More

    ಚುನಾವಣೆ ಗೆದ್ದ 24 ತಾಸಲ್ಲಿ ಲಕ್ಷಗಟ್ಟಲೆ ಜನರಿಂದ ಎಎಪಿ ಸೇರ್ಪಡೆ: ಮಿಸ್​ ಕಾಲ್​ ಕೊಡಿ ಎಎಪಿ ಸೇರಿ ಎಂದಿದ್ದ ಪಕ್ಷ

    ನವದೆಹಲಿ: ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಬೆನ್ನಲ್ಲೇ ಎಎಪಿಯು ಸದಸ್ಯತ್ವ ಅಭಿಯಾನವನ್ನು ಜೋರಾಗಿ ನಡೆಸಲಾರಂಭಿಸಿದೆ. ರಾಷ್ಟ್ರ ನಿರ್ಮಾಣಕ್ಕಾಗಿ ಮಿಸ್​ ಕಾಲ್​ ಕೊಡಿ, ಎಎಪಿ ಸದಸ್ಯರಾಗಿ ಎಂದು ಮೊಬೈಲ್​ ನಂಬರ್​ ಒಂದನ್ನು ನೀಡಲಾಗಿದ್ದು, ಚುನಾವಣೆಯ ಫಲಿತಾಂಶ ಹೊರಬಿದ್ದ ನಂತರ ಕೇವಲ 24 ತಾಸುಗಳಲ್ಲಿ 11 ಲಕ್ಷ ಜನರು ಎಎಪಿ ಸೇರಿದ್ದಾರೆ ಎಂದು ಪಕ್ಷವು ಹೇಳಿಕೊಂಡಿದೆ.

    ದೆಹಲಿಯ 70 ಕ್ಷೇತ್ರಗಳಿಗೆ ಫೆಬ್ರವರಿ 8ರಂದು ವಿಧಾನಸಭಾ ಚುನಾವಣೆ ನಡೆದಿದ್ದು ಫೆ.11ರಂದು ಫಲಿತಾಂಶ ಹೊರಬಿದ್ದಿದೆ. 62 ಸ್ಥಾನಗಳಲ್ಲಿ ಜಯಗೊಳಿಸುವ ಮೂಲಕ ಎಎಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದೆ. ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ನಗರದ ಹಲವು ಕಡೆಗಳಲ್ಲಿ ರಾಷ್ಟ್ರ ನಿರ್ಮಾಣಕ್ಕಾಗಿ ಮಿಸ್​ ಕಾಲ್​ ಕೊಡಿ ಎಎಪಿ ಸೇರಿಕೊಳ್ಳಿ ಎಂಬ ಪೋಸ್ಟರ್​ಗಳು ಕಾಣಿಸಿಕೊಂಡಿವೆ. ಫಲಿತಾಂಶ ಹೊರಬಿದ್ದ 24 ತಾಸುಗಳಲ್ಲಿ ಒಟ್ಟು 11 ಲಕ್ಷ ಜನರು ಮಿಸ್​ ಕಾಲ್​ ನೀಡುವುದರ ಮೂಲಕ ಎಎಪಿ ಸೇರಿಕೊಂಡಿದ್ದಾರೆ ಎಂದು ಎಎಪಿ ಟ್ವೀಟ್​ ಮಾಡಿದೆ.

    ಎರಡನೇ ಬಾರಿ ದೆಹಲಿಯಲ್ಲಿ ಎಎಪಿಯು ಜಯಭೇರಿ ಬಾರಿಸಿದ್ದು, ಭಾನುವಾರದಂದು ಪಕ್ಷದ ಅಧ್ಯಕ್ಷ ಅರವಿಂದ್​ ಕೇಜ್ರಿವಾಲ್​ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರಿಸಲಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts