More

    ತಾಯಿಯ ಮಾನಸಿಕ ಆರೋಗ್ಯ ಮುಖ್ಯ: ಡಾ.ಕೌಸ್ತುಭಾ

    ಶಿವಮೊಗ್ಗ: ಆರೋಗ್ಯ ಸೂಚ್ಯಂಕಗಳಲ್ಲಿ ತಾಯಿ ಹಾಗೂ ಶಿಶುವಿನ ಮರಣ ಪ್ರಮಾಣ ಕಡಿಮೆ ಇರಬೇಕು. ರಾಷ್ಟ್ರೀಯ ಆರೋಗ್ಯ ಅಭಿಯಾನದ ಫಲವಾಗಿ ತಾಯಿ ಹಾಗೂ ಶಿಶುವಿನ ಮರಣ ಪ್ರಮಾಣ ವ್ಯಾಪಕವಾಗಿ ಕಡಿಮೆಯಾಗಿದೆ ಎಂದು ವೈದ್ಯೆ ಡಾ. ಕೌಸ್ತುಭಾ ಅರುಣ್ ತಿಳಿಸಿದರು.

    ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಭಾನುವಾರ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ತಾಯಿಯ ಮಾನಸಿಕ ಆರೋಗ್ಯದ ಬಗ್ಗೆ ಮುತುವರ್ಜಿ ವಹಿಸಬೇಕು. ಮಕ್ಕಳಿಗೆ ತಾಯಿ ಹಾಲು ಅವಶ್ಯ. ನಿಗದಿತ ಸಮಯದಲ್ಲಿ ಮಗುವಿಗೆ ಲಸಿಕೆಗಳನ್ನು ಕೊಡಿಸಬೇಕು. ಜಂತು ಹುಳು ನಿವಾರಣಾ ಮಾತ್ರೆಗಳ ಸೇವನೆ ಅಗತ್ಯ ಎಂದು ಹೇಳಿದರು.
    ತಾಯಿ-ಮಗು ಸುರಕ್ಷಿತವಾಗಿದ್ದರೆ ದೇಶ ಸದೃಢವಾಗಿರುತ್ತದೆ. ಆರೋಗ್ಯದ ಬಗ್ಗೆ ಎಲ್ಲರೂ ಕಾಳಜಿ ವಹಿಸಬೇಕು. ಸಕಾಲದಲ್ಲಿ ಸರ್ಕಾರದಿಂದ ಸಿಗುವ ಸವಲತ್ತನ್ನು ಸದ್ಬಳಕೆ ಮಾಡಿಕೊಳ್ಳಬೇಕು. ವೈದ್ಯರ ಸಲಹೆ ಮೇರೆಗೆ ಔಷಧೋಪಚಾರ ಮಾಡಿಕೊಳ್ಳುವ ಜತೆಗೆ ಪ್ರತಿದಿನ ಯೋಗ, ಪ್ರಾಣಾಯಾಮ, ಧ್ಯಾನ ಮಾಡಬೇಕು. ಒತ್ತಡದಿಂದ ದೂರವಿರಬೇಕು ಎಂದರು.
    ಆರೋಗ್ಯ ಸಂಪತ್ತಿನ ಮುಂದೆ ಬೇರೆ ಸಂಪತ್ತಿಲ್ಲ. 40 ವರ್ಷದ ನಂತರ ಪ್ರತಿಯೊಬ್ಬರೂ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಉತ್ತಮ ಜೀವನ ಕೌಶಲದ ಜತೆಗೆ ಸಕಾರಾತ್ಮಕ ಭಾವನೆ ಹೊಂದಬೇಕು ಎಂದು ತಿಳಿಸಿದರು.
    ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಸತೀಶ್‌ಚಂದ್ರ, ಮಾಜಿ ಸಹಾಯಕ ಗೌರ್ನರ್ ಜಿ.ವಿಜಯಕುಮಾರ್, ಪ್ರಮುಖರಾದ ಚಂದ್ರಹಾಸ ರಾಯ್ಕರ್, ಚಂದ್ರಶೇಖರಯ್ಯ, ಮುಕುಂದೇಗೌಡ, ಕೃಷ್ಣಮೂರ್ತಿ, ಡಾ. ಅರುಣ್, ಡಾ. ಧನಂಜಯ, ಆಲೆಮನೆ ಮಹೇಶ್, ಕೇಶವಪ್ಪ, ಬಿಂದು ವಿಜಯಕುಮಾರ್, ಮಧುರಾ ಮಹೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts