More

    ಪ್ರೇರಣಾ ಉತ್ಸವಕ್ಕೆ ಅದ್ದೂರಿ ಚಾಲನೆ

    ಚಿಕ್ಕೋಡಿ ಗ್ರಾಮೀಣ: ಯಕ್ಸಂಬಾ ಪಟ್ಟಣದಲ್ಲಿ ಜೊಲ್ಲೆ ಗ್ರೂಪ್‌ನಿಂದ ಬುಧವಾರ ಆಯೋಜಿಸಿರುವ ಪ್ರೇರಣಾ ಉತ್ಸವಕ್ಕೆ ಸಕಲ ವಾದ್ಯಮೇಳಗಳೊಂದಿಗೆ ಅದ್ದೂರಿಯಾಗಿ ಚಾಲನೆ ನೀಡಲಾಯಿತು.

    ಮಹಾದೇವ ಮಂದಿರದಿಂದ, ಬಸವ ವೃತ್ತದ ಮೂಲಕವಾಗಿ ನಣದಿ ಜೊಲ್ಲೆ ಗ್ರೂಪ್ ಸಂಸ್ಥೆ ಶಾಲಾ ಆವರಣದಲ್ಲಿರುವ ಜ್ಯೋತಿಬಾ ಮಂದಿರದವರೆಗೆ ಗೊಂಬೆ ಕುಣಿತ, ಹೆಜ್ಜೆ ಕುಣಿತ, ಡೊಳ್ಳುಕುಣಿತ, ಅಡ್ಡಪಲ್ಲಕ್ಕಿ , ಕುದುರೆ ಕುಣಿತ ಸೇರಿ ವಿವಿಧ ಗ್ರಾಮದ ನಂದಿಕೋಲುಗಳು ಹಾಗೂ ವಿವಿಧ ಜಾನಪದ ಕಲಾಮೇಳಗಳು ಪ್ರೇರಣಾ ಉತ್ಸವದ ಭವ್ಯ ಮೆರವಣಿಗೆಯ ಉದ್ಘಾಟನಾ ಸಮಾರಂಭಕ್ಕೆ ಮೆರುಗು ತಂದವು.

    ಜೊಲ್ಲೆ ಗ್ರೂಪ್ ಸಂಸ್ಥಾಪಕ ಅಣ್ಣಾಸಾಹೇಬ ಜೊಲ್ಲೆ, ಶಾಸಕಿ ಶಶಿಕಲಾ ಜೊಲ್ಲೆ, ಪ್ರೇರಣಾ ಉತ್ಸವದ ರೂವಾರಿ ಜ್ಯೋತಿಪ್ರಸಾದ ಜೊಲ್ಲೆ, ಪ್ರಿಯಾ ಜೊಲ್ಲೆ, ಯುವಧುರೀಣ ಬಸವಪ್ರಸಾದ ಜೊಲ್ಲೆ, ಕಾಗವಾಡ ಯತೀಶ್ವರಾನಂದ ಸ್ವಾಮೀಜಿ, ನಿಪ್ಪಾಣಿ ಮಲ್ಲಿಕಾರ್ಜುನ ಸ್ವಾಮೀಜಿ ಪ್ರಥಮ ಪೂಜೆ ಸಲ್ಲಿಸಿ ಉತ್ಸವ ಮೆರವಣಿಗೆಗೆ ಚಾಲನೆ ನೀಡಿದರು.

    ಗಡಿಭಾಗದ ಆರಾಧ್ಯ ದೈವ ಜ್ಯೋತಿಬಾ ಮೂರ್ತಿಯ ಮೆರವಣಿಗೆಯಲ್ಲಿ ಯಕ್ಸಂಬಾ, ಉಳ್ಳಾಗಡ್ಡಿವಾಡಿ, ಸದಲಗಾ, ಯಾದ್ಯಾನವಾಡಿ, ನಣದಿವಾಡಿ ಸೇರಿ ಅನೇಕ ಗ್ರಾಮದ ಭಕ್ತರು ನಂದಿಕೋಲುಗಳನ್ನು ಹೆಗಲ ಮೇಲೆ ಹೊತ್ತು ಕುಣಿದರು. ನೆರೆದ ಭಕ್ತರು ದೇವರ ದರ್ಶನ ಪಡೆದುಕೊಂಡರು. ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

    ಮುಖಂಡರಾದ ವಿಜಯ ರಾವುತ, ಕಲ್ಲಪ್ಪ ಜಾಧವ, ಅಪ್ಪಾಸಾಹೇಬ ಜೊಲ್ಲೆ, ಜಯಾನಂದ ಜಾಧವ ಇತರರಿದ್ದರು.

    ರಂಗೋಲಿ ಸ್ಪರ್ಧೆ: ಬೆಳಗ್ಗೆ ಮನೆ ಅಂಗಳದಿ ರಂಗೋಲಿ ಸ್ಪರ್ಧೆ ಅಂಗವಾಗಿ ಯಕ್ಸಂಬಾ ಪಟ್ಟಣದ ಮನೆಮನೆ ಹಾಗೂ ಬೀದಿ ಬೀದಿಗಳಲ್ಲಿ ಮಹಿಳೆಯರು ರಂಗೋಲಿ ಬಿಡಿಸಿದ್ದರು. ಶಾಲಾ ಮಕ್ಕಳಿಗಾಗಿ ವಚನ ಮತ್ತು ಮಗ್ಗಿ ಕಂಠಪಾಠ , ಸಮೂಹ ಗಾಯನ ಸ್ಪರ್ಧೆ, ವತ್ತಿ ಮಾರ್ಗದರ್ಶನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗುಗ್ಗುಳೋತ್ಸವದಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts