More

    ಎತ್ತಿನಹೊಳೆ ಯೋಜನೆಗೆ ಭೂಮಿ ಕೊಟ್ಟರೆ ಹೆಚ್ಚು ಪರಿಹಾರ: ಸಚಿವ ಮಾಧುಸ್ವಾಮಿ

    ತಿಪಟೂರು : ಎತ್ತಿನಹೊಳೆ ಯೋಜನೆಗೆ ಭೂ ಸ್ವಾಧೀನ ಕಷ್ಟವಲ್ಲ. ರೈತರೊಂದಿಗೆ ಚರ್ಚಿಸಿ ಸರ್ವೇ ನಡೆದ ನಂತರ ಜಮೀನನ್ನು ಯೋಜನೆಗೆ ಬರೆದುಕೊಟ್ಟರೆ ನಿರೀಕ್ಷೆಗಿಂತ ಹೆಚ್ಚು ಪರಿಹಾರ ಸಿಗಲಿದೆ. ವಿಳಂಬ ಮಾಡಿದವರಿಗೆ ನೋಂದಣಾಧಿಕಾರಿ ಕಚೇರಿಯಲ್ಲಿ ದಾಖಲಾದ ಮೊತ್ತಕ್ಕನುಗುಣವಾಗಿ ಪರಿಹಾರ ಸಿಗಲಿದೆ. ಆಯ್ಕೆ ನಿಮಗೆ ಬಿಟ್ಟಿದ್ದು ಎಂದು ಜಿಲ್ಲಾ ಉಸ್ತವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

    ತಾಲೂಕಿನ ಕೆವಿಕೆ ಬಳಿ ಉದ್ದೇಶಿತ ಎತ್ತಿನಹೊಳೆ ಕಾಮಗಾರಿಗೆ ಬುಧವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಎತ್ತಿನಹೊಳೆ ನೀರು ಮಂಜೂರಾತಿಗಾಗಿ ಕೆಲ ಸಂಘಟನೆಗಳು ಹೋರಾಟ ಮಾಡುತ್ತಿವೆ. ಆದರೆ ಮೊದಲು ಯೋಜನೆ ನೀರನ್ನು ಜಿಲ್ಲೆಗೆ ತರಲೇಬೇಕೆಂದು ಹೋರಾಟ ಕಟ್ಟಿದ್ದು ನಾನು ಮತ್ತು ತಿಪಟೂರು ಶಾಸಕ ನಾಗೇಶ್. ಹನಿ ನೀರೂ ಲಭ್ಯವಾಗದ ಸ್ಥಿತಿಯಲ್ಲಿದ್ದ ಪರಿಸ್ಥಿತಿಯಲ್ಲಿ ಅಧಿಕಾರಿಗಳು ಮತ್ತು ಮುಖ್ಯಮಂತ್ರಿಗೆ ಮನವರಿಕೆ ಮಾಡಿ ನೀರು ದಕ್ಕಿಸಿಕೊಂಡಿದ್ದೇವೆ. ಯಾರು ಬೇಕಾದರೂ ಮೇಕಪ್ ಮಾಡಿಕೊಂಡು ಮೇಳ ಕಟ್ಟಬಹುದು. ಇದೊಂದು ರೀತಿ ಸೀರೆ ಉಡಿಸಿದವರಿಗಿಂತಾ ಬೊಟ್ಟಿಕ್ಕಿ ಬೇಷ್ ಎನ್ನಿಸಿಕೊಂಡಂತಿದೆ ಎಂದು ವಿರೋಧಿಗಳಿಗೆ ಟಾಂಗ್ ನೀಡಿದರು.

    ಜಿಲ್ಲೆಗೆ ಹೇಮಾವತಿ ನೀರು ಹಂಚಿಕೆಯಲ್ಲಾದ ಅನ್ಯಾಯ ಮತ್ತು ಭದ್ರಾ ಯೋಜನೆಯಲ್ಲಾದ ವಂಚನೆ ಮತ್ತು ತಿಪಟೂರು, ಚಿಕ್ಕನಾಯಕನಹಳ್ಳಿ, ಗುಬ್ಬಿ ತಾಲೂಕುಗಳ ಬರ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಬೆಂಗಳೂರಿನಲ್ಲಿ ವಾರ್ಷಿಕ ಉತ್ಪತ್ತಿಯಾಗುವ 18 ಟಿಎಂಸಿ ಕಲುಷಿತ ನೀರನ್ನು ಶುದ್ಧೀಕರಿಸಿ ಕೋಲಾರ ಭಾಗದ ಕೆರೆಗಳಿಗೆ ಒದಗಿಸುವ ಅವಕಾಶಗಳ ಬಗ್ಗೆ ಜಲಸಂಪನ್ಮೂಲ ಅಧಿಕಾರಿಗಳು ಮತ್ತು ಮುಖ್ಯಮಂತ್ರಿಗೆ ಮನವರಿಕೆ ಮಾಡಿದ ನಂತರ ಕೈ ಚೆಲ್ಲಿದ್ದ ಪ್ರಸ್ತಾವನೆಗೆ ಮರುಜೀವ ಪಡೆಯುವುದರೊಂದಿಗೆ 1.57 ಟಿಎಂಸಿ ನೀರು ಮಂಜೂರಾತಿ ದೊರೆತಿದೆ. ಇದಕ್ಕಾಗಿ 170 ರಿಂದ 200 ಕೋಟಿ ರೂಪಾಯಿ ಡಿಪಿಆರ್ ಸಿದ್ಧವಾಗಿದ್ದು, ಮುಖ್ಯಮಂತ್ರಿ ಅನುಮೋದನೆ ನೀಡುವ ಭರವಸೆ ಇದೆ ಎಂದರು. ರಾಜ್ಯ ಎಸ್ಟಿ ಮೋರ್ಚಾ ಉಪಾಧ್ಯಕ್ಷ ಗಂಗರಾಜು, ನಗರಸಭೆ ಸದಸ್ಯ ರಾಮಮೋಹನ್, ಬಿಸಲೇಹಳ್ಳಿ ಜಗದೀಶ್, ಶ್ರೀಕಂಠ ಮೂರ್ತಿ, ಅಶೋಕ್ ಕುಮಾರ್, ಗಂಗಾಧರಪ್ಪ, ರಾಮಯ್ಯ. ಲೋಕೇಶ್, ಕಾರ್ಯದರ್ಶಿ ಪೆಶಾವರ್, ಜಂಟಿ ಆಯುಕ್ತ ಅನಿಲ್ ಕುಮಾರ್, ಎಸಿ ಕೆ.ಆರ್.ನಂದಿನಿ. ತಹಸೀಲ್ದಾರ್ ಬಿ.ಆರತಿ, ಡಿವೈಎಸ್‌ಪಿ ಎಂ. ಕಲ್ಯಾಣ ಕುಮಾರ್ ಇದ್ದರು.

    ಜಿಲ್ಲೆಗೆ 4.59 ಟಿಎಂಸಿ ಬದಲಿಗೆ 6.06 ಟಿಎಂಸಿ ನೀರು ಮಂಜೂರಾಗಿದೆ. ನಿಗದಿತ ಅವಧಿಯಲ್ಲಿ ಕೆಲಸ ಆಗದಿದ್ದರೆ ಸಚಿವರು ಬಿಡಲ್ಲ. ನಾಳೆಯಿಂದ ಕೆಲಸ ಶುರುವಾಗಲಿದ್ದು, ಬಹುಷಃ 18 ತಿಂಗಳಲ್ಲಿ ಕಾಮಗಾರಿ ಮುಕ್ತಾಯಗೊಳ್ಳಲಿದೆ.
    ರಾಕೇಶ್ ಕುಮಾರ್ ನೀರಾವರಿ ಇಲಾಖೆಯ ಪ್ರಧಾನ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts