More

    ಹಣ್ಣು, ತರಕಾರಿ ಬೆಳೆಗಾರರಿಗೆ ತಲಾ 15 ಸಾವಿರ ರೂ.; ಮತ್ತೆ 162 ಕೋಟಿ ಪ್ಯಾಕೇಜ್ ನೀಡಿದ ಬಿಎಸ್‌ವೈ

    ಬೆಂಗಳೂರು: ರಾಜ್ಯದ ತರಕಾರಿ ಬೆಳೆಗಾರರು, ಹಣ್ಣು ಬೆಳೆಗಾರರು ಹಾಗೂ ಕೈಮಗ್ಗ ಕಾರ್ಮಿಕರಿಗಾಗಿ ಒಟ್ಟು 162 ಕೋಟಿ ರೂ. ಪ್ಯಾಕೇಜನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಗುರುವಾರ ಪ್ರಕಟಿಸಿದ್ದಾರೆ.
    ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಪ್ರತಿ ಹೆಕ್ಟೇರ್‌ಗೆ 15 ಸಾವಿರ ರೂ.ಗಳಂತೆ ಒಟ್ಟು 137 ಕೋಟಿ ರೂ. ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಹತ್ತು ರೀತಿಯ ತರಕಾರಿಗಳು ಮತ್ತು ಏಳು ರೀತಿಯ ಹಣ್ಣುಗಳಿಗೆ ಈ ಪ್ಯಾಕೇಜ್ ಅನ್ವಯವಾಗಲಿದೆ.

    ಟೇಬಲ್ ದ್ರಾಕ್ಷಿ, ಪಪ್ಪಾಯ, ಅಂಜೂರ, ಬಾಳೆ, ಅನಾನಸ್, ಕರ್ಜೂರಾ ಅಥವಾ ಕಲ್ಲಂಗಡಿ, ಬೋರೆ ಹಣ್ಣು ಅಥವಾ ಬೆಣ್ಣೆ ಹಣ್ಣು ಈ ಪ್ಯಾಕೇಜ್ ಪಡೆಯಲು ಅರ್ಹವಾಗಿರುವ ಹಣ್ಣಿನ ಬೆಳೆಗಳಾಗಿವೆ.

    ಸಿಹಿ ಕುಂಬಳಕಾಯಿ, ಬೂದು ಕುಂಬಳಕಾಯಿ, ಟೊಮೆಟೊ, ಹಸಿರು ಮೆಣಸಿನಕಾಯಿ, ಹೂ ಕೋಸು, ಎಲೆ ಕೋಸು, ಕ್ಯಾರಟ್, ಈರುಳ್ಳಿ, ದಪ್ಪ ಮೆಣಸಿನಕಾಯಿ, ಸೊಪ್ಪುಗಳು, ಹೀರೇಕಾಯಿ, ತೊಂಡೆ ಕಾಯಿ ಇವು ಈ ಪ್ಯಾಕೇಜ್‌ನಡಿ ಬರುವ ತರಕಾರಿ ಬೆಳೆಗಳಾಗಿವೆ.

    ಇದನ್ನೂ ಓದಿ: ವಿಶೇಷ ಆರ್ಥಿಕ ಪ್ಯಾಕೇಜ್​ನ 2ನೇ ದಿನದ ಘೋಷಣೆಗಳ ಬಗ್ಗೆ ಪಿಎಂ ಮೋದಿ ಹೀಗೆ ಹೇಳ್ತಿದ್ದಾರೆ…

    ಸದ್ಯ 50,083 ಹೆಕ್ಟೇರ್‌ಗಳಲ್ಲಿ ಬೆಳೆದ ತರಕಾರಿ ಹಾಗೂ 41,054 ಹೆಕ್ಟೇರ್‌ಗಳಲ್ಲಿ ಬೆಳೆದ ಹಣ್ಣು ಬೆಳೆಗಾಗರಿಗೆ ಪ್ರತಿ ಹೆಕ್ಟೇರ್‌ಗೆ 15 ಸಾವಿರ ರೂ. ಪರಿಹಾರ ಸಿಗಲಿದೆ.

    ಇದಲ್ಲದೆ ವಿದ್ಯುಚ್ಚಾಲಿತ ಮಗ್ಗ, ಹ್ಯಾಂಡ್‌ಲೂಮ್ ಘಟಕಗಳ ಕಾರ್ಮಿಕರ ಸಹಾಯಕ್ಕೂ ರಾಜ್ಯ ಸರ್ಕಾರ ಮುಂದಾಗಿದೆ. ಈ ಘಟಕಗಳಲ್ಲಿ ಸುಮಾರು 1.62 ಲಕ್ಷ ಕಾರ್ಮಿಕರಿದ್ದು, ಅವರಿಗೆಲ್ಲ ಇದರಿಂದ ಸಹಾಯವಾಗಲಿದೆ. ಪ್ರತಿ ಕಾರ್ಮಿಕರಿಗೆ 2 ಸಾವಿರ ರೂ.ನಂತೆ ಒಟ್ಟು 25 ಕೋಟಿ ರೂ. ನೀಡಲು ನಿರ್ಧರಿಸಲಾಗಿದೆ.

    ಈ ಹಿಂದೆ ರಾಜ್ಯ ಸರ್ಕಾರ, 11687 ಹೆಕ್ಟೇರ್ ವಿಸ್ತೀರ್ಣದಲ್ಲಿ ಹೂವು ಬೆಳೆದ ರೈತರಿಗೆ ತಲಾ ಒಂದು ಹೆಕ್ಟೇರ್‌ಗೆ 25 ಸಾವಿರ ರೂ.ನಂತೆ ಪರಿಹಾರ ಹಣ ಘೋಷಿಸಿತ್ತು. ಅದಕ್ಕಾಗಿ 1,610 ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡಿತ್ತು. ಇದರ ಬೆನ್ನಲ್ಲೇ ಈಗ ತರಕಾರಿ ಹಾಗೂ ಹಣ್ಣಿನ ಬೆಳೆಗೂ ಪರಿಹಾರ ಘೋಷಿಸಿದೆ. ಇದರಿಂದಾಗಿ ಪ್ಯಾಕೇಜ್ನ ಒಟ್ಟು ಮೊತ್ತ 1,772 ಕೋಟಿ ರೂ.ಗೆ ಏರಿದಂತಾಗಿದೆ.

    ಇದನ್ನೂ ಓದಿ: ರೈತರು, ಕಾರ್ಮಿಕರಿಗೆ ಕೇಂದ್ರದಿಂದ ಎರಡನೇ ದಿನದ ಕೊಡುಗೆ: ಯಡಿಯೂರಪ್ಪ ಏನಂತಾರೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts