More

    ನೀರಾವರಿಗೆ ಕಾಂಗ್ರೆಸ್ ಸರ್ಕಾರದ ಕೊಡುಗೆ ಅಪಾರ

    ಮೋರಟಗಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನೀರಾವರಿ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಲಾಗಿದ್ದು, ಹೀಗಾಗಿ ಉತ್ತರ ಕರ್ನಾಟಕದ ಎಲ್ಲ ಭಾಗದಲ್ಲಿ ಸಂಪೂರ್ಣ ನೀರಾವರಿಯಾಗಿದೆ. ಆದಾಗ್ಯೂ ಮತದಾರರು ಅಧಿಕಾರ ನೀಡದಿರುವುದು ಖೇದಕರ ಸಂಗತಿ ಎಂದು ಮಾಜಿ ಸಚಿವ ಡಾ. ಎಂ.ಬಿ. ಪಾಟೀಲ ಹೇಳಿದರು.

    ಸಮೀಪದ ಯಾತನೂರ ಗ್ರಾಮದಲ್ಲಿ ಪ್ರಗತಿಪರ ರೈತ ಮೊಹಮ್ಮದಲಿ ರಾಯಚೂರ ಅವರ ತೋಟದಲ್ಲಿ ನೇತ್ರ ಕ್ರಾಪ್ ಸೈನ್ಸಸ್ ಐರಸ್ ಕಂಪನಿ ಭಾನುವಾರ ಹಮ್ಮಿಕೊಂಡಿದ್ದ ಐರಸ್ ಮೆಣಸಿನಕಾಯಿ ಬೆಳೆ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

    ಕೃಷ್ಣಾ ನದಿಯಿಂದ ನೀರು ಹರಿಸಿ 150 ಕೆರೆಗಳನ್ನು ತುಂಬುವ ಕಾರ್ಯ ಕೈಗೊಳ್ಳುವ ಜತೆಗೆ ವಿಜಯಪುರ ಜಿಲ್ಲೆಯಲ್ಲಿ 200 ಹಳ್ಳಿಗಳ ಚೆಕ್‌ಡ್ಯಾಮ್ ಕಟ್ಟಿ ಆ ಮೂಲಕ ಹೊಲಗದ್ದೆಗಳಿಗೆ ನೀರಾವರಿ ಅವಕಾಶ ಕಲ್ಪಿಸಿಕೊಡುತ್ತೇನೆ ಎಂದಾಗ ವಿರೋಧ ಪಕ್ಷದವರು ಅಪಹಾಸ್ಯ ಮಾಡಿದ್ದರು. ಅದನ್ನು ಸವಾಲಾಗಿ ತೆಗೆದುಕೊಂಡು ಈ ಭಾಗದಲ್ಲಿ ಸಂಪೂರ್ಣ ನೀರಾವರಿ ಕಲ್ಪಿಸಿಕೊಟ್ಟಿದ್ದೇನೆ. ರಾಜ್ಯಕ್ಕೆ ಅನ್ನ ನೀಡುವ ರೈತರು ಯಾವುದೇ ಪಕ್ಷಕ್ಕೆ ಸೀಮಿತರಲ್ಲ. ಅವರಿಗೆ ಯಾವುದೇ ಪಕ್ಷಪಾತ ಇಲ್ಲ. ಅವರನ್ನು ರಕ್ಷಣೆ ಮಾಡುವುದು ಆದ್ಯ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಬೆಂಗಳೂರು ಉದ್ಯಮಿಗಳು ರೈತರಿಗೆ ಅನುಕೂಲವಾಗಲೆಂದು ಉತ್ತಮ ಇಳುವರಿ ಬರುವಂತಹ ಮೆಣಸಿನ ಕಾಯಿ ಬೀಜ ವಿತರಣೆ ಘಟಕ ಸ್ಥಾಪಿಸಿದ್ದು, ಈ ಭಾಗದ ರೈತರು ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

    ಜೇರಟಗಿ ವಿರಕ್ತಮಠದ ಮಹಾಂತ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಬಾಗಲಕೋಟೆ ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಎಂ. ಇಂದ್ರೇಶ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಸದಸ್ಯ ನರಸಿಂಗಪ್ರಸಾದ, ಸೆಲ್ವಿರಾಜ್ ಎಚ್. ಮಾತನಾಡಿದರು. ವಿಜಯಪುರದ ಜಂಟಿ ಕೃಷಿ ನಿರ್ದೇಶಕ ಶಿವಕುಮಾರ, ನೇತ್ರ ಕ್ರಾಪ್ ಸೈನ್ಸಸ್ ಐರಸ್ ಕಂಪನಿ ನಿರ್ದೇಶಕ ಸಾತವೀರ ರೊಟ್ಟಿ, ಮಹಿಬೂಬ್‌ಸಾಬ ಕಣ್ಣಿ, ರಾಮು ಮರಾಠೆ, ನಾಗು ಕೆರಿಗೊಂಡ, ಸಾವಿತ್ರಿ ಆನೂರ, ಆಲಮೇಲ ಕೃಷಿ ಇಲಾಖೆ ಸಹಾಯಕ ಅಧಿಕಾರಿ ಯಾಸ್ಮಿನ್ ಮೊಕಾಸಿ, ಸಂತೋಷ ಸೋಮಜ್ಯಾಳ, ಡಾ. ಮಹಾಂತೇಶ ಬಿರಾದಾರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts