More

    ರಾಜ್ಯದ ಐಟಿಐಗಳಿಗೆ ಇನ್ನು ಟಾಟಾ ಶಕ್ತಿ; ಟಾಟಾ ಟೆಕ್ನಾಲಜೀಸ್​ನಿಂದ ಉನ್ನತೀಕರಣ

    ಬೆಂಗಳೂರು: ರಾಜ್ಯದಲ್ಲಿರುವ ಐಟಿಐ ಕೇಂದ್ರಗಳನ್ನು ಉನ್ನತೀಕರಿಸುವ ನಿಟ್ಟಿನಲ್ಲಿ ಟಾಟಾ ಟೆಕ್ನಾಲಜೀಸ್​ ಜತೆ ರಾಜ್ಯ ಸರ್ಕಾರ ಒಪ್ಪಂದ ಮಾಡಿಕೊಂಡಿದ್ದು, ಇಂದು ಎಂಒಯುಗೆ ಸಹಿ ಮಾಡಲಾಗಿದೆ.

    ರಾಜ್ಯದ ಐಟಿಐಗಳ ಗುಣಮಟ್ಟ ಹೆಚ್ಚಿಸುವ ಮೂಲಕ ವಿದ್ಯಾರ್ಥಿಗಳಿಗೆ ಅಧಿಕ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಇಂದು ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಟಾಟಾ ಟೆಕ್ನಾಲಜೀಸ್​ ಸಂಸ್ಥೆಯ ಅಧ್ಯಕ್ಷ ಆನಂದ್ ಭಡೆ ಹಾಗೂ ಕೌಶಲಾಭಿವೃದ್ಧಿ, ಜೀವನೋಪಾಯ ಇಲಾಖೆಯ ಕಾರ್ಯದರ್ಶಿ ಡಾ.ಎಸ್. ಸೆಲ್ವಕುಮಾರ್ ಅವರು ಒಪ್ಪಂದಕ್ಕೆ ಸಹಿ ಮಾಡಿದರು.

    ಟಾಟಾ ಟೆಕ್ನಾಲಜೀಸ್ ಜತೆ ಇತರ 20 ಉದ್ಯಮಗಳ ಸಹಭಾಗಿತ್ವ ಇದಕ್ಕಿರಲಿದ್ದು, ಸುಮಾರು 4636.50 ಕೋಟಿ ರೂ. ವೆಚ್ಚದಲ್ಲಿ ರಾಜ್ಯದ 150 ಸರ್ಕಾರಿ ಐಟಿಐಗಳ ಉನ್ನತೀಕರಣ ಈ ಮೂಲಕ ಆಗಲಿದೆ. ಇದರಿಂದ ಪ್ರತಿವರ್ಷ 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಮಾತ್ರವಲ್ಲ ಕರ್ನಾಟಕದ ಐಟಿಐಗಳು ಜಾಗತಿಕ ಮಟ್ಟದ ಕೌಶಲ ತರಬೇತಿ ಕೇಂದ್ರಗಳಾಗಿ ಅಭಿವೃದ್ಧಿ ಆಗಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts