More

    ತೋಂಟದ ಶ್ರೀಗಳ 71ನೇ ಭಾವೈಕ್ಯತೆ ದಿನಾಚರಣೆ

    ಮೋರಟಗಿ: ತ್ರಿವಿಧ ದಾಸೋಹಿ ಲಿಂ.ಡಾ.ತೋಟದ ಸಿದ್ಧಲಿಂಗ ಸ್ವಾಮಿಗಳು ಪ್ರಮುಖ ಚಿಂತನೆಗಳಿಂದ ಹೆಸರುವಾಸಿಯಾಗಿದ್ದರು. ಕನ್ನಡಕ್ಕೆ ಅಗ್ರಸ್ಥಾನ ದೊರಕಿಸಲು ಗೋಕಾಕ ಚಳುವಳಿಯಲ್ಲಿ ಶ್ರಮಿಸಿದರು ಎಂದು ಗ್ರಾಮದ ಮುಖಂಡ ನಿಂಗನಗೌಡ ಪಾಟೀಲ ಹೇಳಿದರು.

    ಗ್ರಾಮದ ಸಿಂದಗಿ ಶಾಂತವೀರ ಪಟ್ಟಾಧ್ಯಕ್ಷರ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ತೋಂಟದ ಸಿದ್ಧಲಿಂಗೇಶ್ವರ ಶ್ರೀಗಳ 71ನೇ ಭಾವೈಕ್ಯತೆ ದಿನಾಚರಣೆ ನಿಮಿತ್ತ ಇತ್ತೀಚೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಡಂಬಳಕ್ಕೆ ಹೊಂದಿರುವ 80 ಸಾವಿರ ಎಕರೆ ಪ್ರದೇಶ ಕಪ್ಪತಗುಟ್ಟವನ್ನು ಹೋರಾಟದ ಮೂಲಕ ಗಣಿಗಾರಿಕೆಯಿಂದ ರಕ್ಷಿಸಿದ ಕೀರ್ತಿ ಶ್ರೀಗಳಿಗೆ ಸಲ್ಲುತ್ತದೆ ಎಂದವರು ಹೇಳಿದರು.

    ಕೃಷಿ, ಶಿಕ್ಷಣ, ಪರಿಸರ, ನಾಡು, ನುಡಿ, ಗಡಿ ಮುಂತಾದ ಕ್ಷೇತ್ರಗಳಲ್ಲಿ ಅಪಾರ ಜ್ಞಾನ ಹೊಂದಿದ ಅವರು ಬಹುಮುಖ ವ್ಯಕ್ತಿತ್ವ ಗುರತಿಸಿ ಗೌರವ ಡಾಕ್ಟರೇಟ್, ಭಾವೈಕ್ಯತೆಗಾಗಿ ರಾಜೋತ್ಸವ ಪ್ರಶಸ್ತಿ, ಕೇಂದ್ರ ಸರ್ಕಾರದ ಕೋಮುಸೌಹಾರ್ದತಾ ಹಾಗೂ ದೇಶದ ಏಕತಾ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಶ್ರೀಗಳು ಭಾಜನರಾಗಿದ್ದರು ಎಂದರು.

    ಶ್ರೀಗಳ ಸವಿನೆನಪಿಗಾಗಿ ಅನಾಥ ಮಕ್ಕಳಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ಕೈಗಾರಿಕಾ ತರಬೇತಿ ಕಾಲೇಜಿನ ಪ್ರಾಚಾರ್ಯ ಎಂ.ಸಿ. ಸಿಂದಗಿ, ಅಮ್ಮಣ್ಣ ಯಂಕಂಚಿ, ಆರ್.ಕೆ. ಪತ್ತಾರ ಮತ್ತಿತರರು ಮಾತನಾಡಿದರು. ಜಿಪಂ ಮಾಜಿ ಸದಸ್ಯ ನರಸಿಂಗಪ್ರಸಾದ ತಿವಾರಿ, ಮೈಬೂಬಸಾಬ ಕಣ್ಣಿ, ಮತ್ತಪ್ಪ ಸಿಂಗೆ, ಬೂತಾಳಿ ವಸ್ತಾರಿ, ಈರಣ್ಣ ಅರಕೇರಿ, ಸಿದ್ದು ಶೀಲವಂತ, ಸುರೇಶ ಬಮ್ಮಣ್ಣಿ, ಅಣ್ಣಾರಾಯ ಲಾಳಸಂಗಿ, ಈರಯ್ಯ ಗಣಾಚಾರಿ, ಚಿದಾನಂದ ಕುಂಬಾರ, ಶಿವಶಂಕರ ಚೌದರಿ, ಗುರುಸಂಗಪ್ಪ ಕತ್ತಿ, ರಾಜಶೇಖರ ಯಕ್ಕುಂಡಿ, ಮಹೇಶ ಸಿಂಗಾಡಿ, ಸಿದ್ದನಗೌಡ ಪಾಟೀಲ, ಪ್ರಶಾಂತ ಕೋರಿ, ಸಂಗಮೇಶ ಅಂಗಡಿ, ಸಂಗಮನಾಥ ಪಟ್ಟಣಶೆಟ್ಟಿ, ಶಿವಣ್ಣ ಮದರಿ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts