More

    ಸಂಸದ ಅಮರೇಶ್ವರ ನಾಯಕ ಗೋಬ್ಯಾಕ್ ಘೋಷಣೆ

    ರಾಯಚೂರು: ರಾಯಚೂರು ಲೋಕಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಂಸದ ಬಿ.ವಿ.ನಾಯಕಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಸ್ಥಳೀಯ ಖಾಸಗಿ ಹೋಟೆಲ್‌ನಲ್ಲಿ ಬೆಂಬಲಿಗರಿಂದ ಬುಧವಾರ ಹಮ್ಮಿಕೊಂಡಿದ್ದ ಚಿಂತನಾ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ ವಿರುದ್ಧ ಗೋಬ್ಯಾಕ್ ಘೋಷಣೆಗಳು ಮೊಳಗಿದವು.
    ಸಭೆ ಆರಂಭವಾಗುತ್ತಿದ್ದಂತೆ ಐದು ವರ್ಷಗಳ ಹಿಂದೆ ಗೆದ್ದು ಕಾಣೆಯಾಗಿದ್ದ ಸಂಸದರನ್ನು ಹುಡುಕಿಕೊಟ್ಟ ಬಿಜೆಪಿ ಹೈಕಮಾಂಡ್‌ಗೆ ಧನ್ಯವಾದಗಳು ಎಂಬ ಬ್ಯಾನರ್ ಹಿಡಿದು ಆಗಮಿಸಿದ ಕಾರ್ಯಕರ್ತರು ಹೈಕಮಾಂಡ್ ಕೂಡಲೇ ಅಭ್ಯರ್ಥಿಯನ್ನು ಬದಲಾವಣೆ ಮಾಡಬೇಕು ಎಂದು ಒತ್ತಾಯಿಸಿದರು.
    ಮೈಮೇಲೆ ಡಿಸೇಲ್ ಸುರಿದುಕೊಂಡು ಬಂದಿದ್ದ ಇಬ್ಬರು ಕಾರ್ಯಕರ್ತರನ್ನು ಸಭೆಯಲ್ಲಿದ್ದವರು ಕರೆದುಕೊಂಡು ಹೋಗಿ ಸಮಾಧಾನ ಪಡಿಸಿದರು. ಮತ್ತೊಂದೆಡೆ ಕಾರ್ಯಕರ್ತರಲ್ಲಿ ರಾಜಾ ಅಮರೇಶ್ವರ ನಾಯಕಗೆ ಟಿಕೆಟ್ ನೀಡಿರುವುದಕ್ಕೆ ಹೆಚ್ಚಿನ ಆಕ್ರೋಶ ಕಂಡು ಬರುತ್ತಿತ್ತು.
    ಮಾತನಾಡಿದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಕ್ಷದ ಹೈಕಮಾಂಡ್‌ಗೆ ಅಭ್ಯರ್ಥಿ ಆಯ್ಕೆ ಬಗ್ಗೆ ಮರು ಪರಿಶೀಲನೆ ನಡಸುವಂತೆ ಒತ್ತಾಯಿಸೋಣ. ಇಲ್ಲವಾದಲ್ಲಿ ಪಕ್ಷೇತರರಾಗಿ ಸ್ಪರ‌್ಸುವಂತೆ ಬಿ.ವಿ.ನಾಯಕಗೆ ಒತ್ತಾಯಿಸಿದರು.
    ಮಾಜಿ ಸಂಸದ ಹಾಗೂ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿ.ವಿ.ನಾಯಕ ಮಾತನಾಡಿ, ಲೋಕಸಭೆ ಚುನಾವಣೆಗೆ ಸ್ಪರ್ಧೆಗೆ ಮುಂದಾಗುವಂತೆ ಪಕ್ಷದ ನಾಯಕರು ಹೇಳಿದ್ದರಿಂದ ಟಿಕೆಟ್ ನೀಡುವಂತೆ ಅರ್ಜಿ ಸಲ್ಲಿಸಿದ್ದೆ. ನಿಮಗೆ ಟಿಕೆಟ್ ನೀಡಲಾಗುತ್ತದೆ ಚುನಾವಣೆಗೆ ತಯಾರಿಸಿ ನಡೆಸಿ ಎಂದು ತಿಳಿಸಿದ್ದರು.
    ಆದರೆ ಟಿಕೆಟ್ ಕೈತಪ್ಪಿಸಿ ಹಾಲಿ ಸಂಸದರಿಗೆ ಟಿಕೆಟ್ ನೀಡಿರುವುದು ನೋವುಂಟು ಮಾಡಿರುವುದು ನೋವುಂಟು ಮಾಡಿದೆ. ಪಕ್ಷದ ವರಿಷ್ಠರು ಎರಡು ದಿನಗಳಲ್ಲಿ ಅಭ್ಯರ್ಥಿ ಆಯ್ಕೆ ಬಗ್ಗೆ ಮರು ಪರಿಶೀಲನೆ ಮಾಡಬೇಕು ಇಲ್ಲವಾದಲ್ಲಿ ಮತ್ತೊಮ್ಮೆ ಕಾರ್ಯಕರ್ತರು, ಬೆಂಬಲಿಗರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
    ಸಭೆಯಲ್ಲಿ ಮಾಜಿ ಶಾಸಕ ಬಸನಗೌಡ ಬ್ಯಾಗವಾಟ, ಮುಖಂಡರಾದ ಡಾ.ಶರಣಬಸವ ಪಾಟೀಲ್ ಜೋಳದಹೆಡಗಿ, ಜಂಬಣ್ಣ ನಿಲೋಗಲ್, ತಿಮ್ಮಾರೆಡ್ಡಿ ಬೋಗಾವತಿ, ಅನಿತಾ ಮಂತ್ರಿ ಮಾತನಾಡಿ, ಬಿ.ವಿ.ನಾಯಕ ಕೈಗೊಳ್ಳುವ ನಿರ್ಧಾರಕ್ಕೆ ಬೆಂಬಲಿಸುವುದಾಗಿ ತಿಳಿಸಿದರು.
    ಸಭೆಯಲ್ಲಿ ಬಿಜೆಪಿ ಮುಖಂಡರಾದ ಮಲ್ಲಿಕಾರ್ಜುನ ಜಕ್ಕಲದಿನ್ನಿ, ಜೆ.ದೇವರಾಜ ಪಾಟೀಲ್, ವೀರಭದ್ರಗೌಡ, ಶರಣಬಸವ ನಾಯಕ, ರಾಮನಗೌಡ, ಕೊಟ್ರೇಶಪ್ಪ ಕೋರಿ, ನಾಗನಗೌಡ ಅತ್ತನೂರು, ನರಸಿಂಹ ನಾಯಕ, ರಾಮನಗೌಡ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts