More

    ಬಿಸಿಲಲ್ಲಿ ಒಣಗೋದಕ್ಕೂ ಕರೊನಾ ತಗಲೋದಕ್ಕೂ ಸಂಬಂಧ ಇದೆ….!

    ನವದೆಹಲಿ: ಕರೊನಾ ವ್ಯಾಪಿಸುವುದನ್ನು ತಡೆಯಲು ಲಾಕ್​ಡೌನ್​ ವಿಧಿಸಿದಾಗ ‘ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ’ ಎನ್ನುವುದು ಮಂತ್ರವಾಗಿತ್ತು. ಈಗಲೂ ಮಕ್ಕಳು ಹಾಗೂ ಹಿರಿಯರು ಹೊರಗೆ ಬಾರದಿರುವುದೇ ಉತ್ತಮ ಎಂದು ಸರ್ಕಾರ ಜಾಗೃತಿ ಮೂಡಿಸುತ್ತಿದೆ.

    ಜನರು ಹೊರಗೆ ಓಡಾಡಿದರೆ ಒಬ್ಬರಿಂದ ಒಬ್ಬರಿಗೆ ರೋಗ ಹರಡುತ್ತೆ, ಸೋಂಕಿಗೆ ಒಳಗಾಗುತ್ತಾರೆ ಎನ್ನುವುದು ಇದರ ಹಿಂದಿನ ಉದ್ದೇಶವಾಗಿತ್ತು. ಜನರು ಹೆಚ್ಚು ಹೊತ್ತು ಬಿಸಿಲಲ್ಲಿದ್ದರೆ ಕರೊನಾ ಸೋಂಕಿಗೆ ಒಳಗಾಗುವ ಸಂಭವ ಹೆಚ್ಚು ಎಂದು ಅಧ್ಯಯನವೊಂದು ತಿಳಿಸಿದೆ.

    ಇದನ್ನೂ ಓದಿ; 80 ವರ್ಷಗಳಲ್ಲಿ ಆಗದ್ದು ಮೂರೇ ತಿಂಗಳಲ್ಲಿ ಸಾಧ್ಯವಾಯ್ತು; ಎಲ್ಲವೂ ಲಾಕ್​ಡೌನ್​ ಮಹಿಮೆ

    ಗಾಳಿಯಲ್ಲಿರುವ ತೇವಾಂಶ ಹಾಗೂ ತಾಪಮಾನ ಕರೊನಾ ಸೋಂಕನ್ನು ತಗ್ಗಿಸುತ್ತವೆ. ಆದರೆ, ಹೆಚ್ಚಿನ ಹೊತ್ತು ಸೂರ್ಯನ ಬಿಸಿಲಿನಲ್ಲಿರುವುದಕ್ಕೂ ಕರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುವುದಕ್ಕೂ ನೇರ ಸಂಬಂಧವಿದೆ ಎಂಬುದನ್ನು ತಜ್ಞರು ಕಂಡುಕೊಂಡಿದ್ದಾರೆ.
    ಕೆನಡಾದ ಮ್ಯಾಕ್ ಮಾಸ್ಟರ್​ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ನಡೆಸಿದ ಈ ಅಧ್ಯಯನ ಜಿಯೋಗ್ರಾಪಿಕಲ್​ ಅನಾಲಿಸಿಸ್​ ಎಂಬ ನಿಯತಕಾಲಿಕದಲ್ಲಿ ಪ್ರಕಟವಾಗಿದೆ.

    ಸದ್ಯ ಆರ್ಥಿಕತೆಯನ್ನು ಹಳಿಗೆ ತರಲು ಎಲ್ಲ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಜತೆಗೆ, ಬೇಸಿಗೆಯಲ್ಲಿ ಇಂಥ ಚಟುವಟಿಕೆಗಳನ್ನು ನಡೆಸಬಹುದೇ ಎಂದು ಹಲವರು ಪ್ರಶ್ನಿಸಿದ್ದಾರೆ. ಹೀಗಾಗಿ ಕರೊನಾ ವ್ಯಾಪಿಸುವುದರ ಮೇಲೆ ವಾತಾವರಣದ ಅಂಶಗಳು ಯಾವ ರೀತಿ ಪ್ರಭಾವ ಬೀರುತ್ತವೆ ಎಂಬುದನ್ನು ಅಧ್ಯಯನ ನಡೆಸಲಾಯಿತು ಎಂದು ಸಂಶೋಧನೆಯ ನೇತೃತ್ವ ವಹಿಸಿದ್ದ ಅಂಟೋನಿಯಾ ಫೇಜ್​ ಹೇಳಿದ್ದಾರೆ.

    ಇದನ್ನೂ ಓದಿ; ಕರೊನಾದಿಂದ ಕಾಪಾಡುತ್ತಿರುವ ಔಷಧಗಳಿವು; ಬೆಲೆ ಕೇಳಿದರೆ ತಲೆ ತಿರುಗುತ್ತೆ…!

    ವಾತಾವರಣದಲ್ಲಿನ ತೇವಾಂಶ ಹಾಗೂ ತಾಪಮಾನ ಶೇ.1 ಹೆಚ್ಚಾದಾಗ ಕೋವಿಡ್​ ಪ್ರಕರಣಗಳ ಸಂಖ್ಯೆಯಲ್ಲಿ ಶೇ.3 ಇಳಿಮುಖವಾಗಿದೆ. ಅದರೆ, ಹೆಚ್ಚಿನ ಅವಧಿಯಲ್ಲಿ ಸೂರ್ಯನ ಶಾಖಕ್ಕೆ ಗುರಿಯಾಗುವವರಲ್ಲಿ ಕರೊನಾ ಸೋಂಕು ಕಂಡುಬರುವ ಪ್ರಮಾಣ ಹೆಚ್ಚಾಗಿದೆ ಎಂದು ಅಧ್ಯಯನದಲ್ಲಿ ಕಂಡು ಬಂದಿದೆ.

    ಖಾಲಿ ಕ್ರೀಡಾಂಗಣಗಳಲ್ಲಿ ನಡೆಯಲಿದೆ ಐಪಿಎಲ್​; ರಾಜ್ಯ ಕ್ರಿಕೆಟ್​ ಮಂಡಳಿಗಳಿಗೆ ಗಂಗೂಲಿ ಪತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts