ್ನು ಪ್ರಾರಂಭಿಸಿದರು ಮತ್ತು 27 ದೇಶಗಳಲ್ಲಿ ಸಂಚರಿಸಿ ಅಲ್ಲಿನ ನಾಯಕರು, ರಾಜಕಾರಣಿಗಳು, ವಿಜ್ಞಾನಿಗಳು ಮತ್ತು ನಾಗರಿಕರನ್ನು ಭೇಟಿ ಮಾಡಿ ಮಣ್ಣನ್ನು ಉಳಿಸಲು ಬೆಂಬಲವನ್ನು ಪಡೆದರು.

    ವಾಟ್ಸ್​ಆ್ಯಪ್​ ಬಳಕೆದಾರರಿಗೆ ಸಂತಸದ ಸಂಗತಿ; ಟೆಲಿಗ್ರಾಂ ಆ್ಯಪ್​ಗೆ ಪೈಪೋಟಿಯಂತೆ ಮತ್ತೊಂದು ಅಪ್​ಡೇಟ್​..

    ‘777 ಚಾರ್ಲಿ’ ಸಿನಿಮಾ ಸ್ಫೂರ್ತಿ; ಶ್ವಾನದಳದ ನಾಯಿಗೂ ಅದೇ ನಾಮಕರಣ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts