More

    ಹೆಚ್ಚು ಪ್ರಯಾಣಿಕರ ಸಂಚಾರ, 2ನೇ ಸ್ಥಾನಕ್ಕೆ ಏರಿದ ಸಾಂಬ್ರಾ ಏರಫೋರ್ಟ್

    ಬೆಳಗಾವಿ: ಲಾಕ್‌ಡೌನ್ ಸಡಿಲಿಕೆ ನಂತರ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿಮಾನಗಳ ಹಾರಾಟ ನಡೆದಿದೆ.
    ರಾಜ್ಯದಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಸಂಚರಿಸಿದ ಎರಡನೇ ವಿಮಾನ ನಿಲ್ದಾಣವಾಗಿ ಸಾರ್ವಜನಿಕರ ಗಮನ ಸೆಳೆದಿದೆ.

    ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಬೆಂಗಳೂರು ಪ್ರಥಮ ಸ್ಥಾನ ಕಾಯ್ದುಕೊಂಡಿದ್ದು, ಬೆಳಗಾವಿಯ ಸಾಂಬ್ರಾ ಏರ್‌ಫೋರ್ಟ್ ಎರಡನೇ ಸ್ಥಾನಕ್ಕೇರಿದೆ. ಮಂಗಳೂರು, ಕಲಬುರ್ಗಿ ಹಾಗೂ ಮೈಸೂರು ವಿಮಾನ ನಿಲ್ದಾಣಗಳು ಟಾಪ್‌ಫೈವ್ ಪಟ್ಟಿಯಲ್ಲಿ ಸ್ಥಾನಗಳಿಸಿವೆ ಎಂದು ಬೆಳಗಾವಿ ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    391 ವಿಮಾನ ಹಾರಾಟ: ಜೂನ್ ತಿಂಗಳಲ್ಲಿ ಬೆಳಗಾವಿಯಿಂದ 391 ವಿಮಾನ ಹಾರಾಟ ನಡೆಸಿವೆ. ಒಟ್ಟು 10,224 ಜನರು ವಿಮಾನಗಳ ಪ್ರಯಾಣ ನಡೆಸಿದ್ದಾರೆ. ಆ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಹಿಂದಿಕ್ಕಿದೆ. ಸಮೀಪದ ಹುಬ್ಬಳ್ಳಿಯಿಂದ ಕೇವಲ 14 ವಿಮಾನ ಹಾರಾಟ ನಡೆಸಿದ್ದು, 55 ಜನರಷ್ಟೇ ಪ್ರಯಾಣಿಸಿದ್ದಾರೆ. ಮೈಸೂರಿನಿಂದ 330 ವಿಮಾನ ಹಾರಾಟ ನಡೆಸಿದ್ದು, 3,158 ಜನ ಹಾಗೂ ಕಲಬುರ್ಗಿ ವಿಮಾನ ನಿಲ್ದಾಣದಿಂದ 3,606 ಜನ ಪ್ರಯಾಣಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಕರೊನಾ ಸೋಂಕು ನಿಯಂತ್ರಣಕ್ಕಾಗಿ ಲಾಕ್‌ಡೌನ್ ಅವಧಿಯಲ್ಲಿ ಹೇರಿದ್ದ ಪ್ರಯಾಣ ನಿಬರ್ಂಧಗಳಿಂದ ಹೊರ ರಾಜ್ಯಗಳಿಗೆ ಪ್ರಯಾಣ ಬೆಳೆಸುವವರ ಸಂಖ್ಯೆ ಕಡಿಮೆಯಾಗಿತ್ತು. ತುರ್ತು ಕಾರಣಕ್ಕೆಂದು ಸಹಸ್ರಾರು ಜನ ಸಾಂಬ್ರಾದಿಂದ ವಿಶೇಷ ವಿಮಾನಗಳ ಮೂಲಕ ಹೊರ ರಾಜ್ಯಗಳಿಗೆ ಪ್ರಯಾಣ ಬೆಳೆಸಿ, ಲಾಕ್‌ಡೌನ್ ಅವಧಿಯಲ್ಲಿಯೂ ವಿಮಾನಯಾನ ಸೇವೆ ಬಳಸಿಕೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts