More

    ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ 1440 ಮರಗಳ ಬಲಿ, ಅರಣ್ಯ ಇಲಾಖೆಯಿಂದ ಅನುಮತಿ!

    ಗಜೇಂದ್ರಗಡ (ಗದಗ): ರಾಷ್ಟ್ರೀಯ ಹೆದ್ದಾರಿ 367ರ ನಿರ್ಮಾಣಕ್ಕಾಗಿ ತಾಲೂಕಿನ ಬೇವಿನಕಟ್ಟಿ ಕ್ರಾಸ್‌ನಿಂದ ಸರ್ಜಾಪುರದವರೆಗೆ ಒಟ್ಟು 1440 ವಿವಿಧ ಜಾತಿಯ ಮರಗಳನ್ನು ಬಲಿ ಕೊಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿ ನಿರ್ಣಯಿಸಿದೆ.

    ಕೊಪ್ಪಳ ಜಿಲ್ಲೆಯ ಬಾನಾಪೂರದಿಂದ ಬಾಗಲಕೋಟೆ ಜಿಲ್ಲೆಯ ಗದ್ದನಕೇರಿ ಕ್ರಾಸ್‌ವರೆಗೂ ರಾಷ್ಟ್ರೀಯ ಹೆದ್ದಾರಿ 367ರ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ತಾಲೂಕಿನ ರಾಂಪೂರ ಹತ್ತಿರ ನಿರ್ಮಾಣವಾಗುತ್ತಿರುವ ಹೆದ್ದಾರಿ ಕಾಮಗಾರಿಗೆ 52ಕ್ಕೂ ಹೆಚ್ಚು ದೊಡ್ಡ ದೊಡ್ಡ ಮರಗಳನ್ನು ಕತ್ತರಿಸಲು ಅರಣ್ಯ ಇಲಾಖೆ ನಿರ್ಧರಿಸಿತ್ತು. ಆಗ ಶಾಸಕ ಕಳಕಪ್ಪ ಬಂಡಿ ಕಾಳಜಿ ವಹಿಸಿ ಅರಣ್ಯ ಇಲಾಖೆಯಿಂದ ಗಜೇಂದ್ರಗಡ ಕೆರೆಗೆ ಸ್ಥಳಾಂತರಿಸಿ ಮತ್ತೆ ನಳನಳಿಸುವಂತೆ ಮಾಡಿದ್ದಾರೆ.

    ರಸ್ತೆ ಅಭಿವೃದ್ಧಿ ದೃಷ್ಟಿಕೋನದಿಂದ ಮಾತ್ರ ಮರಗಳನ್ನು ಕಡಿಯುತ್ತಿದ್ದೇವೆ. ಒಂದು ಮರ ಕಡಿದರೆ 10 ಗಿಡ ನೆಡಲು ಅರಣ್ಯ ಇಲಾಖೆಗೆ ನಮ್ಮ ಪ್ರಾಧಿಕಾರದ ವತಿಯಿಂದ ಹಣ ತುಂಬುತ್ತೇವೆ.

    | ಗಿರೀಶ ಮುಂಡದ, ಪ್ರಭಾರಿ ಕಾರ್ಯನಿರ್ವಾಹಕ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

    ಆದರೆ, ಈಗ ಅದೇ ಮುಂದುವರಿದ ಹೆದ್ದಾರಿ ನಿರ್ಮಾಣಕ್ಕಾಗಿ ಬೇವಿನಕಟ್ಟಿ ಕ್ರಾಸ್‌ನಿಂದ ಸರ್ಜಾಪುರದವರೆಗೂ ರಸ್ತೆ ಪಕ್ಕದ 10 ಮೀ. ಒಳಗಿರುವ 1440 ನಾನಾ ಜಾತಿಯ ಮರಗಳನ್ನು ಕಡಿಯಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಣಯಿಸಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ತಾಲೂಕಿನ ಮುಶಿಗೇರಿಯಲ್ಲಿ ಸಭೆ ಕರೆದಾಗ ಯಾರೊಬ್ಬರೂ ತಕರಾರು ಎತ್ತಲಿಲ್ಲ. ಹೀಗಾಗಿ ಮರಗಳನ್ನು ಬಲಿ ಕೊಡಲು ಅರಣ್ಯ ಇಲಾಖೆ ಅನುಮತಿ ನೀಡಿದೆ.

    ಇಷ್ಟಪಟ್ಟು ಪುರುಷನ ಜತೆಗಿದ್ದು, ಸಂಬಂಧ ಕೆಟ್ಟಾಗ ರೇಪ್​ ಆಯ್ತು ಅನ್ನೋ ಹಾಗಿಲ್ಲ: ಸುಪ್ರೀಂ ಕೋರ್ಟ್​

    ತುಂಡಾದ ವಿದ್ಯುತ್ ತಂತಿ ತುಳಿದು ರೈತರಿಬ್ಬರ ದುರ್ಮರಣ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts