More

    ನಟಿಯ ನಗ್ನ ಫೋಟೋ ವೈರಲ್ ಮಾಡಿ ಅತ್ಯಾಚಾರ ಬೆದರಿಕೆ ಹಾಕಿದ ದುಷ್ಕರ್ಮಿ

    ಮುಂಬೈ: ನಟಿಯೊಬ್ಬರ ಮಾರ್ಫ್ ಮಾಡಿದ ಫೋಟೋ ವೈರಲ್ ಮಾಡಿ, ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿರುವ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ. ಮುಂಬೈನ ವರ್ಸೋವಾ ಪೊಲೀಸರು ಈ ಪ್ರಕರಣದಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿದ್ದಾರೆ. 37 ವರ್ಷದ ನಟಿಯ ಮಾರ್ಫ್ ಮಾಡಿದ ನಗ್ನ ಫೋಟೋವನ್ನು ವೈರಲ್ ಮಾಡಿ ಅತ್ಯಾಚಾರ ಬೆದರಿಕೆ ಹಾಕಿದ್ದಕ್ಕಾಗಿ ಇದೀಗ ಎಫ್‌ಐಆರ್ ದಾಖಲಿಸಲಾಗಿದೆ.

    ಡಿಸೆಂಬರ್ 27 ರಂದು ಸಂಜೆ ಕೆಫೆ ಶಾಪ್​​​​​ನಲ್ಲಿದ್ದಾಗ ವ್ಯಕ್ತಿಯೋರ್ವ ತನ್ನ (ನಟಿಯ) ನಗ್ನ ಫೋಟೋವನ್ನು ಮಾರ್ಫ್ ಮಾಡಿ ಕಳುಹಿಸಿದ್ದ ಎಂದು ನಟಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ತಾಯಿ ಮತ್ತು ತಂದೆಗೂ ಫೋಟೋ ರವಾನೆ
    ಇದರ ನಂತರ ಜನವರಿ 7 ರಂದು, ನಟಿ ಆನ್‌ಲೈನ್ ಮಾಧ್ಯಮದ ಮೂಲಕ ಸೈಬರ್ ಸೆಲ್‌ಗೆ ಈ ಬಗ್ಗೆ ದೂರು ನೀಡಿದ್ದರು. ಅಪರಿಚಿತ ವ್ಯಕ್ತಿ ತನ್ನ ತಾಯಿಗೂ ಇದೇ ರೀತಿಯ ಮಾರ್ಫ್ ಮಾಡಿದ ಅಶ್ಲೀಲ ಫೋಟೋವನ್ನು ವಾಟ್ಸಾಪ್‌ನಲ್ಲಿ ಕಳುಹಿಸಿದ್ದಾನೆ ಎಂದು ನಟಿ ದೂರಿನಲ್ಲಿ ತಿಳಿಸಿದ್ದಾರೆ. ನಂತರ ನಟಿ ತನ್ನ ತಾಯಿಗೆ ಈ ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಮಾಡಲು ಕೇಳಿದ್ದಾರೆ. ಆದರೆ ಆರೋಪಿಯು ಇಲ್ಲಿಗೆ ಸುಮ್ಮನಾಗಲಿಲ್ಲ. ತನ್ನ ಮಾರ್ಫ್ ಮಾಡಿದ ನಗ್ನ ಫೋಟೋವನ್ನು ತಂದೆಗೆ ವಾಟ್ಸಾಪ್‌ನಲ್ಲಿ ಕಳುಹಿಸಿದ್ದಾನೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಇದಾದ ಬಳಿಕ ನಟಿಯ ಹಲವು ಸ್ನೇಹಿತರಿಗೆ ಇದೇ ರೀತಿಯ ಸಂದೇಶಗಳನ್ನು ಕಳುಹಿಸಿದ್ದಲ್ಲದೆ, ಕೊಲೆ ಬೆದರಿಕೆಯನ್ನೂ ಹಾಕಿದ್ದ.

    ವರ್ಸೋವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
    ನಗ್ನ ಫೋಟೋವನ್ನು ತನ್ನ ಸ್ನೇಹಿತರೊಬ್ಬರಿಗೆ ಕಳುಹಿಸಿ ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ನಟಿ ಹೇಳಿಕೊಂಡಿದ್ದಾರೆ. ಇದೆಲ್ಲದರ ನಂತರ ಮಹಿಳೆ ಮುಂಬೈನ ವರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಸ್ತುತ, ಮಹಿಳೆಯ ಹೇಳಿಕೆಯನ್ನು ಆಧರಿಸಿ, ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 506 ಮತ್ತು ಸೆಕ್ಷನ್ 67 ಮತ್ತು 67 ಎ ಅಡಿಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

    ಈ ಕಾರಣಕ್ಕಾಗಿ ಯೂಟ್ಯೂಬ್‌ಗೆ ನೋಟಿಸ್ ನೀಡಿದ ಎನ್​​ಸಿಪಿಸಿಆರ್​​​; ಎಫ್‌ಐಆರ್ ಕೂಡ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts