More

    ವಿಜಯವಾಣಿ, ದಿಗ್ವಿಜಯ 24×7 ನ್ಯೂಸ್​ ಆಯೋಜಿಸಿರುವ ಮೂರು ದಿನಗಳ ಮೋಟೋ ಫೆಸ್ಟ್​ಗೆ ಚಾಲನೆ

    ಬೆಂಗಳೂರು: ವಿಜಯವಾಣಿ ಮತ್ತು ದಿಗ್ವಿಜಯ 24×7 ನ್ಯೂಸ್​ ಆಯೋಜಿಸಿರುವ ಮೂರು ದಿನಗಳ ಮೋಟೋ ಫೆಸ್ಟ್​ಗೆ ನಟ ಧನಂಜಯ್, ನಟಿ ಅಮೃತಾ ಹಾಗೂ ವಿಆರ್​ಎಲ್ ಮೀಡಿಯಾ ಎಂ.ಡಿ. ಆನಂದ ಸಂಕೇಶ್ವರ್, ಶಾಸಕಿ ಸೌಮ್ಯ ರೆಡ್ಡಿ ಚಾಲನೆ ನೀಡಿದರು.

    ಜಯನಗರ 4ನೇ ಬ್ಲಾಕ್ ಎಂಇಎಸ್ ಮೈದಾನದಲ್ಲಿ ಮೇಳ ಆಯೋಜಿಸಲಾಗಿದೆ. ಹೊಸ ಕಾರುಗಳು ಹಾಗೂ ಬೈಕ್​ಗಳನ್ನು ಖರೀದಿಸಲು ಗ್ರಾಹಕರಿಗೆ ಉತ್ತಮ ಅವಕಾಶ ಇದಾಗಿದೆ. ಯಾವ ವಾಹನಗಳು ಆಕರ್ಷಕವಾಗಿವೆ, ಯಾವುದನ್ನು ಖರೀದಿಸಿದರೆ ಸೂಕ್ತ ಎಂಬ ಬಗ್ಗೆ ಗ್ರಾಹಕರಿಗೆ ಮಾಹಿತಿ ಸಿಗಲಿದೆ.

    ಲಕ್ಷಾಂತರ ಗ್ರಾಹಕರಿಗೆ ಅನುಕೂಲವಾಗುವಂತೆ ಒಂದೇ ಸೂರಿನಡಿ ವಿವಿಧ ಬ್ರಾಂಡ್​ಗಳ, ವಿನ್ಯಾಸಗಳ ತಂತ್ರಜ್ಞಾನ ಮತ್ತು ಹೊಸ ಅಳವಡಿಕೆ ಹೊಂದಿರುವ ವಾಹನಗಳನ್ನು ಮೋಟೋ ಫೆಸ್ಟ್ ಪರಿಚಯಿಸಲಿದೆ.

    ಪ್ರದರ್ಶನ ವೇದಿಕೆಯಲ್ಲಿ ಗ್ರಾಹಕರಿಗೆ ಅನುಕೂಲವಾಗುವ ಬೆಲೆಗಳಲ್ಲಿ ಮಾರಾಟಕ್ಕೂ ಅವಕಾಶ ನೀಡಲಾಗಿದೆ. ಹೆಚ್ಚಿನ ಮಾಹಿತಿಗೆ ಕೆನ್ನಿ (ಮೊ: 8884432339) ಅವರನ್ನು ಸಂರ್ಪಸಿ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೂ ಭೇಟಿ ಕೊಟ್ಟು ಮಾಹಿತಿ ಪಡೆಯಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts