More

    ಒಂದು ವರ್ಷದ ಮಗಳನ್ನೇ ಮಾರಿದ ತಾಯಿ; ಅಮ್ಮನೂ ಸೇರಿ 9 ಮಂದಿಯ ಬಂಧನ

    ಚೆನ್ನೈ: ಮಕ್ಕಳ ಮಾರಾಟ ಜಾಲ ಇಂದು ನಿನ್ನೆಯದಲ್ಲ. ಹಲವಾರು ವರ್ಷಗಳ ಹಿಂದಿನಿಂದಲೂ ಮಕ್ಕಳ ಮಾರಾಟ ನಡೆಯುತ್ತಿದೆ. ಆದರೆ ಈ ಪ್ರಕರಣದಲ್ಲಿ ಸ್ವಂತ ತಾಯಿಯೇ ಮಗಳನ್ನು ಮಾರಾಟ ಮಾಡಿದ್ದು, ಪೊಲೀಸರು ಆಕೆಯನ್ನು ಸೇರಿದಂತೆ ಒಟ್ಟು 9 ಮಂದಿಯನ್ನು ಬಂಧಿಸಿದ್ದಾರೆ.

    ಮಗುವಿನ ತಾಯಿ ಕಲೈಸೆಲ್ವಿ ಆಕೆಯ ಸಹಚರ ಕರುಪ್ಪುಸಾಮಿ, ಮಗುವನ್ನು ಖರೀದಿಸಿದ್ದ ದಂಪತಿ, ಏಜೆಂಟ್​​ಗಳಾದ ಮರಿಯಮ್ಮ, ಮಹೇಶ್ವರಿ ಹಾಗೂ ಇನ್ನು ಮೂವರು ಸೇರಿ 9 ಮಂದಿಯನ್ನು ಬಂಧಿಸಲಾಗಿದೆ.

    ಇದನ್ನೂ ಓದಿ: ಹೊಚ್ಚ ಹೊಸ ಕಾರಿನಲ್ಲಿ ಅಂತಿಮ ಪ್ರಯಾಣ; ಇಬ್ಬರು ಸ್ನೇಹಿತರ ಬಲಿ ಪಡೆದವನಿಗೆ ಕೊನೆಗೂ ಜೈಲು ಶಿಕ್ಷೆ

    ಸೇವಲ್​ಪಟ್ಟಿ ನಿವಾಸಿ ಕಲೈಸೆಲ್ವಿ ತನ್ನ ಪತಿಯ ಮರಣದ ಬಳಿಕ ಕರುಪ್ಪುಸಾಮಿ ಎಂಬಾತನ ಜತೆಗಿದ್ದಳು. ಇವರು ತಮಿಳುನಾಡು ವಿರುಧುನಗರ ಜಿಲ್ಲೆಯ ಮಕ್ಕಳಿಲ್ಲದ ದಂಪತಿಗೆ ಒಂದು ವರ್ಷದ ಹೆಣ್ಣು ಮಗುವನ್ನು 2.3 ಲಕ್ಷ ರೂಪಾಯಿಗೆ ಮಾರಿದ್ದರು.

    ಇದನ್ನೂ ಓದಿ: ಗೋವಾ-ಕೇರಳದಿಂದ ಕರ್ನಾಟಕಕ್ಕೆ ಬರಲು ಇನ್ನು ಕರೊನಾ ನೆಗೆಟಿವ್ ವರದಿ ಬೇಕಿಲ್ಲ; ಆದರೆ…

    ಬುಧವಾರ ರಾತ್ರಿ ವಿರುಧನಗರ ಚೈಲ್ಡ್​ಲೈನ್​ಗೆ ಮಗುವಿನ ಮಾರಾಟವಾಗಿರುವ ಕುರಿತು ಅನಾಮಧೇಯ ಕರೆ ಬಂದಿತ್ತು. ಚೈಲ್ಡ್​ಲೈನ್​ಗೆ ಸಂಬಂಧಪಟ್ಟವರು ಕಲೈಸೆಲ್ವಿ ನೆಲೆಸಿದ್ದ ಪ್ರದೇಶಕ್ಕೆ ಹೋಗಿ ವಿಚಾರಿಸಿದಾಗ ಮಗು ಮಾರಾಟವಾಗಿರುವುದು ದೃಢಪಟ್ಟಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.
    ಮದುವೆ ದಲ್ಲಾಳಿಗಳ ರೂಪದಲ್ಲಿ ಕೆಲವು ಏಜೆಂಟ್​ಗಳು ಮಕ್ಕಳ ಮಾರಾಟದಲ್ಲಿ ತೊಡಗಿದ್ದು, ಇಂಥ ಪ್ರಕರಣಗಳು ಹಲವು ನಡೆಯುತ್ತಿರುವುದರ ಶಂಕೆ ಮೂಡಿದೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.

    ಪದವಿ ಪರೀಕ್ಷೆ ಒಂದು ತಿಂಗಳು ಮುಂದೂಡಲು ವಿಶ್ವವಿದ್ಯಾಲಯಗಳಿಗೆ ಸೂಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts