More

    ಗುಜರಾತ್​ನಲ್ಲಿ ತೂಗುಸೇತುವೆ ಕುಸಿತ: 100ಕ್ಕೂ ಹೆಚ್ಚು ಮಂದಿ ದುರ್ಮರಣ, ಹಲವರ ಸ್ಥಿತಿ ಗಂಭೀರ

    ಅಹಮದಾಬಾದ್​: ಗುಜರಾತ್​ನಲ್ಲಿ ಭಾನುವಾರ ಸಂಜೆ ಸಂಭವಿಸಿದ ತೂಗುಸೇತುವೆ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 100 ದಾಟಿದೆ. ಸಾವಿಗೀಡಾದವರಲ್ಲಿ 30 ಮಕ್ಕಳು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

    ಮೊಬಿರ್ ಜಿಲ್ಲೆಯ ಮಚ್ಚು ನದಿಗೆ ನಿರ್ಮಿಸಲಾಗಿದ್ದ ತೂಗುಸೇತುವೆ ಮೇಲೆ ಛತ್​ ಪೂಜೆಯ ನಿಮಿತ್ತ ಕೆಲವು ವಿಧಿವಿಧಾನಗಳನ್ನು ನೆರವೇರಿಸಲು ನದಿ ತೀರದಲ್ಲಿ ಜಮಾಯಿಸಿದ್ದರು. ಭಾನುವಾರ ಸಂಜೆ 6.30ರಲ್ಲಿ ಪ್ರವಾಸಿಗರು ಸೇರಿ 500ಕ್ಕೂ ಅಧಿಕ ಮಂದಿ ಸೇತುವೆ ಮೇಲೆ ನಿಂತಿದ್ದರು. ಆಗ ಸೇತುವೆ ಕುಸಿದಿದ್ದು, 100ಕ್ಕೂ ಹೆಚ್ಚು ಮಂದಿ ಜಲಸಮಾಧಿಯಾಗಿದ್ದಾರೆ. ಆರಂಭದಲ್ಲಿ ಸಾವಿನ ಸಂಖ್ಯೆ 30 ಎಂದು ಅಂದಾಜಿಸಲಾಗಿತ್ತು. ಸೋಮವಾರ ಬೆಳಗಿನಜಾವ ಬಂದ ವರದಿ ಪ್ರಕಾರ 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಕೆಲವರು ಈಜಿ ದಡ ಸೇರಿದ್ದಾರೆ, ಕಾರ್ಯಾಚರಣೆ ನಡೆಸಿ 117 ಮಂದಿಯನ್ನು ರಕ್ಷಿಸಲಾಗಿದ್ದು, 19 ಮಂದಿ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ ನಾಪತ್ತೆಯಾದ .ಹಲವರಿಗಾಗಿ ಶೋಧಕಾರ್ಯ ನಡೆಯುತ್ತಿದೆ.

    230 ಮೀಟರ್​ ಉದ್ದದ ಈ ತೂಗು ಸೇತುವೆ 140 ವರ್ಷಗಳ ಹಿಂದೆ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿತ್ತು. ಸೇತುವೆ ನಿರ್ಮಾಣಕ್ಕಾಗಿ ಬಳಸಿದ ಎಲ್ಲ ವಸ್ತುಗಳನ್ನು ಇಂಗ್ಲೆಂಡ್​ನಿಂದ ತರಿಸಲಾಗಿತ್ತು. 1879 ಫೆಬ್ರವರಿ 20ರಂದು ಅಂದಿನ ಮುಂಬೈ ಗವರ್ನರ್​ ರಿಚರ್ಡ್​ ಟೆಂಪಲ್​ ಉದ್ಘಾಟಿಸಿದ್ದರು. ಇದನ್ನು ಜುಲ್ಫೋ ಫೂಲ್​ ಎಂದು ಕರೆಯುತ್ತಿದ್ದರು. ಈ ಸೇತುವೆಯು ಮಹಾಪ್ರಭುಜಿಯನ್ನು ಸಮಕಾಂತ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುತಿತ್ತು. 2001ರ ಭೂಕಂಪದಲ್ಲಿ ಸೇತುವೆಗೆ ತೀವ್ರ ಹಾನಿಯಾಗಿತ್ತು. ಅಂದಾಜು 2 ಕೋಟಿ ರೂ. ವೆಚ್ಚದಲ್ಲಿ ಇತ್ತೀಚೆಗಷ್ಟೇ ನವೀಕರಣ ಮಾಡಿದ್ದ ಈ ಸೇತುವೆ ಮರು ಉದ್ಘಾಟನೆಯಾದ 5 ದಿನಕ್ಕೆ ಕುಸಿದಿದೆ.

    ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯಾಗಿದ್ದ ವೇಳೆ ಪುತ್ತೂರಿನ ದಿವಿತ್​ ರೈ ರಚಿಸಿದ್ದ ಕವನ ಈಗ 8ನೇ ತರಗತಿ ಪಠ್ಯಕ್ಕೆ ಸೇರ್ಪಡೆ

    ಸರ್ಕಾರಿ ಮಹಿಳಾ ನಿಲಯದ ಹುಡುಗಿಯ ಕೈಹಿಡಿದ ದಾವಣಗೆರೆ ಯುವಕ! ಶಾಸ್ತ್ರೋಕ್ತವಾಗಿ ಮದ್ವೆ ನಡೆಸಿಕೊಟ್ಟ ಅಧಿಕಾರಿಗಳು- ಶಾಸಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts