More

    ಗೂಖ್ರಾ ಭೂಕಂಪಕ್ಕೂ ಜಗ್ಗಿಲ್ಲ ಹಿಮಾಲಯ ಪರ್ವತ, ಖಚಿತಪಡಿಸಿದ ಚೀನಾ

    ಬೀಜಿಂಗ್​: ನೇಪಾಳಕ್ಕೆ ಅಂಟಿಕೊಂಡಿರುವ ಹಿಮಾಲಯದ ತಪ್ಪಲಿನಲ್ಲಿ 2015ರ ಏಪ್ರಿಲ್​ನಲ್ಲಿ ಸಂಭವಿಸಿದ್ದ 7.8 ತೀವ್ರತೆಯ ಪ್ರಬಲ ಭೂಕಂಪಕ್ಕೂ ವಿಶ್ವದ ಅತಿ ಎತ್ತರದ ಹಿಮಪರ್ವತ ಮೌಂಟ್​ ಎವರೆಸ್ಟ್​ ಜಗ್ಗಿಲ್ಲ. ಗೂಖ್ರಾ ಭೂಕಂಪ ಎಂದೂ ಕರೆಯಲ್ಪಡುವ ಈ ಭೂಕಂಪನದಿಂದಾಗಿ ಮೌಂಟ್​ ಎವರೆಸ್ಟ್ ಕಸಿದಿದ್ದು, ಅದರ ಎತ್ತರ ಕಡಿಮೆಯಾಗಿರಬಹುದು ಎಂದು ಹೇಳಲಾಗುತ್ತಿತ್ತು. ಆದರೆ ಹಾಗೆ ಆಗಿಲ್ಲ ಎಂದು ಚೀನಾದ ಸರ್ವೇ ತಂಡ ಖಚಿತಪಡಿಸಿದೆ.

    ಟಿಬೆಟ್​ ಕಡೆಯಿಂದ ಮೇ 1ರಂದು ಮೌಂಟ್​ ಎವರೆಸ್ಟ್​ನ ಆರೋಹಣ ಕೈಗೊಂಡಿದ್ದ ಚೀನಾದ ಸರ್ವೇಯರ್​ಗಳ ತಂಡ 2005ರಲ್ಲಿ ಇದ್ದಂತೆ ಹಿಮಪರ್ವತದ ಎತ್ತರ 8,844.43 ಮೀಟರ್​ನಲ್ಲೇ ಉಳಿದಿದೆ. ಇದರಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ ಎಂದು ಸ್ಪಷ್ಟಪಡಿಸಿದೆ.
    ಸರ್ವೇ ಕಾರ್ಯಕ್ಕಾಗಿ ಈ ತಂಡ ಮೇ 1ರಂದು ಪರ್ವತಾರೋಹಣ ಆರಂಭಿಸಿತ್ತು. ಮೌಂಟ್​ ಎವರೆಸ್ಟ್​ನ ಶಿಖರಾಗ್ರವನ್ನು ತಲುಪಿ, ಎತ್ತರವನ್ನು ಅಳೆಯಲು ಅನುಕೂಲವಾಗುವಂತೆ ಅಲ್ಲಲ್ಲಿ ಸರ್ವೇ ಮಾರ್ಕರ್​​ಗಳನ್ನು ರಚಿಸಿಕೊಂಡು ಎತ್ತರವನ್ನು ಯಶಸ್ವಿಯಾಗಿ ಅಳತೆ ಮಾಡಿದ್ದಾರೆ.

    ದಾಖಲೆ: ಮೌಂಟ್​ ಎವರೆಸ್ಟ್​ನ ಶಿಖರಾಗ್ರದಲ್ಲಿ ಚೀನಿ ಸರ್ವೇಯರ್​ಗಳ ತಂಡ ಅಂದಾಜು ಎರಡೂವರೆ ಗಂಟೆ ತಂಗಿತ್ತು. ಚೀನಾ ಪರ್ವತಾರೋಹಣ ಕ್ಷೇತ್ರದಲ್ಲಿ ಇದೊಂದು ದಾಖಲೆ ಎನ್ನಲಾಗಿದೆ.

    ಇದನ್ನೂ ಓದಿ: ಕರೊನಾ ಸಂಕಷ್ಟದಲ್ಲೂ ಈ ಕಂಪನಿ ಉದ್ಯೋಗಿಗಳಿಗೆ ಸಂಬಳ ಹೆಚ್ಚಳ…!

    6 ಬಾರಿ ಅಧ್ಯಯನ: ಚೀನಾದ ಸರ್ವೇಯರ್​ಗಳು ಇದುವರೆಗೆ ಆರು ಬಾರಿ ಮೌಂಟ್​ ಎವರೆಸ್ಟ್​ನ ಅಧ್ಯಯನ ಕೈಗೊಂಡಿದ್ದಾರೆ. ಅದರ ಎತ್ತರವನ್ನು ಅಳತೆಯ ಜತೆಗೆ ವೈಜ್ಞಾನಿಕ ಅಧ್ಯಯನವನ್ನೂ ಮಾಡಿದ್ದಾರೆ. 1974ರಲ್ಲಿ ಮೌಂಟ್​ ಎವರೆಸ್ಟ್​ 8,848.13 ಮೀಟರ್​ ಎತ್ತರವಾಗಿರುವುದಾಗಿ ಹೇಳಿತ್ತು. 2005ರಲ್ಲಿ ಮತ್ತೊಮ್ಮೆ ಅಳತೆ ಮಾಡಿದ್ದ ಚೀನಾ ಅದರ ಎತ್ತರ 8,844.43 ಮೀಟರ್​ ಇರುವುದಾಗಿ ಹೇಳಿತ್ತು. 2020ರಲ್ಲಿ ಕೂಡ ಅದರಲ್ಲೂ ವಿಶೇಷವಾಗಿ 2015ರ ನೇಪಾಳದ ಪ್ರಬಲ ಭೂಕಂಪದ ಹೊರತಾಗಿಯೂ ಅದರ ಅಳತೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಅದು 8,844.43 ಮೀಟರ್​ನಲ್ಲಿ ಉಳಿದಿದೆ ಎಂದು ಸ್ಪಷ್ಟಪಡಿಸಿದ್ದಾರೆ.

    ಅಧ್ಯಯನದ ಮಹತ್ವ: ಇಂಡಿನ್​ ಪ್ಲೇಟ್​ ಮತ್ತು ಯುರೇಷಿಯನ್​ ಪ್ಲೇಟ್​ನ ಪರಸ್ಪರ ಡಿಕ್ಕಿಯಾಗುವ ಮತ್ತು ಹೆಚ್ಚು ಒತ್ತಡ ಇರುವ ಪ್ರದೇಶದಲ್ಲೇ ಮೌಂಟ್​ ಎವರೆಸ್ಟ್​ ಸ್ಥಿತವಾಗಿದೆ. ಉಭಯ ಪ್ಲೇಟ್​ಗಳು ಸದಾ ಚಲನಶೀಲವಾಗಿರುತ್ತವೆ. ಈ ಹಿನ್ನೆಲೆಯಲ್ಲಿ ಈ ಪರ್ವತದಿಂದ ಜನಜೀವನ ಮತ್ತು ಭೌಗೋಳಿಕವಾಗಿ ಮತ್ತು ಪರಿಸರಾತ್ಮಕವಾಗಿ ಏನೆಲ್ಲ ಪರಿಣಾಮ ಉಂಟಾಗುತ್ತದೆ ಎಂಬುದನ್ನು ಅರಿಯಲು ಇಂಥ ಅಧ್ಯಯನಗಳು ತುಂಬಾ ಅಗತ್ಯ ಎಂದು ಚೀನಾ ಪ್ರತಿಪಾದಿಸಿದೆ.

    ಚೀನಾಕ್ಕೆ ಸೆಡ್ಡು- ಭಾರತದಲ್ಲಿ ತಯಾರಾಯ್ತು ಕೋಟಿಗೂ ಅಧಿಕ ಸ್ವದೇಶಿ ಪಿಪಿಇ ಕಿಟ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts