More

    ಮೋಟೋ ಫೆಸ್ಟ್​ಗೆ ಭಾರಿ ಜನಸ್ಪಂದನೆ

    ಬೆಂಗಳೂರು: ಫೋಕ್ಸ್ ವ್ಯಾಗನ್ ಸಹಯೋಗದಲ್ಲಿ ವಿಜಯವಾಣಿ ಮತ್ತು ದಿಗ್ವಿಜಯ 247 ಸುದ್ದಿವಾಹಿನಿ ಜಯನಗರದ ಎಂಇಎಸ್ ಮೈದಾನದಲ್ಲಿ ಆಯೋಜಿಸಿರುವ ‘ಮೋಟೋ ಫೆಸ್ಟ್’ಗೆ ಎರಡನೇ ದಿನವಾದ ಶನಿವಾರವೂ ಜನಸಾಗರ ಹರಿದು ಬಂದಿತು.

    ಬೆಳಗ್ಗೆ 10 ಗಂಟೆಯಿಂದ ರಾತ್ರಿ 7 ಗಂಟೆಯವರೆಗೂ ಜನರು ದಂಡುದಂಡಾಗಿ ‘ಮೋಟೋ ಫೆಸ್ಟ್’ಗೆ ಭೇಟಿ ನೀಡಿದರು. ಗ್ರಾಹಕರಿಂದ ಸಿಕ್ಕ ಭಾರಿ ಪ್ರತಿಕ್ರಿಯೆಗೆ ವಾಹನ ಮಾರಾಟ ಮಳಿಗೆ ಮಾಲೀಕರೂ ಸಂತಸ ವ್ಯಕ್ತಪಡಿಸಿದರು. ಮಧ್ಯಾಹ್ನದ ಉರಿಬಿಸಿಲನ್ನೂ ಲೆಕ್ಕಿಸದೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮೋಟೋಫೆಸ್ಟ್​ಗೆ ಬಂದಿದ್ದು ವಿಶೇಷವಾಗಿತ್ತು.

    ಸ್ವಂತಕ್ಕೆ ಹೊಸ ವಾಹನ ಹೊಂದುವವರ ಕನಸನ್ನು ನನಸಾಗಿಸಲು ಆಟೋಮೊಬೈಲ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕಂಪನಿಗಳಾದ ಸುಂದರಂ ಮೋಟಾರ್ಸ್ (ಮರ್ಸಿಡಿಸ್ ಬೆಂಜ್), ಆಪಲ್ ಆಟೋ ಪ್ರೖೆ.ಲಿ (ಫೋಕ್ಸ್ ವ್ಯಾಗನ್), ಕಲ್ಯಾಣಿ ಮೋಟಾರ್ಸ್ (ಮಾರುತಿ ಸುಜುಕಿ), ಹೋಂಡಾ ಕಂಪನಿಯ ಎಲ್ಲ ಮಾದರಿಯ ದ್ವಿಚಕ್ರವಾಹನಗಳು, ರೆಡ್​ಸೋಲ್ ಎಂಟರ್​ಪ್ರೖೆಸಸ್ ಪ್ರೖೆ.ಲಿ., (ಕಾರ್ ಸುರಕ್ಷತೆ ಮತ್ತು ನಿರ್ವಹಣಾ ಸಾಧನಗಳು) ಸೇರಿ ವಿವಿಧ ಬಗೆಯ ವಾಹನಗಳು ಹಾಗೂ ಆಟೋಮೊಬೈಲ್ ಉತ್ಪನ್ನಗಳು ನೋಡುಗರನ್ನು ಆಕರ್ಷಿಸಿದವು. ಬ್ಯಾಂಕ್ ಪಾಟರ್°ರ್ ಆಗಿ ಭಾಗವಹಿಸಿರುವ ಕೆನರಾ ಬ್ಯಾಂಕ್ ವಾಹನ ಖರೀದಿಗೆ ಸಿಗುವ ಸಾಲಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿತು.

    ಭವಿಷ್ಯದ ವಿನ್ಯಾಸ, ತಂತ್ರಜ್ಞಾನಗಳ ಬಗ್ಗೆ ಸಮಗ್ರ ಮಾಹಿತಿ ವಿವಿಧ ಮಾದರಿಯ ಕಾರುಗಳನ್ನು ಪ್ರದರ್ಶನದಲ್ಲಿ ಕಾಣಬಹುದಾಗಿದೆ. ಪ್ರತಿ ಮಳಿಗೆಯಲ್ಲೂ ಆಯಾ ಸಂಸ್ಥೆಯ ಭವಿಷ್ಯದ ವಿನ್ಯಾಸಗಳು ಹಾಗೂ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಫೆಸ್ಟ್​ನಲ್ಲಿರುವ ವಾಹನಗಳು ಒಂದಕ್ಕಿಂತ ಒಂದು ವಿಭಿನ್ನವಾಗಿರುವುದರಿಂದ ಸಾರ್ವಜನಿಕರನ್ನು ಆಕರ್ಷಿಸುವಂತಿವೆ. ವಿವಿಧ ಮಾದರಿಗಳ ಐಷಾರಾಮಿ ಕಾರುಗಳನ್ನು ಏಕಕಾಲಕ್ಕೆ ಪರಿಶೀಲಿಸಿ ಕೊಂಡುಕೊಳ್ಳಲು ಪ್ರದರ್ಶನ ನೆರವಾಗುತ್ತಿದೆ. ಅನೇಕರು ತಮಗೆ ಇಷ್ಟವಾದ ಕಾರು-ಬೈಕ್​ಗಳ ಬುಕಿಂಗ್ ಮಾಡಿದರು. ಯುವಕರು ಹೊಸ ಮಾದರಿಯ ಕಾರಿನೊಂದಿಗೆ ಸೆಲ್ಪಿ ತೆಗೆದುಕೊಂಡು ಸಂತಸಪಟ್ಟರು. ಮೋಟೋ ಫೆಸ್ಟ್​ನಲ್ಲಿ ವಾಹನ ಖರೀದಿಸುವ ಗ್ರಾಹಕರಿಗೆ ಅತ್ಯಾಕರ್ಷಕ ಕೊಡುಗೆಗಳನ್ನೂ ಘೋಷಿಸಲಾಗಿದೆ.

    ಕಾರು ಖರೀದಿಗೆ ಆಸಕ್ತಿ: ಸುಂದರಂ ಮೋಟಾರ್ಸ್​ನ ಐಷಾರಾಮಿ ಕಾರುಗಳಾದ ಮರ್ಸಿಡೀಸ್ ಬೆಂಜ್ ಖರೀದಿಸಲು ಹಲವು ಗ್ರಾಹಕರು ಆಸಕ್ತಿ ತೋರಿಸಿದ್ದಾರೆ. ಮೋಟೋ ಫೆಸ್ಟ್ ನಲ್ಲಿ ಗ್ರಾಹಕರಿಂದ ನಮ್ಮ ಕಾರುಗಳಿಗೆ ಉತ್ತಮ ಸ್ಪಂದನೆ ದೊರೆತಿದೆ. 15ಕ್ಕೂ ಹೆಚ್ಚು ಜನರು ಈಗಾಗಲೇ ವಿವಿಧ ಬಗೆಯ ಕಾರಿನ ಮಾಹಿತಿ ಪಡೆದು ಸದ್ಯದಲ್ಲೇ ಖರೀದಿಸುವುದಾಗಿ ಭರವಸೆ ನೀಡಿದ್ದಾರೆ. ಗ್ರಾಹಕರಿಗೆ ಐಷಾರಾಮಿ ಕಾರುಗಳ ಮಾಹಿತಿ ಪಡೆದುಕೊಳ್ಳಲು ಮೋಟೋ ಫೆಸ್ಟ್ ಅನುಕೂಲವಾಗಿದೆ ಎಂದು ಸುಂದರಂ ಮೋಟಾರ್ಸ್​ನ ಟೀಮ್ ಲೀಡರ್ ಮಧುಸೂದನ್ ಹೇಳಿದರು.

    ಗ್ರಾಹಕರಿಂದ ಮೆಚ್ಚುಗೆ: ಇಂದಿನ ದಿನಗಳಲ್ಲಿ ವಾಹನ ವ್ಯವಹಾರ ಸ್ಪರ್ಧಾತ್ಮಕವಾಗಿದೆ. ವಾಹನ ಖರೀದಿಸುವಾಗ ಎಲ್ಲ ಮಾಹಿತಿ ಪಡೆದುಕೊಳ್ಳಲು ಗ್ರಾಹಕರು ಮುಂದಾಗುವುದು ಸಹಜ. ಒಂದೇ ಕಡೆ ವಿವಿಧ ಕಂಪನಿಗಳ ವಾಹನಗಳನ್ನು ನೋಡಿ, ಪರಿಶೀಲಿಸಿ, ಸಾಲ ಸೌಲಭ್ಯ ಸೇರಿ ಎಲ್ಲ ರೀತಿಯ ಮಾಹಿತಿ ಸಿಗುವಂತೆ ಮಾಡಿರುವುದು ಒಳ್ಳೆಯ ಕ್ರಮ ಎಂದು ಗ್ರಾಹಕರು ವಿಜಯವಾಣಿ ಹಾಗೂ ದಿಗ್ವಿಜಯ ಸುದ್ದಿವಾಹಿನಿಯ ಪ್ರಯತ್ನವನ್ನು ಕೊಂಡಾಡಿದರು. ವಿಜಯವಾಣಿ ಹಾಗೂ ದಿಗ್ವಿಜಯ 247 ನ್ಯೂಸ್ ಚಾನಲ್ ವರ್ಷವಿಡೀ ಒಂದಿಲ್ಲೊಂದು ರೀತಿ ಜನರಿಗೆ ಉಪಯುಕ್ತ ಕಾರ್ಯಕ್ರಮ ಆಯೋಜಿಸುತ್ತವೆ. ಅವುಗಳ ಪೈಕಿ ಈ ಕಾರ್ಯಕ್ರಮ ತುಂಬಾ ವಿಶಿಷ್ಠವಾಗಿದೆ ಎಂದು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರು.

    ಎಸ್-ಪ್ರೆಸ್ಸೋ ಕಾರು: ಮೋಟೊ ಫೆಸ್ಟ್​ಗೆ ಭೇಟಿ ನೀಡಿದ ಹಲವು ಗ್ರಾಹಕರು ಮಾರುತಿ ಸುಜುಕಿಯ ಹೊಸ ಮಾದರಿಯ ಎಸ್-ಪ್ರೆಸ್ಸೋಗೆ ಮಾರು ಹೋದರು. ಹೆಚ್ಚಿನವರು ಈ ಕಾರಿನ ಬಗ್ಗೆ ಮಾಹಿತಿ ಪಡೆದುಕೊಂಡರು. ರಿಯಾಯಿತಿ ದರದಲ್ಲಿ ಲಭ್ಯವಿರುವ ಗುಣಮಟ್ಟದ ಕಾರು ಇದಾಗಿದ್ದು, ನಗರದಲ್ಲಿ ಓಡಾಡಲು ಅನುಕೂಲಕರವಾಗಿದೆ. ಕಾರಿನಲ್ಲಿ ಆಟೋಮ್ಯಾಟಿಕ್ ಹಾಗೂ ಮ್ಯಾನ್ಯುಯಲ್ ಎಂಬ ಎರಡು ಮಾದರಿಗಳಿವೆ. ವೃದ್ಧರು ಹೆಚ್ಚಾಗಿ ಆಟೋಮ್ಯಾಟಿಕ್ ಗೇರ್ ಸೌಲಭ್ಯವಿರುವ ಕಾರನ್ನು ಹೊಂದಲು ಬಯಸುತ್ತಾರೆ. ಗುಣಮಟ್ಟಕ್ಕೆ ಹೆಚ್ಚಿನ ಒತ್ತು ಕೊಡಲಾಗಿದೆ. ಈ ಕಾರಿನಲ್ಲಿ ಸ್ಟಾ್ಯಂಡರ್ಡ್, ಎಲ್​ಎಕ್ಸ್​ಐ, ವಿಎಕ್ಸ್​ಐ, ವಿಎಕ್ಸ್​ಐ ಪ್ಲಸ್ ಎಂಬ ನಾಲ್ಕು ಆಯ್ಕೆಗಳಿವೆ. ಬ್ರಿ್ರಾ ಕಾರಿನ ವಿನ್ಯಾಸವನ್ನು ಈ ಕಾರಿಗೆ ಎರವಲು ಪಡೆಯಲಾಗಿದೆ. ಆದರೆ, ಈ ಕಾರು ಬ್ರಿಜಾಗಿಂತ ಸ್ವಲ್ಪ ಸಣ್ಣದಾಗಿದ್ದು, ವಿಶಾಲ ಬೂಟ್​ಸ್ಪೇಸ್ ಹೊಂದಿದೆ. ಎಕ್ಸ್​ಯುವಿ ಮಾದರಿಯ ಕಾರಿನಲ್ಲಿ ಪ್ರಯಾಣಿಸಿದ ಅನುಭವ ಸಿಗುತ್ತದೆ. ಎಕ್ಸ್​ಯುವಿ ಲುಕ್ ಕೊಡುವ ಎಸ್-ಪ್ರೆಸ್ಸೋ, ಹಲವು ಐಷಾರಾಮಿ ಸೌಲಭ್ಯಗಳನ್ನು ಹೊಂದಿದೆ. ಎಸ್-ಪ್ರೆಸ್ಸೋ ಕಾರು 998 ಸಿಸಿ ಇಂಜಿನ್ ಹೊಂದಿದ್ದು, 68 (50 ಕೆಡಬ್ಲ್ಯೂ) 5500 ಆರ್​ಪಿಎಮ್ ಮ್ಯಾಕ್ಸಿಮಮ್ ಪವರ್ ಹಾಗೂ 90 ಎನ್​ಎಮ್ 3500 ಆರ್​ಪಿಎಮ್ ಮ್ಯಾಕ್ಸಿಮಮ್ ಟಾರ್ಕ್ ಹೊಂದಿದೆ ಎಂದು ಸಂಸ್ಥೆಯ ಮ್ಯಾನೇಜರ್ ನವೀನ್ ತಿಳಿಸಿದ್ದಾರೆ.

    ಪ್ರಕಾಶಮಾನವಾಗಿ ಬೆಳಗುವ ಬಲ್ಬ್​ಗಳು: ರೆಡ್​ಸೋಲ್ ಎಂಟರ್​ಪ್ರೖೆಸಸ್ ಪ್ರೖೆ.ಲಿ. ಕಂಪನಿ ತಯಾರಿಸಿರುವ ಕಾರಿಗೆ ಅಳವಡಿಸಬಹುದಾದ ಹೊಸ ಮಾದರಿಯ ವಿವಿಧ ಉತ್ಪನ್ನ ಗಳು ಮೋಟೋ ಫೆಸ್ಟ್​ನ ವಾಹನಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಸಾಮಾನ್ಯವಾಗಿ ಕಾರಿನ ಲೈಟ್​ಗಳು ಹೆಚ್ಚು ಪ್ರಕಾಶಮಾನವಾಗಿರುವುದಿಲ್ಲ. ಈ ಕಂಪನಿ ಮೂಲಕ ಹೆಚ್ಚು ಪ್ರಕಾಶಮಾನವಾದ ಬಲ್ ್ಬ ಗಳನ್ನು ಅಳವಡಿಸಿಕೊಳ್ಳಬಹುದಾಗಿದೆ.

    ನಮ್ಮಲ್ಲಿರುವ ಈ ಪ್ರಕಾಶಮಾನವಾದ ಲೈಟ್ ವ್ಯವಸ್ಥೆ ದೂರ ಪ್ರಯಾಣಕ್ಕೆ ಅನುಕೂಲ ಕರವಾಗಿದೆ. ಸಾಮಾನ್ಯ ಬಲ್ಬ್​ಗಳಿಗೆ ಎಲ್​ಇಡಿ ಅಳವಡಿಸುವ ವ್ಯವಸ್ಥೆಯೂ ಇರುವುದಾಗಿ ಸಂಸ್ಥೆಯ ಎಂ.ಡಿ. ಸಿದ್ದು ಹಿರೇಮಠ್ ಹೇಳಿದರು. ಕಾರಿನ ಇಂಟೀರಿಯರ್ ಡೆಕೊರೇಷನ್​ಗಳಿಗೆ ಲೆಗ್ ರೂಂನಲ್ಲಿ ಲೈಟ್ ವ್ಯವಸ್ಥೆ ಇರುವುದಿಲ್ಲ. ಎಲ್​ಇಡಿ ಬಲ್ಬ್ ಅಳವಡಿಸಿ ಕಾರಿನ ಬಾಗಿಲು ತೆರೆದಾಗ ಎಲ್ಲ ಲೆಗ್ ರೂಂಗೂ ಬೆಳಕು ಬರುವಂತೆ ವ್ಯವಸ್ಥೆ ಮಾಡಿಕೊಡಲಾಗುವುದು ಎಂದರು. ಸಿಸ್ಟಂನಿಂದ ಆಂಡ್ರಾಯ್್ಡೆ ಸಂಪರ್ಕ ಕಲ್ಪಿಸುವ ವ್ಯವಸ್ಥೆಯೂ ರಿಯಾಯಿತಿ ದರದಲ್ಲಿ ಕೊಡಲಾಗು ತ್ತಿದೆ. ಕಾರಿನ ಹಿಂದಿನ ಎರಡೂ ಸೀಟುಗಳಿಗೆ ಹೆಡ್​ರೆಸ್ಟ್​ಗಳನ್ನು ಅಳವಡಿಸಿ ಡಿವಿಡಿ, ಆಂಡ್ರಾಯ್್ಡ ಮತ್ತಿತರ ಆಯ್ಕೆಗಳನ್ನು ನೀಡಲಾಗುವುದು. ನಡುದಾರಿಯಲ್ಲಿ ಕಾರಿನ ಚಕ್ರದ ಗಾಳಿ ಕಡಿಮೆಯಾದರೆ ನಮ್ಮಲ್ಲಿರುವ ಏರ್ ಕಂಪ್ರೆಸರ್​ನಿಂದ ಚಕ್ರಗಳಿಗೆ ಗಾಳಿ ತುಂಬಿಸಬಹುದು. ಬೇಸಿಗೆ ಕಾಲದಲ್ಲಿ ಕಾರಿನೊಳಗೆ ಹೆಚ್ಚಿನ ಬಿಸಿ ವಾತಾವರಣವಿರಲಿದ್ದು, ಇದರ ಪರಿಹಾರಕ್ಕೆ 8 ಲೀಟರ್​ನಿಂದ 25 ಲೀಟರ್​ವರೆಗಿನ ರೆಫ್ರಿಜರೇಟರ್​ನ್ನು ಅಳವಡಿಸಿಕೊಡಲಾಗುತ್ತದೆ ಎಂದು ವಿವರಿಸಿದರು.

    ಇಂದು ಕೊನೆ ದಿನ: ‘ಮೋಟೋ ಫೆಸ್ಟ್’ ಇಂದು ಕೊನೆಯ ದಿನವಾಗಿದ್ದು, ವಾಹನ ಪ್ರಿಯರು ಸದುಪಯೋಗಪಡಿಸಿಕೊಳ್ಳಬಹುದು. ಇಲ್ಲಿರುವ ವಿವಿಧ ಮಾದರಿಯ ವಾಹನಗಳ ಬಗ್ಗೆ ಮಾಹಿತಿ ಪಡೆದುಕೊಂಡು ಖರೀದಿಸಬಹುದಾಗಿದೆ. ಒಂದೇ ಸೂರಿನಡಿ ಹಲವು ಮಾದರಿಯ ಕಾರುಗಳ ಮಾಹಿತಿ ಪಡೆದು ತಮ್ಮಿಷ್ಟದ ಕಾರನ್ನು ಖರೀದಿ ಮಾಡಬಹುದು. ದ್ವಿಚಕ್ರವಾಹನ ಸಂಸ್ಥೆಯಲ್ಲಿ ಮುಂಚೂಣಿಯಲ್ಲಿರುವ ಹೋಂಡಾ ಸಂಸ್ಥೆಯ ದ್ವಿಚಕ್ರ ವಾಹನ ಖರೀದಿಗೆ ಸಾಕಷ್ಟು ಗ್ರಾಹಕರು ಭೇಟಿ ನೀಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವಾರು ಗ್ರಾಹಕರು ಹೋಂಡಾ ಸಂಸ್ಥೆಯ ದ್ವಿಚಕ್ರ ವಾಹನ ಖರೀದಿಸಲು ಆಸಕ್ತಿ ತೋರಿದ್ದಾರೆ.

    ಆಟೋಮೊಬೈಲ್ ಕ್ಷೇತ್ರದ ಬಗ್ಗೆ ಮಾಹಿತಿ ಪಡೆಯಲು ಈ ಫೆಸ್ಟ್ ಬಹಳ ಉಪಯುಕ್ತವಾಗಿದೆ. ಸಾರ್ವಜನಿಕರು ಇದರ ಸುಪಯೋಗ ಪಡೆದುಕೊಳ್ಳಬಹುದು.

    | ರವೀಶ್ ಜೆ.ಪಿ. ನಗರ

    ನಾನು ಖರೀದಿಸಬೇಕೆಂದಿರುವ ಕಾರಿನ ಬಗ್ಗೆ ಮೋಟೋ ಫೆಸ್ಟ್​ನಲ್ಲಿ

    ಮಾಹಿತಿ ಪಡೆದಿದ್ದು, ಈ ಫೆಸ್ಟ್ ವಾಹನಪ್ರಿಯರಿಗೆ ಇಷ್ಟವಾಗು ವಂತಿದೆ.

    | ಕುಶಾಲ್ ಜಯನಗರ

    ಹೊಸ ಕಾರು, ದ್ವಿಚಕ್ರ ವಾಹನ, ಕಾರುಗಳಿಗೆ ಅಳವಡಿಸುವ ವಿವಿಧ ಬಗೆಯ ಉಪಕರಣಗಳು ಸೇರಿ ಆಟೋಮೊಬೈಲ್ ಕ್ಷೇತ್ರಕ್ಕೆ ಸಂಬಂಧಿ ಸಿದ ಎಲ್ಲ ಉತ್ಪನ್ನಗಳ ಬಗ್ಗೆ ಒಂದೇ ಸೂರಿನಡಿ ಮಾಹಿತಿ ನೀಡಿ, ವಾಹನ ಖರೀದಿಸಲು ಅವಕಾಶ ಕಲ್ಪಿಸಿರುವುದು ಉತ್ತಮ ಕೆಲಸ.

    | ಉಮೇಶ್ ಪದಕಿ ಪದ್ಮನಾಭನಗರ

    ಕಾರು ಖರೀದಿಸಲು ಬಯಸುತ್ತಿದ್ದೇನೆ. ಇಲ್ಲಿ ಸೂಕ್ತ ಮಾಹಿತಿ ಪಡೆದ ಬಳಿಕ ಯಾವ ಕಾರು ಖರೀದಿಸಬೇಕು ಎಂಬ ಬಗ್ಗೆ ಸ್ಪಷ್ಟವಾಗಿ ನಿರ್ಧರಿಸುತ್ತೇನೆ.

    | ಅನಿಲ್ ಕರೋಲಗಿ ಪದ್ಮನಾಭನಗರ

    ಮೋಟೋ ಫೆಸ್ಟ್​ನಲ್ಲಿ ಒಂದೇ ಸೂರಿನಲ್ಲಿ ಇಷ್ಟೊಂದು ಕಾರುಗಳನ್ನು ನೋಡಿ ಖುಷಿಯಾದೆ. ನನ್ನ ಮಗನಿಗಾಗಿ ಕಾರು ಖರೀದಿಸಲು ಬಂದಿದ್ದೇನೆ.

    | ಪ್ರಕಾಶ್ ಜಯನಗರ

    ಹೊಗೆ, ಧೂಳು, ಮಳೆ, ಚಳಿ, ಬಿಸಿಲಿನಿಂದ ರಕ್ಷಣೆ ನೀಡುವ ಅತ್ಯವಶ್ಯಕ ವಾಹನ. ಆದರೆ, ಸದ್ಯಕ್ಕೆ ನಾನು ದ್ವಿಚಕ್ರ ವಾಹನ ಕೊಳ್ಳಲು ಬಂದಿದೆದೕನೆ. ಒಂದೇ ಕಡೆಯಲ್ಲಿ ಇಷ್ಟೊಂದು ವಾಹನಗಳ ಸಿಗುತ್ತಿರುವುದು ಖರೀದಿಸುವವರಿಗೆ ಅನುಕೂಲತೆ ಕಲ್ಪಿಸಿದೆ.

    | ಸೋಮೇಶ್ ಜೆ.ಪಿ ನಗರ

    ದ್ವಿಚಕ್ರವಾಹನ ಖರೀದಿಸಬೇಕೆಂದಿದ್ದು, ಈ ಬಗ್ಗೆ ಮಾಹಿತಿ ಪಡೆಯಲು ಬಂದಿದ್ದೇನೆ. ಮೋಟೋ ಫೆಸ್ಟ್ ಕಾರ್ಯಕ್ರಮ ವಾಹನ ಪ್ರಿಯರಿಗೆ ಕುತೂಹಲ ಹೆಚ್ಚಿಸಿದೆ.

    | ಆಶಾ ಬಾಪೂಜಿನಗರ

    ವಿಜಯವಾಣಿ ಹಾಗೂ ದಿಗ್ವಿಜಯ 247 ನ್ಯೂಸ್ ಚಾನಲ್ ನಡೆಸುತ್ತಿರುವ ಇಂತಹ ಕಾರ್ಯಕ್ರಮದಿಂದ ಆಟೋ ಮೊಬೈಲ್​ಪ್ರಿಯರಿಗೆ ಅನುಕೂಲಗಳಾಗಿದೆ.

    | ಭರತ್ ಜಯನಗರ

    ಬೇರೆ ಬೇರೆ ಕಂಪನಿಗಳ ಎಲ್ಲ ಕಾರುಗಳು ಒಂದೇ ಕಡೆ ನೋಡಲು ಸಿಕ್ಕಿದ್ದು ಅನುಕೂಲವಾಗಿದೆ.

    | ಶ್ರೀವಿದ್ಯಾ ಜಯನಗರ

    ಸಣ್ಣ ಮಾದರಿಯ ಕಾರು ಖರೀದಿಸ ಬೇಕು ಎಂದು ಕೊಂಡಿದ್ದೇನೆ. ಇಲ್ಲಿ ಅಂತಹ ಕಾರುಗಳ ಬಗ್ಗೆ ಸಾಕಷ್ಟು ಮಾಹಿತಿ ಸಿಕ್ಕಿದೆ.

    | ಭಾಗ್ಯಲಕ್ಷ್ಮೀ ನಾಗರಬಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts