More

    ಸೋಂಕಿತರನ್ನು ಸಿಸಿಸಿಗೆ ಸ್ಥಳಾಂತರ ಮಾಡಿ

    ಹುಬ್ಬಳ್ಳಿ: ಕೋವಿಡ್ ಸೋಂಕು ಹಳ್ಳಿಗಳಿಗೂ ವ್ಯಾಪಿಸುತ್ತಿದೆ. ಹೋಂ ಐಸೋಲೇಷನ್​ನಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಆಗುವುದಿಲ್ಲ. ಹಾಗಾಗಿ ಇವರನ್ನೆಲ್ಲ ಕೋವಿಡ್ ಕೇರ್ ಸೆಂಟರ್​ಗೆ(ಸಿಸಿಸಿ) ಶಿಫ್ಟ್ ಮಾಡಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ ಅವರು, ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರಿಗೆ ಸೂಚನೆ ನೀಡಿದರು.
    ನಗರದ ಇಂದಿರಾ ಗಾಜಿನ ಮನೆಯಲ್ಲಿ ಶನಿವಾರ ಏರ್ಪಡಿಸಿದ್ದ ಕೋವಿಡ್ ನಿಯಂತ್ರಣ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.
    ಗ್ರಾಮೀಣ ಭಾಗದಲ್ಲಿ ಸೋಂಕು ಹರಡ ದಂತೆ ಜಾಗೃತಿ ಮೂಡಿಸಬೇಕು. ಟೆಸ್ಟಿಂಗ್ ಕೂಡ ಹೆಚ್ಚಿಸಬೇಕು. ಇದರಿಂದ ರೋಗ ಬೇಗ ಪತ್ತೆ ಹಚ್ಚಲು ಅನುಕೂಲವಾಗುತ್ತದೆ. ಸಾವಿನ ಪ್ರಮಾಣವನ್ನು ಕಡಿಮೆಗೊಳಿಸಬಹುದು. ಟ್ರೇಸಿಂಗ್, ಟೆಸ್ಟ್, ಟ್ರೀಟ್​ವೆುಂಟ್ ಸರಿಯಾಗಿ ನಿರ್ವಹಿಸಬೇಕು. ಆಸ್ಪತ್ರೆಗಳಲ್ಲಿ ಲಭ್ಯವಿರುವ ಬೆಡ್, ಔಷಧಗಳ ಮಾಹಿತಿಯನ್ನು ಪಟ್ಟಿ ಮಾಡಿ ಪ್ರದರ್ಶಿಸಬೇಕು. ನಾಲ್ಕು ಸಂಖ್ಯೆಯ ಟೋಲ್​ಫ್ರೀ ನಂಬರ್ ಪ್ರಕಟಿಸಬೇಕು ಎಂದು ಸಲಹೆ ನೀಡಿದರು.
    ಕಿಮ್ಸ್​ನಲ್ಲಿ 125 ವೆಂಟಿಲೇಟರ್ ಬಳಕೆ ಮಾಡಬೇಕು. ಅದಕ್ಕೆ ಬೇಕಾಗುವ ಆಕ್ಸಿಜನ್ ಸಮೇತ ಇತರ ಸವಲತ್ತುಗಳ ಕುರಿತು ಪಟ್ಟಿ ರಚಿಸಿ ಕೊಡಿ. ಬ್ಲ್ಯಾಕ್ ಫಂಗಸ್​ಗೆ ಔಷಧ ಪೂರೈಕೆ ಮಾಡಲು ರಾಜ್ಯ ಸರ್ಕಾರ ಸಿದ್ಧವಿದೆ. ಅಗತ್ಯ ಔಷಧಗಳ ಕುರಿತು ಇಂಡೆಂಟ್ ಹಾಕಿ ಕಳುಹಿಸಿಕೊಟ್ಟರೆ, ಧಾರವಾಡ ಜಿಲ್ಲಾಡಳಿತಕ್ಕೆ ಚುಚ್ಚುಮದ್ದು ರವಾನೆ ಮಾಡಲಾಗುವುದು. ಇಡೀ ಜಿಲ್ಲೆಯ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಾಮರ್ಥ್ಯವನ್ನು ಕಿಮ್್ಸ ಹೊಂದಿದೆ. ಇಲ್ಲಿ 960 ವೈದ್ಯರು, ಸಾವಿರಕ್ಕೂ ಹೆಚ್ಚು ಸಿ ಮತ್ತು ಡಿ ದರ್ಜೆ ನೌಕರರು ಕೆಲಸ ಮಾಡುತ್ತಿದ್ದಾರೆ ಎಂದು ಬಣ್ಣಿಸಿದರು.
    ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾತನಾಡಿ, 144 ಗ್ರಾಮ ಪಂಚಾಯಿತಿಗಳಲ್ಲಿ ಕೋವಿಡ್ ಕೇರ್ ಸೆಂಟರ್ ಮಾಡಲಾಗಿದೆ. ತಪ್ಪು ತಿಳಿವಳಿಕೆ ಮೂಡಬಾರದು ಎನ್ನುವ ಉದ್ದೇಶಕ್ಕೆ ಅಲ್ಲಿನ ಅಧಿಕಾರಿಗಳನ್ನು ಬಳಕೆ ಮಾಡಿಕೊಂಡು ಜಾಗೃತಿ ಮೂಡಿಸಲಾಗುತ್ತಿದೆ. ಪಾಸಿಟಿವ್ ವರದಿ ಬಂದ 5-6 ಗಂಟೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಿವರಿಸಿದರು.
    ಶಾಸಕರಾದ ಅರವಿಂದ ಬೆಲ್ಲದ, ಶಂಕರಪಾಟೀಲ ಮುನೇನಕೊಪ್ಪ, ಅಮೃತ ದೇಸಾಯಿ, ಪ್ರಸಾದ ಅಬ್ಬಯ್ಯ, ಪ್ರದೀಪ ಶೆಟ್ಟರ್, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಜಿಪಂ ಸಿಇಒ ಬಿ. ಸುಶೀಲಾ, ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಡಿಎಚ್​ಒ ಡಾ. ಯಶವಂತ ಮದೀನಕರ, ಎಸಿ ಗೋಪಾಲಕೃಷ್ಣ ಬಿ., ಇತರರು ಇದ್ದರು.
    ಕರ್ತವ್ಯ ನಿರ್ವಹಿಸದ ವೈದ್ಯರನ್ನು ವಜಾಗೊಳಿಸಿ: ಕಿಮ್ಸ್​ನಲ್ಲಿ ತಜ್ಞ ವೈದ್ಯರು ಇದ್ದಾರೆ. ಕೆಲವೇ ಕೆಲವರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೆಲಸ ಮಾಡದವರನ್ನು ಕರ್ತವ್ಯದಿಂದ ವಜಾಗೊಳಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೂಚನೆ ನೀಡಿದರು. ಕಿಮ್್ಸ ವೈದ್ಯಕೀಯ ತಂಡ ಉತ್ತಮವಾಗಿ ಕೆಲಸ ಮಾಡುತ್ತಿದೆ. ಕೆಲವರು ಕೋವಿಡ್ ಕರ್ತವ್ಯ ನಿರ್ವಹಿಸುತ್ತಿಲ್ಲ. ತಮ್ಮ ಖಾಸಗಿ ಆಸ್ಪತ್ರೆಗೆ ತೆರಳುತ್ತಿದ್ದಾರೆ. ನಿರ್ದೇಶಕರು ತುಂಬ ಒಳ್ಳೆಯವರು ಸರಿ. ಆದರೆ, ಇವರನ್ನೆಲ್ಲ ಸರಿಯಾಗಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಬೇಕು ಎಂದರು. ಇದಕ್ಕೆ ಧ್ವನಿಗೂಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ಕೋವಿಡ್ ಸೋಂಕು ಹೋಗಲಾಡಿಸಲು ಎಲ್ಲರ ಶ್ರಮ ಅಗತ್ಯ. ಎಲ್ಲರೂ ಚೆನ್ನಾಗಿಯೇ ಕರ್ತವ್ಯ ನಿರ್ವಹಿಸುತ್ತಿದ್ದೀರಿ. ಯಾರು ಕೆಲಸ ಮಾಡುವುದಿಲ್ಲವೋ ಅಂಥವರ ಪಟ್ಟಿ ಮಾಡಿ ಎಂದು ಸೂಚಿಸಿದರು. ತಕ್ಷಣ ಪ್ರತಿಕ್ರಿಯಿಸಿದ ಡಾ. ಕೆ. ಸುಧಾಕರ, ತಿಂಗಳಿಗೆ 2ರಿಂದ 3 ಲಕ್ಷ ರೂ. ಸಂಬಳ ನೀಡಲಾಗುತ್ತಿದೆ. 7ನೇ ವೇತನ ಆಯೋಗದ ವರದಿಯಂತೆ ಸಂಬಳ ಹೆಚ್ಚಿಸಲಾಗಿದೆ. ಆದರೂ ಕರ್ತವ್ಯ ನಿರ್ವಹಿಸುತ್ತಿಲ್ಲವೆಂದರೆ ಹೇಗೆ? ಎಲ್ಲರೂ ಕೋವಿಡ್ ಡ್ಯೂಟಿ ಮಾಡಲೇಬೇಕು. ಯಾರು ಮಾಡುವುದಿಲ್ಲವೋ ಅಂಥವರ ಪಟ್ಟಿಸಿದ್ಧಪಡಿಸಿ ಕೊಡಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
    ಬ್ಲ್ಯಾಕ್ ಫಂಗಸ್ ಹರಡುವುದಿಲ್ಲ: ಬ್ಲ್ಯಾಕ್ ಫಂಗಸ್ ರೋಗ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ ಅವರು ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕಾಯಿಲೆ ನಿಯಂತ್ರಣಕ್ಕೆ ತಜ್ಞ ವೈದ್ಯರನ್ನು ನಿಯೋಜಿಸಲಾಗಿದೆ. ಸರ್ಕಾರದಿಂದ ಉಚಿತವಾಗಿ ಔಷಧ, ಶಸ್ತ್ರ ಚಿಕಿತ್ಸೆ ನೆರವೇರಿಸಲಾಗುವುದು. ಕೇಂದ್ರ ಸರ್ಕಾರ ಅಗತ್ಯ ಚುಚ್ಚುಮದ್ದು ಪೂರೈಕೆ ಮಾಡಲಿದೆ. ಪೂರೈಕೆಯಾದ ನಂತರ ಬೇಡಿಕೆಗೆ ಅನುಗುಣವಾಗಿ ಆಯಾ ಜಿಲ್ಲೆಗಳಿಗೆ ಚುಚ್ಚುಮದ್ದು ಅನ್ನು ಶೀಘ್ರವೇ ರವಾನೆ ಮಾಡಲಾಗುವುದು ಎಂದರು. ಕೋವಿಡ್ ಲಸಿಕೆ ವಿತರಣೆಗೆ ಮಾರ್ಗಸೂಚಿಗಳನ್ನು ಹಾಕಿಕೊಳ್ಳಲಾಗಿದೆ. ಫ್ರಂಟ್​ಲೈನ್ ವರ್ಕರ್​ಗಳಿಗೆ ಈಗ ಆರಂಭಿಸಲಾಗಿದೆ. 45 ವಯಸ್ಸು ಮೇಲ್ಪಟ್ಟವರು ಹಾಗೂ ಎರಡನೇ ಡೋಸ್ ಪಡೆಯುವವರಿಗೆ ಲಸಿಕೆ ನೀಡಲಾಗುತ್ತಿದೆ ಎಂದರು.</

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts