More

    ಈ ಉಂಗುರ ಧರಿಸಿದ್ರೆ ನಿಮ್ಮ ಹತ್ತಿರ ಕ್ರಿಮಿಕೀಟ ಸುಳಿಯಲ್ಲ..!

    ನವದೆಹಲಿ: ‘ನಂಬಿದ್ರೆ ನಂಬಿ, ಬಿಟ್ರೆ ಬಿಡಿ, ಈ ಉಂಗುರ ಧರಿಸಿದ್ರೆ ನಿಮ್ಮ ಹತ್ತಿರ ಯಾವುದೇ ಕ್ರಿಮಿ ಕೀಟ ಸುಳಿಯಲ್ಲ!

    ಹೌದು! ಮಾರ್ಟಿನ್ ಲೂಥರ್ ವಿಶ್ವವಿದ್ಯಾಲಯದ ಹಾಲೆ-ವಿಟ್ಟನ್‌ಬರ್ಗ್ (MLU) ವಿಜ್ಞಾನಿಗಳು ಹೊಸ ರೀತಿಯ ಕೀಟ ಪ್ರತಿರೋಧಕವನ್ನು ಕಂಡುಹಿಡಿದಿದ್ದಾರೆ. ಈ ಉಂಗುರ ಧರಿಸಿದರೆ ದೀರ್ಘಕಾಲದವರೆಗೆ ಸೊಳ್ಳೆಗಳನ್ನು ನಮ್ಮಿಂದ ದೂರ ಇಡಬಹುದು. ಈ ತಂಡ, ತಮ್ಮ ಸಂಶೋಧನೆಯನ್ನು ಇಂಟರ್ನ್ಯಾಷನಲ್ ಜರ್ನಲ್ ಆಫ್ ಫಾರ್ಮಾಸ್ಯೂಟಿಕ್ಸ್​ನಲ್ಲಿ ಪ್ರಕಟಿಸಿದೆ.

    ‘IR3535 ಎನ್ನುವ ಕಂಪೌಂಡ್​ ಹೊಂದಿರುವ ಸೊಳ್ಳೆ ಸ್ಪ್ರೇಗಳು ಚರ್ಮಕ್ಕೆ ಯಾವುದೇ ರೀತಿಯ ಹಾನಿ ಮಾಡುವುದಿಲ್ಲ. ಇದನ್ನು ಅನೇಕ ವರ್ಷಗಳಿಂದ ಪ್ರಪಂಚದಾದ್ಯಂತ ಬಳಸಲಾಗುತ್ತಿದೆ. ಅದಕ್ಕಾಗಿಯೇ ನಾವು ನಮ್ಮ ಪ್ರಯೋಗಗಳಿಗೆ ಇದನ್ನು ಬಳಸುತ್ತಿದ್ದೇವೆ’ ಎಂದು MLU ಪ್ರೊಫೆಸರ್ ರೆನೆ ಆಂಡ್ರೊಸ್ಚ್ ಮಾಹಿತಿ ನೀಡಿದ್ದಾರೆ.

    ಇದು ಸಾಮಾನ್ಯವಾಗಿ ಸ್ಪ್ರೇ ಅಥವಾ ಲೋಷನ್ ರೂಪದಲ್ಲಿ ಬರುತ್ತದೆ ಮತ್ತು ಹಲವಾರು ಗಂಟೆಗಳ ಕಾಲ ರಕ್ಷಣೆ ನೀಡುತ್ತದೆ. ಆದಾಗ್ಯೂ, ಆಂಡ್ರೊಸ್ಚ್ ಮತ್ತು ಅವರ ಸಹೋದ್ಯೋಗಿಗಳು ಹೆಚ್ಚು ಸಮಯದವರೆಗೆ ಸೊಳ್ಳೆಗಳಿಂದ ಪಾರಾಗುವ ವಿಧಾನಗಳಿಗಾಗಿ ಹುಡುಕುತ್ತಿದ್ದಾರೆ. ಅಂತಹ ಪ್ರಯತ್ನದಲ್ಲೇ ಈ ಸಂಶೋಧನೆ ನಡೆದಿರುವುದು. ಈಗ ಸೊಳ್ಳೆ ನಿರೋಧಕ, ಧರಿಸಬಹುದಾದ ಉಂಗುರ ಅಥವಾ ಬ್ರೇಸ್ಲೆಟ್​ನ ರೂಪ ಪಡೆದುಕೊಂಡಿದೆ.

    ‘ವಿಶೇಷವಾದ 3D ಮುದ್ರಣ ತಂತ್ರಜ್ಞಾನವನ್ನು ಬಳಸಿಕೊಂಡು ಕೀಟ ನಿರೋಧಕವನ್ನು ಪಾಲಿಮರ್‌ಗೆ ಎಚ್ಚರಿಕೆಯಿಂದ ಸೇರಿಸಲಾಗುತ್ತೆ. ಈ ಉಂಗುರದಲ್ಲಿ ಸೇರಿರುವ ಕೀಟ ನಿವಾರಕ ನಿರಂತರವಾಗಿ ಆವಿಯಾಗುತ್ತಾ ಇರುತ್ತದೆ. ಇದರಿಂದಾಗಿ ಕೀಟಗಳು ಹತ್ತಿರ ಬರುವುದಿಲ್ಲ’ ಎಂದು MLU ನಲ್ಲಿ ಡಾಕ್ಟರೇಟ್ ಅಭ್ಯರ್ಥಿ ಹಾಗೂ ಅಧ್ಯಯನದ ಪ್ರಮುಖ ಸಂಶೋಧಕ ಫಾನ್ಫಾನ್ ಡು ವಿವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts