More

    ಗೇರು ಪರಾಗಸ್ಪರ್ಶಕ್ಕೆ ಸೊಳ್ಳೆ ಕಾಟ!

    ಪುತ್ತೂರು: ಜನವರಿ ಮೊದಲ ವಾರ ಚಳಿ ಸಹಿತ ಮಳೆಯಾಗಿದ್ದರಿಂದ ಗೇರು ಹೂ ನಿಗದಿತ ಕಾಲಕ್ಕಿಂತ ತುಸು ಬೇಗನೆ ಚಿಗುರೊಡೆದಿದೆ. ಆದರೆ ಯಥೇಚ್ಛವಾಗಿ ಟೀ ಸೊಳ್ಳೆ ಕಾಟದಿಂದ ಗೇರು ಪರಾಗಸ್ಪರ್ಶಕ್ಕೆ ತೊಂದರೆಯಾಗಿದೆ.

    ಡಿಸೆಂಬರ್ ಕೊನೇ ವಾರದಲ್ಲಿ ಚಳಿ ಇದ್ದು, ಜನವರಿಯಲ್ಲಿ ಸಾಧಾರಣ ಮಳೆಯಾಗಿದೆ. ಚಳಿ ಸಹಿತ ಅಲ್ಪ ಮಳೆ ಕಾರಣದಿಂದ ಗೇರು ಹೂ ಚಿಗುರೋಡೆಯುವ ಪ್ರಮಾಣ ತುಸು ವೇಗ ಪಡೆದುಕೊಂಡಿತ್ತು. ಗೇರು ಹೂವಿನ ಪರಿಮಳಕ್ಕೆ ದುಂಬಿಗಳು ಆಕರ್ಷಣೆಗೊಂಡು ಪರಾಗಸ್ಪರ್ಶ ಪ್ರಕ್ರಿಯೆ ನಡೆಯುವುದು ರೂಢಿ. ಆದರೆ ಮಳೆಯಿಂದ ಟೀ ಜಾತಿಯ ಸೊಳ್ಳೆಯ ಸಂತಾನೋತ್ಪತ್ತಿಗೆ ಅನುಕೂಲಕರ ಸ್ಥಿತಿ ಉಂಟಾಗಿ ಚಿಗುರೊಡೆದ ಹೂವಿನ ರಸ ಹೀರುವುದರಿಂದ ಗೇರು ಪರಾಗಸ್ಪರ್ಶಕ್ಕೆ ತೊಂದರೆಯಾಗಿದೆ.

    ಗೇರು ಉತ್ಪಾದನೆ ಮೇಲೆ ಪರಿಣಾಮ: ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ ಪ್ರದೇಶ, ಗದಗ, ಹಾವೇರಿ, ಚಿತ್ರದುರ್ಗ, ಧಾರವಾಡ ಮತ್ತು ಬೆಳಗಾವಿ ಪ್ರದೇಶ, ತುಮಕೂರು, ಶಿರಾ, ಮಧುಗಿರಿ ಪ್ರದೇಶ ಹಾಗೂ ಕೋಲಾರ ಜಿಲ್ಲೆಯ ಚಿಂತಾಮಣಿ ಮುಂತಾದ ಕಡೆ ಗೇರು ಕೃಷಿ ಚೆನ್ನಾಗಿ ಬೆಳೆಯಲಾಗುತ್ತಿದ್ದು, ಅಲ್ಲಿ ಹವಾಮಾನ ವೈಪರಿತ್ಯ ಹಾಗೂ ಟಿ ಸೊಳ್ಳೆ ಕಾಟ ಅಲ್ಪಮಟ್ಟಿಗೆ ಕಡಿಮೆ. ಕರಾವಳಿಯಲ್ಲಿ ಮಾತ್ರ ಈ ಬಾರಿ ಸೊಳ್ಳೆಕಾಟ ಹಾಗೂ ಸಮ್ಮಿಶ್ರ ಹವಾಮಾನ ಏಕಕಾಲದಲ್ಲಿ ಮೂಡಿದ ಕಾರಣ ಸಮಸ್ಯೆಯಾಗಿದೆ. ಇದರಿಂದ ಇಡೀ ರಾಜ್ಯದ ಒಟ್ಟಾರೆ ಉತ್ಪಾದನೆ ಮೇಲೆ ಪರಿಣಾಮ ಬೀರುತ್ತದೆ ಎಂದು ಪುತ್ತೂರಿನ ರಾಷ್ಟ್ರೀಯ ಗೇರು ಸಂಶೋಧನಾ ನಿರ್ದೇಶನಾಲಯದದ ವಿಜ್ಞಾನಿಗಳ ಅಭಿಪ್ರಾಯ.

    ತೊಂದರೆಗೊಳಗಾದ ಗೇರು ತಳಿ: ಗೇರು ತಳಿಗಳಾದ ವೆಂಗುರ್ಲ-4, ವೆಂಗುರ್ಲ-3, ಉಳ್ಳಾಲ-2, ಉಳ್ಳಾಲ-3, ಸೆಲೆಕ್ಷನ್ – 2 ಮತ್ತು ವಿಆರ್‌ಐ-3 ಮುಂತಾದ ತಳಿಗಳು ಕರಾವಳಿಯಲ್ಲಿಯಲ್ಲಿ ಯಥೇಚ್ಛವಾಗಿ ಬೆಳೆಯಲಾಗಿದ್ದು, ಪೂರಕ ವಾತಾವರಣದಿಂದ ಈಬಾರಿ ವೇಗವಾಗಿ ಹೂ ಬಿಟ್ಟಿದ್ದು, ಪರಾಗಸ್ಪರ್ಶಕ್ಕೆ ತೊಂದರೆಯಾಗಿದೆ. ಈ ಪೈಕಿ ಎಲ್ಲದಕ್ಕಿಂತ ಮೊದಲು ಹೂ ಬಿಡುವ ಸೆಲೆಕ್ಷನ್-2 ತಳಿಯ ಹೂ. ಸಂಪೂರ್ಣ ನಾಶವಾಗಿದೆ. ಇತ್ತೀಚಿನ ಆವಿಷ್ಕಾರವಾದ ಎಚ್-130 ತಳಿಯಲ್ಲಿ ದೊಡ್ಡ ಗಾತ್ರದ ಗೇರು ಉತ್ಪತ್ತಿಯಾಗುತ್ತಿದ್ದು, ಯಾವುದೇ ಸಮಸ್ಯೆ ಕಂಡುಬಂದಿಲ್ಲ. ಮಡ್ಕತ್ತರ-2, ಉಳ್ಳಾಲ-1 ಎಚ್-130 ತಳಿಗಳಿಗೆ ಈಬಾರಿ ಟಿ ಸೊಳ್ಳೆ ಕಾಟ ಎದುರಾಗಿಲ್ಲ.

    ೆಬ್ರವರಿಯಲ್ಲಿ ಧಾರಣೆ ನಿಗದಿ: ಕರ್ನಾಟಕ ರಾಜ್ಯದಲ್ಲಿ ಒಟ್ಟು 1.3 ಲಕ್ಷ ಟನ್ ಹೆಕ್ಟೇರ್ ವಿಸ್ತೀರ್ಣದಲ್ಲಿ ಗೇರು ಬೆಳೆಯಲಾಗುತ್ತಿದ್ದು, ಕಳೆದ ಸಾಲಿನಲ್ಲಿ 89,000 ಟನ್ ಗೇರು ಬೆಳೆಯಲಾಗಿದೆ. ಇಲ್ಲಿ ಒಂದು ಹೆಕ್ಟೇರಿಗೆ ಸರಾಸರಿ 672 ಕೆ.ಜಿ. ಗೇರು ಬೆಳೆಯಲಾಗುತ್ತಿದೆ ಎಂದು ಅಂಕಿ ಅಂಶಗಳು ಹೇಳುತ್ತಿವೆ. ಗಿಡವೊಂದರಲ್ಲಿ ಮೊದಲ ವರ್ಷ ಅರ್ಧ ಕೆ.ಜಿ. ಬೆಳೆ ಪಡೆಯಬಹುದಾಗಿದ್ದು, 10 ವರ್ಷಗಳ ನಂತರ 15ರಿಂದ 18 ಕೆ.ಜಿ.ವರೆಗೆ ಸಲು ಪಡೆಯಲು ಸಾಧ್ಯವಿದೆ. ಈ ವರ್ಷ ಗೇರು ಬೀಜಕ್ಕೆ ಅಧಿಕೃತ ದರ ಇನ್ನೂ ನಿಗದಿಯಾಗಿಲ್ಲ. ಹಿಂದಿನ ವರ್ಷದ ಗೇರು ಬೀಜವನ್ನು 80ರಿಂದ 100 ರೂ. ಧಾರಣೆಗೆ ಖರೀದಿಸಲಾಗುತ್ತಿದೆ. ೆಬ್ರವರಿಯಲ್ಲಿ ಈ ವರ್ಷದ ಧಾರಣೆ ನಿಗದಿಯಾಗಲಿದ್ದು, ಉತ್ತಮ ಧಾರಣೆ ನಿರೀಕ್ಷಿಸಲಾಗಿದೆ ಎಂದು ಎಂದು ಪುತ್ತೂರಿನ ರಾಷ್ಟ್ರೀಯ ಗೇರು ಸಂಶೋಧನಾ ನಿರ್ದೇಶನಾಲಯದ ಪ್ರಧಾನ ವಿಜ್ಞಾನಿ ಡಾ.ಮೋಹನ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts